ಅನಿವಾರ್ಯತೆಯೇ ಆವಿಷ್ಕಾರದ ಮೂಲ ಎಂಬ ಮಾತಿದೆ. ಅದು ಅಮೆಜಾನ್ನ ಈ ಡೆಲಿವರಿ ಬಾಯ್ ವಿಷಯದಲ್ಲಿ ಅಕ್ಷರಶಃ ಸತ್ಯವಾಗಿದೆ. ಹಣದ ಅನಿವಾರ್ಯತೆ ಈತನನ್ನು ಇಂದು ಯಶಸ್ವಿ ಟೀ ಪೂರೈಕೆದಾರನನ್ನಾಗಿ ಮಾಡಿದೆ. ಆತನ ಹೊಸ ವಿಧಾನದ ಸ್ಟಾರ್ಟ್ಅಪ್ಗೆ ಎಲ್ಲರೂ ಫಿದಾ ಆಗಿದ್ದಾರೆ.
ಜೈಪುರದ ರಘುವೀರ್ ಸಿಂಗ್ ಚೌಧುರಿ ಬಡ ಕುಟುಂಬದಿಂದ ಬಂದವನು. ಹಣವಿಲ್ಲದ ಕಾರಣ ವಿದ್ಯಾಭ್ಯಾಸವನ್ನು ಅರ್ಥಕ್ಕೆ ಮೊಟಕುಗೊಳಿಸಿದ್ದಾನೆ. 19ನೇ ವಯಸ್ಸಿನಲ್ಲಿ ಆಮೆಜಾನ್ ಡೆಲಿವರಿ ಬಾಯ್ ಆಗಿ ತಿಂಗಳಿಗೆ ರೂ.9 ಸಾವಿರ ವೇತನ ಪಡೆಯುತ್ತಿದ್ದ. ಆದರೆ ಆತನಿಗೆ ಇದು ಸಾಕಾಗುತ್ತಿರಲಿಲ್ಲ. ಹಣದ ಅನಿವಾರ್ಯತೆ ಆತನನ್ನು ಹೊಸದಾಗಿ ಚಿಂತಿಸುವಂತೆ ಮಾಡಿತು.
ಪದೇ ಪದೇ ಟೀ ಕುಡಿಯುವ ಹವ್ಯಾಸ ಹೊಂದಿದ್ದ ಆತನಿಗೆ, ನನ್ನಂತೆ ಇನ್ನೂ ಅನೆಕರಿಗೆ ಇದೇ ರೀತಿಯ ಹವ್ಯಾಸ ಇರಬಹುದಲ್ಲವೇ ಎಂದು ಆಲೋಚಿಸಿದ. ತಕ್ಷಣವೇ ಟೀ ಡೆಲಿವರಿ ಮಾಡುವ ಐಡಿಯಾ ಆತನಿಗೆ ಹೊಳೆಯಿತು. ತನ್ನ ಇಬ್ಬರು ಮೂವರು ಸ್ನೇಹಿತರ ಜೊತೆ ಚರ್ಚಿಸಿ ಇಂತಹದೊಂದು ಯೋಜನೆ ಆರಂಭಿಸಿಯೇ ಬಿಟ್ಟ. ಇದಕ್ಕಾಗಿ ಸುಮಾರು 100 ಟೀ ವ್ಯಾಪಾರಿಗಳೊಂದಿಗೆ ಕೈಜೋಡಿಸಿದ.
ಇಂದು ಈ ಹುಡುಗರ ತಂಡ ಅಗತ್ಯವುಳ್ಳವರು ಕರೆ, ಎಸ್ಎಂಎಸ್, ವಾಟ್ಸಾಪ್ ಮೂಲಕ ಟೀ ಆರ್ಡರ್ ಮಾಡಿದರೆ, ಕೇವಲ 15 ನಿಮಿಷದಲ್ಲಿ ಕೊಂಡು ಹೋಗಿ ಬಿಸಿ ಟೀ ತಲುಪಿಸುತ್ತದೆ. ಟೀ ಬೆಲೆ ಕೇವಲ ರೂ.೫ ಮಾತ್ರ.
ಪ್ರಸ್ತುತ 4 ಟೀ ಡೆಲಿವರಿ ವ್ಯವಸ್ಥೆ ಈತನ ಬಳಿಯಿದ್ದು, ಲಕ್ಷಾಂತರ ಆದಾಯ ಗಳಿಸುತ್ತಾನೆ. ದೊಡ್ಡ ದೊಡ್ಡ ಗಣ್ಯರೂ ಈತನ ಬಳಿ ಟೀಗೆ ಆರ್ಡರ್ ಮಾಡುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.