ನವದೆಹಲಿ: ಇಂದು ಬಿಎಸ್ಎಫ್ (ಬಾರ್ಡರ್ ಸೆಕ್ಯುರಿಟಿ ಫೋರ್ಸ್) ನ 56ನೇ ಸಂಸ್ಥಾಪನಾ ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಎಸ್ಎಫ್ ಸಿಬ್ಬಂದಿಗಳು ಮತ್ತು ಅವರ ಕುಟುಂಬ ವರ್ಗಕ್ಕೆ ಶುಭಾಶಯಗಳನ್ನು ತಿಳಿಸಿ ಟ್ವೀಟ್ ಮಾಡಿದ್ದಾರೆ.
ಬಿಎಸ್ಎಫ್ ಪಡೆ ದೇಶದ ಪರಾಕ್ರಮಿ ಪಡೆ ಎಂದು ಗುರುತಿಸಿಕೊಂಡಿದೆ. ದೇಶದ ರಕ್ಷಣೆ ಮತ್ತು ದೇಶದೊಳಗೆ ಯಾವುದೇ ರೀತಿಯ ನೈಸರ್ಗಿಕ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ನಾಗರಿಕರ ಸಹಾಯಕ್ಕೆ ಧಾವಿಸುವಲ್ಲಿಯೂ ಅಚಲ ಬದ್ಧತೆಯನ್ನು ಬಿಎಸ್ಎಫ್ ಹೊಂದಿದೆ. ಭಾರತ ದೇಶವೇ ಬಿಎಸ್ಎಫ್ ಯೋಧರ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
Best wishes to all @BSF_India personnel and their families on the special occasion of their Raising Day. BSF has distinguished itself as a valorous force, unwavering in their commitment to protect the nation and assist citizens during natural calamities. India is proud of BSF!
— Narendra Modi (@narendramodi) December 1, 2020
ಗೃಹ ಸಚಿವ ಅಮಿತ್ ಶಾ ಅವರೂ ಬಿಎಸ್ಎಫ್ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದು, ಗಡಿ ಭದ್ರತಾ ಪಡೆಗಳು, ಬಿಎಸ್ಎಫ್ ಯೋಧರ ಸೇವೆ ಮತ್ತು ಸಮರ್ಪಣಾ ಮನೋಭಾವಕ್ಕೆ ವಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಬಿಎಸ್ಎಫ್ನ ಧ್ಯೇಯ ವಾಕ್ಯ ಜೀವನ್ ಪರ್ಯಂತ ಕರ್ತವ್ಯ ಎಂಬುದಕ್ಕೆ ಚ್ಯುತಿಯಾಗದಂತೆ ಶೌರ್ಯದಿಂದ ಕರ್ತವ್ಯ ನಿರ್ವಹಿಸುತ್ತಿದೆ. ಇಡೀ ದೇಶವೇ ಬಿಎಸ್ಎಫ್ನ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ತಿಳಿಸಿದ್ದಾರೆ.
बीएसएफ ने अपने शौर्य और पराक्रम से अपने आदर्श वाक्य ‘जीवन पर्यन्त कर्तव्य’ को सदैव चरितार्थ किया है।
आज @BSF_India के 56वें स्थापना दिवस पर मैं बल के सभी बहादुर जवानों को उनकी राष्ट्रसेवा और समर्पण के लिए नमन करता हूँ।
भारत को अपनी रणविजयी ‘सीमा सुरक्षा बल’ पर गर्व है।
— Amit Shah (@AmitShah) December 1, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.