ನವದೆಹಲಿ: ಉತ್ತರಪ್ರದೇಶದ ಎರಡು ನಗರಗಳಾದ ನೊಯ್ಡಾ ಮತ್ತು ಗ್ರೇಟರ್ ನೋಯ್ಡಾಗಳನ್ನು ವಿಶ್ವಸಂಸ್ಥೆ ತನ್ನ ಜಾಗತಿಕ ಸುಸ್ಥಿರ ನಗರಗಳು 2025ರ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿದೆ.
ಗೌತಮ್ ಬುದ್ಧ ನಗರದಲ್ಲಿನ ಈ ಎರಡು ಅವಳಿ ನಗರಗಳನ್ನು ಯೂನಿವರ್ಸಿಟಿ ಕೆಟಗರಿಯಲ್ಲಿ ಆಯ್ಕೆ ಮಾಡಲಾಗಿದೆ. ಉಳಿದಂತೆ ಮುಂಬಯಿ ಮತ್ತು ಬೆಂಗಳೂರು ನಗರಗಳನ್ನು ಆಹ್ವಾನಿಸಲಾಗಿದೆ ಎಂದು ವಿಶ್ವ ಸಂಸ್ಥೆ ಹೇಳಿದೆ.
ಒಟ್ಟು 5 ಕೆಟಗರಿಗಳಲ್ಲಿ ಜಗತ್ತಿನ 25 ನಗರಗಳನ್ನು ವಿಶ್ವ ಸಂಸ್ಥೆ ಜಾಗತಿಕ ಸುಸ್ಥಿರ ಅಭಿವೃದ್ಧಿ ಗುರಿ ನಗರಗಳು ಕಾಯ೯ಕ್ರಮಕ್ಕೆ ಆಯ್ಕೆಯಾಗಿವೆ ಎಂದು ಯುಎನ್ ಗ್ಲೋಬಲ್ ಸಸ್ಟೇನೆಬಿಲಿಟಿ ಇಂಡೆಕ್ಸ್ ಇನ್ಸ್ಟಿಟ್ಯೂಟ್ನ ಸಿಇಒ ರೊಲಂಡ್ ಸ್ಕಟ್ಝ್ ಹೇಳಿದ್ದಾರೆ.
ಗೌತಮ್ ಬುದ್ಧ ನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಅವರು ನೋಯ್ಡಾ, ಗ್ರೇಟರ್ ನೋಯ್ಡಾದ ಆಯ್ಕೆಯ ಅಧಿಕೃತ ಆಹ್ವಾನವನ್ನು ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.