ನವದೆಹಲಿ: ದಿನದಿಂದ ದಿನಕ್ಕೆ ರೈಲ್ವೇ ಹೆಚ್ಚು ಜನಸ್ನೇಹಿಗೊಳ್ಳುತ್ತಿದೆ. ಪ್ರಯಾಣಿಕರಿಗೆ ಅಗತ್ಯವಿರುವ ಸೇವೆ ಹಾಗೂ ಮಾಹಿತಿಗಳನ್ನು ನೀಡುವ ಉದ್ದೇಶದೊಂದಿಗೆ ಐಆರ್ಸಿಟಿಸಿ ’ಆಸ್ಕ್ ದಿಶಾ’ ಎಂಬ ನೂತನ ತಂತ್ರಾಂಶವನ್ನು ಬಿಡುಗಡೆಗೊಳಿಸಿದೆ.
‘ಆಸ್ಕ್ ದಿಶಾ’ ಆರ್ಟಿಫಿಶೀಯಲ್ ಇಂಟೆಲಿಜೆನ್ಸ್ ಆಧಾರಿತ ಚಾಟ್ಬೊಟ್ ಆಗಿದೆ. ಇದನ್ನು ಬಳಸಿಕೊಂಡು ಪ್ರಯಾಣಿಕರು ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಬಹುದು, ಪ್ರಯಾಣಿಕರಿಗೆ ಉತ್ತರಿಸುವ ಮತ್ತು ಪರಿಹಾರ ನೀಡುವ ಕಾರ್ಯವನ್ನು ರೈಲ್ವೇ ಮಾಡಲಿದೆ.
ರೈಲು ಟಿಕೆಟ್ ಬುಕ್ಕಿಂಗ್, ಪಿಎನ್ಆರ್ ಸ್ಟೇಟಸ್, ಐಆರ್ಸಿಟಿಸಿಯಲ್ಲಿನ ವಾಲ್ಯೂ ಆಡೆಡ್ ಸರ್ವಿಸ್-ಹೀಗೆ ಎಲ್ಲದರ ಬಗ್ಗೆಯೂ ದಿಶಾ ಚಾಟ್ಬೋಟ್ ಕಾಳಜಿ ವಹಿಸಲಿದೆ, ಇದರ ಸರಳ ಸಂವಾದ ವಿಧಾನ ಪ್ರಯಾಣಿಕರ ಸಣ್ಣಪುಟ್ಟ ಕೋರಿಕೆಗಳನ್ನು ಪರಿಹರಿಸಲಿದೆ.
ಬುಕ್ಕಿಂಗ್ ಪ್ರಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದ ಪರಿಶೀಲನೆಗಳನ್ನು ಹೆಚ್ಚು ಸರಳಗೊಳಿಸುವ ಸಲುವಾಗಿ ದಿಶಾ ಬಹುತೇಕ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲಿದೆ.
source; Republic.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.