ವಿಶ್ವ ಸಂಸ್ಥೆ: ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಅತೀ ಕಡಿಮೆ ಮಲೇರಿಯಾ ಪ್ರಕರಣಗಳನ್ನು ಭಾರತ ಹೊಂದಿದೆ. ಮಲೇರಿಯಾ ವಿರುದ್ಧದ ಸಮರದಲ್ಲಿ ದೇಶ ಉತ್ತಮ ಪ್ರಗತಿ ಸಾಧಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಸೋಮವಾರವಷ್ಟೇ ‘ವಿಶ್ವ ಮಲೇರಿಯಾ ವರದಿ-2020’ ಬಿಡುಗಡೆಯಾಗಿದ್ದು, 2000 ನೇ ವರ್ಷದಲ್ಲಿ ಭಾರತದಲ್ಲಿ 2 ಕೋಟಿಯಷ್ಟು ಮಲೇರಿಯಾ ಪ್ರಕರಣಗಳಿದ್ದವು. ಈ ಸಂಖ್ಯೆ ಕಳೆದ ವರ್ಷ 5.6 ಲಕ್ಷಕ್ಕೆ ಇಳಿಕೆ ಕಂಡಿದೆ. 2019 ರಲ್ಲಿ ವಿಶ್ವದಾದ್ಯಂತ ಸುಮಾರು 22 ಕೋಟಿಗಳಷ್ಟು ಮಲೇರಿಯಾ ಪ್ರಕರಣಗಳಿದ್ದವು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮಲೇರಿಯಾ ಪ್ರಕರಣಗಳಲ್ಲಿ ಇಳಿಕೆಯ ಪ್ರಮಾಣ ಅಧಿಕವಾಗಿದೆ. ಕಳೆದ ವರ್ಷ ಮಲೇರಿಯಾಗೆ ತುತ್ತಾಗಿ 4.9 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ.
ಆಗ್ನೇಯ ಏಷ್ಯಾದ ರಾಷ್ಟ್ರಗಳಲ್ಲಿ ಮಲೇರಿಯಾ ಪ್ರಕರಣ ಗಣನೀಯ ಮಟ್ಟದಲ್ಲಿ ಕಡಿಮೆಯಾಗಿವೆ. ಸಾವಿನ ಪ್ರಮಾಣ 74% ಗಳಷ್ಟು ಕಡಿಮೆಯಾಗಿದೆ. ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ 3% ಗಳಷ್ಟು ಮಾತ್ರ ಮಲೇರಿಯಾ ಪ್ರಕರಣಗಳಿರುವುದಾಗಿಯೂ ವರದಿ ಮಾಹಿತಿ ನೀಡಿದೆ. ಭಾರತದಲ್ಲಿ 2000-2019 ರ ನಡುವೆ ಮಲೇರಿಯಾದಿಂದ ಸಾವನ್ನಪ್ಪಿರುವವರ ಸಂಖ್ಯೆಯ ಪ್ರಮಾಣ ಸಹ ಇಳಿಮುಖವಾಗಿದೆ. ಕಳೆದ ವರ್ಷ ಮಲೇರಿಯಾ ಕಾರಣದಿಂದ ಸುಮಾರು 7700 ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.