News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ನಿವಾರ್’ ಬಳಿಕ ಬಂಗಾಳಕೊಲ್ಲಿಯಲ್ಲಿ ‘ಬುರೇವಿ’ ಚಂಡಮಾರುತ: ದಕ್ಷಿಣ ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ

ನವದೆಹಲಿ: ಬಂಗಾಳಕೊಲ್ಲಿಯ‌ಲ್ಲಿ ಚಂಡಮಾರುತ‌ದ ತೀವ್ರತೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಡಿ. 2-3 ರಂದು ದೇಶದ ದಕ್ಷಿಣ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ತಮಿಳುನಾಡು, ಪುದುಚೇರಿ, ಕೇರಳ, ಆಂಧ್ರ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ...

Read More

2020 ರ ನವೆಂಬರ್‌ನಲ್ಲಿ 1,04,963 ಕೋಟಿ ರೂ. ಜಿಎಸ್‌ಟಿ ಸಂಗ್ರಹ

ನವದೆಹಲಿ : 2020 ರ ನವೆಂಬರ್ ತಿಂಗಳಲ್ಲಿ ಒಟ್ಟಾರೆಯಾಗಿ 1,04,963 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರ ಜಿಎಸ್‌ಟಿ 19,189 ಕೋಟಿ ರೂ., ರಾಜ್ಯ ಜಿಎಸ್‌ಟಿ 25,540 ಕೋಟಿ ರೂ., ಐಜಿಎಸ್‌ಟಿ 51,992 ಕೋಟಿ...

Read More

126 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತೀಯನಿಗೊಲಿದ ಬಾಟಾ ಸಂಸ್ಥೆಯ ಸಿಇಒ ಪಟ್ಟ

ನವದೆಹಲಿ: ವಿಶ್ವ ವಿಖ್ಯಾತ ಶೂ ತಯಾರಿಕಾ ಕಂಪೆನಿ ಗ್ಲೋಬಲ್ ಬಾಟಾ, ತನ್ನ 126 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಭಾರತೀಯರೋರ್ವರನ್ನು ಸಂಸ್ಥೆಯ ಸಿಇಒ ಸ್ಥಾನಕ್ಕೆ ಆಯ್ಕೆ ಮಾಡಿದೆ. ಭಾರತದ ಸಂದೀಪ್ ಕಟಾರಿಯಾ ಅವರನ್ನು ಸಂಸ್ಥೆಯ ಸಿಇಒ ಆಗಿ ನೇಮಕ ಮಾಡಿದೆ....

Read More

ದೇಶದ ಆಂತರಿಕ ವಿಚಾರಗಳಿಗೆ ಸಂಬಂಧಿಸಿದಂತೆ ಕೆನಡಾದ ಪ್ರಧಾನಿ ಹೇಳಿಕೆ ಸರಿಯಲ್ಲ: ಅನುರಾಗ್ ಶ್ರೀವಾಸ್ತವ್

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಸಂಬಂಧಿಸಿದಂತೆ ಹೇಳಿಕೆಯನ್ನು ನೀಡಿರುವ ಕೆನಡಾದ ಪ್ರಧಾನಿಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಭಾರತದ ರೈತರಿಗೆ ಸಂಬಂಧಿಸಿದಂತೆ ಕೆನಡಾ ದೇಶದ ನಾಯಕರ ಪ್ರತಿಕ್ರಿಯೆ‌ಯನ್ನು ಗಮನಿಸಿದ್ದೇವೆ. ಒಂದು ಪ್ರಜಾಪ್ರಭುತ್ವ...

Read More

ಬಿಎಸ್‌ಎಫ್ 56ನೇ ಸಂಸ್ಥಾಪನಾ ದಿನ: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಂದ ಶುಭಾಶಯ

ನವದೆಹಲಿ: ಇಂದು ಬಿಎಸ್‌ಎಫ್ (ಬಾರ್ಡರ್ ಸೆಕ್ಯುರಿಟಿ ಫೋರ್ಸ್) ನ 56ನೇ ಸಂಸ್ಥಾಪನಾ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಎಸ್‌ಎಫ್ ಸಿಬ್ಬಂದಿಗಳು ಮತ್ತು ಅವರ ಕುಟುಂಬ ವರ್ಗಕ್ಕೆ ಶುಭಾಶಯಗಳನ್ನು ತಿಳಿಸಿ ಟ್ವೀಟ್ ಮಾಡಿದ್ದಾರೆ. ಬಿಎಸ್ಎಫ್ ಪಡೆ ದೇಶದ ಪರಾಕ್ರಮಿ...

