ಕಾಸರಗೋಡು : ಕರ್ನಾಟಕದಿಂದ ಅಕ್ರಮವಾಗಿ ಕೇರಳಕ್ಕೆ ಗೋಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಕರ್ನಾಟಕದ ಕೆಲವು ಯುವಕರು ವಿಚಾರಣೆ ನಡೆಸಿದ ಘಟನೆಯನ್ನು ತಿರುಚಿ ಕೇರಳದ ಗಡಿಭಾಗದ ಹಿಂದೂ ಸಂಘಟನೆಯ ಯುವಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಪೋಲೀಸರಿಂದ ಬಂಧನ ಮಾಡಿಸುವ ಷಡ್ಯಂತ್ರದ ವಿರುದ್ಧ ಕಾಸರಗೋಡು ಜಿಲ್ಲೆಯ ಪೈವಳಿಕೆಯ ಬೆರಿಪದವು ಪರಿಸರದಲ್ಲಿ “ಜನ ಜಾಗೃತಿ ಸಭೆ” ನಡೆಯಿತು.
ಈ ಸಂದರ್ಭದಲ್ಲಿ ಮಾತಾನಾಡಿದ ಭಜರಂಗದಳದ ಪ್ರಾಂತ ಸಹ ಸಂಚಾಲಕರಾದ ಮುರಳೀಕೃಷ್ಣ ಹಂಸತ್ತಡ್ಕ ವಿಹಿಂಪ ಮತ್ತು ಭಜರಂಗದಳ ಹಿಂದುಗಳ ರಕ್ಷಣೆಗೆ ಕಟಿಬದ್ಧವಾಗಿದೆ.ನಮ್ಮ ಮಾತೃ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ ನಮಗೆ ನಿರಂತರ ಪ್ರೇರಣೆ. ನಮ್ಮ ರಕ್ಷಣೆಗಾಗಿ ನಾವು ಸಂಘಟಿತರಾಗಬೇಕು. ನಮ್ಮ ಮಾತೃಶಕ್ತಿ ಜಾಗೃತವಾದರೆ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ. ನಮ್ಮ ಪ್ರತಿ ಮನೆಯಲ್ಲೂ ಶಿವಾಜಿ ಹಾಗೂ ಸಾವರ್ಕರ್ ರಂತ ವೀರರು ನಿರ್ಮಾಣವಾಗಬೇಕು. ಆಗ ನಮ್ಮ ಮೇಲೆ ಯಾವ ಆಕ್ರಮಣ ಆಗಲಾರದು ಎಂದು ಅಭಿಪ್ರಾಯಪಟ್ಟರು.
ನಂತರ ಮಾತನಾಡಿದ ಭಾಜಪದ ಕಾಸರಗೋಡು ಜಿಲ್ಲಾಧ್ಯಕ್ಷರಾದ ಎಡ್ವಕೇಟ್ ಶ್ರೀಕಾಂತ್ ಕೇರಳವು ಭಾರತದ್ದೇ ಒಂದು ಭಾಗವಾಗಿದೆ. ಇಲ್ಲಿನ ಕೊನೆಯ ಹಿಂದುವಿನ ಉಸಿರುವವರೆಗೂ ಇದನ್ನು ಪಾಕಿಸ್ಥಾನ ಆಗಲು ಬಿಡಲಾರೆವು ಎಂದರು. ಹಿಂದು ಯುವಕರ ಮೇಲೆ ಸುಳ್ಳು ಕೇಸು ದಾಖಲಿಸುವ ಮೂಲಕ ಕಮ್ಯುನಿಸ್ಟ್ ಹಾಗೂ ಮುಸ್ಲಿಂ ಲೀಗ್ ಇಲ್ಲಿ ಭಯದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಆದರೆ ಹಿಂದೂ ಸಮಾಜ ಯಾವ ಕಾರಣಕ್ಕೂ ಹೆದರಬೇಕಾಗಿಲ್ಲ. ಸಂಘಟಿತರಾಗಿ ಇದ್ದು ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ನಾವು ಸಶಕ್ತರಾಗಿದ್ದೇವೆ ಎಂದರು. ಕಮ್ಯುನಿಸ್ಟ್ ಸರಕಾರ ಆಡಳಿತದಲ್ಲಿದ್ದರೂ ತನ್ನ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ SFI ನ ಅಭಿಮನ್ಯು ಎನ್ನುವ ಯುವಕನನ್ನು SDPI ನ ಕ್ಯಾಂಪಸ್ ಪ್ರಂಟ್ ನ ಮುಸಲ್ಮಾನರಿಂದ ಕೊಲೆಯಾದಾಗ, ಅಭಿಮನ್ಯು ಮನೆಗೆ ಭೇಟಿ ನೀಡದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದ ಪಂಚಾಯತ್ ಒಂದರಲ್ಲಿ ಅಧಿಕಾರಕ್ಕಾಗಿ ಅದೇ SDPI ಜೊತೆ ಸೇರಿ ಸರಕಾರ ರಚಿಸುವ ಮೂಲಕ ತನ್ನ ಪಕ್ಷದ ಕಾರ್ಯಕರ್ತರ ಜೀವಕ್ಕೆ ಬೆಲೆ ಕೊಡದೆ ಅಧಿಕಾರಕ್ಕೆ ಅಂಟಿಕೊಂಡಿರುವುದು ನಾಚಿಕೆಯ ಸಂಗತಿಯಾಗಿದೆ. ತೊಂಬತ್ತರ ದಶಕದಲ್ಲಿ ಕೇರಳ ಭಯೋತ್ಪಾದಕರ ಅಡಗುದಾಣ ಆಗಿದೆ ಎಂದು ಭಾಜಪದ ಕೆ ಜಿ ಮಾರಾರ್ ಹೇಳಿರುವುದು ಇಂದಿಗೆ ಸತ್ಯ ಎಂಬುದು ಎಲ್ಲರೂ ಒಪ್ಪುವಂತಾಗಿದೆ. ಸಂಘಟಿತವಾಗಿದ್ದು ಎಲ್ಲಾ ಆಕ್ರಮಣವನ್ನು ಎದುರಿಸಲು ಸಂಕಲ್ಪ ತೊಡೋಣ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಹಿಂಪದ ಜಿಲ್ಲಾ ಅಧ್ಯಕ್ಷರಾದ ಶ್ರೀ ಅಂಗಾರ ಶ್ರೀಪಾದ, ವಿಹಿಂಪದ ಜಿಲ್ಲಾ ಕಾರ್ಯದರ್ಶಿ ಶ್ರೀ ಉಳುವಾನ ಶಂಕರ ಭಟ್, ವಿಹಿಂಪದ ಜಿಲ್ಲಾ ಉಪಾಧ್ಯಕ್ಷರಾದ ಅರಿಬೈಲು ಗೋಪಾಲ ಶೆಟ್ಟಿ, ವಿಹಿಂಪದ ಪೈವಳಿಕೆ ಪಂಚಾಯತ್ ಅಧ್ಯಕ್ಷರಾದ ಶ್ರೀ ಮೋಹನ ಬಲ್ಲಾಳ್, ಭಜರಂಗದಳದ ಶ್ರೀ ಸುರೇಶ್ ಶೆಟ್ಟಿ ಪರಂಕಿಲ, ಭಾಜಪದ ನಾಯಕರಾದ ಹರಿಶ್ಚಂದ್ರ ಮಂಜೇಶ್ವರ, ಶ್ರೀ ಎಕೆ ಕೈಯಾರು, ಸರೋಜ ಆರ್ ಬಲ್ಲಾಳ್, ಶ್ರೀ ಸುಬ್ರಹ್ಮಣ್ಯ ಭಟ್, ಶ್ರೀ ಸದಾಶಿವ ಚೇರಾಲು,ಶ್ರೀ ಸುಂದರ ಶೆಟ್ಟಿ ಕಳಾಯಿ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.