ನವದೆಹಲಿ: ಭಾರತ ಎರಡು ವರ್ಷಗಳ ಅವಧಿಗೆ ಏಷ್ಯಾ ಪೆಸಿಫಿಕ್ ರೀಜನ್ನ ವರ್ಲ್ಡ್ ಕಸ್ಟಮ್ಸ್ ಆಗ್ನೈಝೇಶನ್(ಡಬ್ಲ್ಯೂಸಿಓ)ನ ಪ್ರಾದೇಶಿಕ ಮುಖ್ಯಸ್ಥನಾಗಿ ಆಯ್ಕೆಯಾಗಿದೆ. ಜುಲೈ 2018ರಿಂದ 2020ರ ಜೂನ್ವರೆಗೆ ಅಧಿಕಾರವಧಿ ಇರಲಿದೆ.
WCOನ ಸದಸ್ಯತ್ವವನ್ನು ಆರು ಪ್ರದೇಶಗಳಿಗೆ ವಿಭಜನೆಗೊಳಿಸಿದ್ದು, ಪ್ರತಿ ಪ್ರದೇಶಗಳಿಗೆ ಪ್ರಾದೇಶಿಕ ಮುಖ್ಯಸ್ಥನನ್ನು ಆಯ್ಕೆ ಮಾಡಲಾಗಿದೆ. ಭಾರತ ಪ್ರಾದೇಶಿಕ ಮುಖ್ಯಸ್ಥನಾಗಿರುವುದರಿಂದ ಡಬ್ಲ್ಯೂಸಿಒಯಲ್ಲಿ ನಾಯಕತ್ವದ ಪಾತ್ರವನ್ನು ನಿಭಾಯಿಸಲಿದೆ.
ಪ್ರಾದೇಶಿಕ ಮುಖ್ಯಸ್ಥ ಸ್ಥಾನ ಪಡೆದಿರುವ ಸಂಕೇತವಾಗಿ ನವದೆಹಲಿಯಲ್ಲಿ ಜುಲೈ 16ರಂದು ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ)ನ ಸಹಭಾಗಿತ್ವದಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆನ್ಸ್ ಟ್ಯಾಕ್ಸಸ್ ಆಂಡ್ ಕಸ್ಟಮ್ಸ್ ಸಮಾರಂಭ ಆಯೋಜನೆಗೊಳಿಸಿದೆ. ಏಷ್ಯಾ ಪೆಸಿಫಿಕ್ನ 33 ದೇಶಗಳ ಕಸ್ಟಮ್ಸ್ ನಿಯೋಗ ಇದರಲ್ಲಿ ಭಾಗಿಯಾಗಲಿದೆ.
ಡಬ್ಲ್ಯೂಸಿಒದ ಪ್ರಧಾನ ಕಾರ್ಯದರ್ಶಿ ಕುನಿಯೊ ಮಿಕುರಿಯಾ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಜಪಾನ್, ಫಿಜಿಯ ಮುಖ್ಯಸ್ಥರು, ಕೊರಿಯಾ, ಸಿಂಗಾಪುರ, ಚೀನಾದ ಅಧಿಕಾರಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.