Read More

ಮಲೇರಿಯಾ ನಿಯಂತ್ರಣದಲ್ಲಿ ಉತ್ತಮ ಪ್ರಗತಿ ಸಾಧಿಸಿದ ಭಾರತ

ವಿಶ್ವ ಸಂಸ್ಥೆ: ಆಗ್ನೇಯ ಏಷ್ಯಾ ರಾಷ್ಟ್ರ‌ಗಳಲ್ಲಿ ಅತೀ ಕಡಿಮೆ ಮಲೇರಿಯಾ ಪ್ರಕರಣಗಳನ್ನು ಭಾರತ ಹೊಂದಿದೆ. ಮಲೇರಿಯಾ ವಿರುದ್ಧ‌ದ ಸಮರದಲ್ಲಿ ದೇಶ ಉತ್ತಮ ಪ್ರಗತಿ ಸಾಧಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ ವ್ಯಕ್ತಪಡಿಸಿದೆ. ಸೋಮವಾರವಷ್ಟೇ ‘ವಿಶ್ವ ಮಲೇರಿಯಾ ವರದಿ-2020’ ಬಿಡುಗಡೆ‌ಯಾಗಿದ್ದು, 2000...

Read More

ಕೊರೋನಾ: ಮಾರುಕಟ್ಟೆ ಪ್ರದೇಶಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿದ ಕೇಂದ್ರ ಗೃಹ ಸಚಿವಾಲಯ

ನವದೆಹಲಿ: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರದೇಶಗಳಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ನೂತನ ಮಾರ್ಗಸೂಚಿ ಯನ್ನು ಪ್ರಕಟಿಸಿದೆ. ಮಾರುಕಟ್ಟೆ ಪ್ರದೇಶಗಳಲ್ಲಿ ಮಾಸ್ಕ್ ಧರಿಸದಿದ್ದರೆ ದಂಡ, ಸೂಚಿಸಿದ ಸಮಯದಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸುವವರಿಗೆ ರಿಯಾಯಿತಿ, ಕಂಟೈನ್ಮೆಂಟ್ ಝೋನ್‌ಗಳಲ್ಲಿನ ಮಾರುಕಟ್ಟೆ ಪ್ರದೇಶಗಳನ್ನು ಕೊರೋನಾ...

Read More

ಅಂಡಮಾನ್-ನಿಕೋಬಾರ್‌ನಲ್ಲಿ ಹಡಗು ನಿರೋಧಕ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ನವದೆಹಲಿ: ಹಡಗು ನಿರೋಧಕ ಬ್ರಹ್ಮೋಸ್ ಕ್ಷಿಪಣಿಯನ್ನು ಅಂಡಮಾನ್-ನಿಕೋಬಾರ್‌ನಲ್ಲಿ ಭಾರತ ಯಶಸ್ವಿಯಾಗಿ ಪೂರೈಸಿದೆ. ಭಾರತೀಯ ನೌಕಾಪಡೆಯ ಪರೀಕ್ಷಾರ್ಥ ಪ್ರಯೋಗಗಳ ಭಾಗವಾಗಿ ಈ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ. ಭಾರತೀಯ ಸೇನೆ ಈ ಪ್ರಯೋಗಾರ್ಥ ಪರೀಕ್ಷೆ‌ಯನ್ನು ನಡೆಸಿದೆ. ಈ ವರೆಗೆ ಡಿಆರ್‌ಡಿಒ ಅಭಿವೃದ್ಧಿ ಮಾಡಿರುವ ಅನೇಕ...

Read More

ನೂತನ ಕೃಷಿ ಕಾಯ್ದೆಯ ಜೊತೆಗೆ ಹಳೆಯ ವ್ಯವಸ್ಥೆ ಅನುಸರಿಸುವುದಕ್ಕೂ ಅವಕಾಶ: ಪ್ರಧಾನಿ ಮೋದಿ

ವಾರಣಾಸಿ: ನೂತನ ಕೃಷಿ ಸುಧಾರಣೆಗಳು ರೈತಾಪಿ ವರ್ಗಕ್ಕೆ ಹೊಸ ಆಯ್ಕೆಗಳನ್ನು ಮತ್ತು ಕಾನೂನಾತ್ಮಕ ರಕ್ಷಣೆಯನ್ನು ಒದಗಿಸಲು ಪೂರಕವಾಗಿದೆ. ಅದರೊಂದಿಗೆ ಹಳೆಯ ವ್ಯವಸ್ಥೆ‌ಯನ್ನು ರೈತರು ಬಯಸಿದರೆ ಅದನ್ನು ಮುಂದುವರೆಸಿಕೊಂಡು ಹೋಗುವ ಅವಕಾಶ‌ವೂ ಇರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಅವರು ತಮ್ಮ...

Read More

ಕಣಿವೆ ರಾಜ್ಯದಲ್ಲಿ ಡಿಸಿಸಿ ಎರಡನೇ ಹಂತದ ಚುನಾವಣೆ: ಬಿಗಿ ಭದ್ರತೆ‌ಯ ನಡುವೆ ಮತದಾನ ಪ್ರಕ್ರಿಯೆ ಆರಂಭ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಸಿಸಿ) ಚುನಾವಣೆ‌ಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಬಿಗಿ ಭದ್ರತೆಯ ನಡುವೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬೆಳಗ್ಗಿನಿಂದ‌ಲೇ ಮತದಾರರು ಮತಗಟ್ಟೆ‌ಗಳ ಬಳಿಗೆ ಬಂದು ತಮ್ಮ ಹಕ್ಕನ್ನು ಚಲಾವಣೆ ಮಾಡುವ ಮೂಲಕ...

Read More

Recent News

Back To Top