ನವದೆಹಲಿ: ಹೆಚ್ಚು ಮಹಿಳಾ ಸದಸ್ಯರನ್ನು ಒಳಗೊಂಡ ಸರ್ಕಾರಗಳಲ್ಲಿ ಭ್ರಷ್ಟಾಚಾರ ಕಡಿಮೆ ಇದೆ ಎಂಬುದಾಗಿ ಅಂತಾರಾಷ್ಟ್ರೀಯ ಅಧ್ಯಯನವೊಂದು ತಿಳಿಸಿದೆ. 125 ದೇಶಗಳ ಅಂಕಿಅಂಶಗಳನ್ನು ವಿಶ್ಲೇಷಿಸಿ ಈ ಅಧ್ಯಯನವನ್ನು ನಡೆಸಲಾಗಿದೆ.
ಜರ್ನಲ್ಸ್ ಆಫ್ ಎಕನಾಮಿಕ್ ಬಿಹೇವಿಯರ್ ಆಂಡ್ ಆರ್ಗನೈಝೇಶನ್ನಲ್ಲಿ ಅಧ್ಯಯನದ ವರದಿ ಪ್ರಕಟಗೊಂಡಿದ್ದು, ಭ್ರಷ್ಟಾಚಾರವನ್ನು ಕಡಿಮೆಗೊಳಿಸಲು ಸ್ಥಳಿಯ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಅಗತ್ಯ ಎಂಬುದನ್ನು ಸಾರಿದೆ.
‘ಮಹಿಳಾ ಸಬಲೀಕರಣ, ನಾಯಕತ್ವ ಪಾತ್ರಗಳಲ್ಲಿ ಮಹಿಳಾ ಅಸ್ತಿತ್ವ, ಸರ್ಕಾರದಲ್ಲಿ ಅವರ ಪ್ರತಿನಿಧಿತ್ವಗಳು ಅತೀ ಮುಖ್ಯವಾಗಿ ಬೇಕಾಗಿದೆ’ ಎಂದು ಅಧ್ಯಯನದಲ್ಲಿ ಪಾಲ್ಗೊಂಡ ಭಾರತೀಯ ಸಂಜಾತ, ವರ್ಜಿನಿಯಾ ಟೆಕ್ನ ಎಕನಾಮಿಕ್ಸ್ ಪ್ರೊಫೆಸರ್ ಸುದೀಪ್ತಾ ಸಾರಂಗಿ ಅಭಿಪ್ರಾಯಿಸಿದ್ದಾರೆ.
ಮಹಿಳೆಯ ಸಾಮಾಜಿಕ ಸ್ಥಾನಮಾನಗಳು ಏರಿಕೆಯಾದರೆ ಸಮಾಜದಲ್ಲಿ ಭ್ರಷ್ಟಾಚಾರ ಮತ್ತು ಲಿಂಗ ತಾರತಮ್ಯ ಕೊನೆಗಾಣಲಿದೆ ಎಂದು ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.