Date : Thursday, 26-09-2019
ಪ್ಲಾಸ್ಟಿಕ್ಗೆ ಪರಿಸರ ಸ್ನೇಹಿ ಪರ್ಯಾಯವನ್ನು ಕಂಡುಕೊಳ್ಳುವ ಮೂಲಕ ಒರಿಸ್ಸಾದ ಕಿಯೋಂಜರ್ ಜಿಲ್ಲಾಡಳಿತವು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಪ್ಲಾಸ್ಟಿಕ್ ಬಟ್ಟಲುಗಳು, ಬಾಟಲಿಗಳು ಮತ್ತು ಕಟ್ಲರಿಗಳನ್ನು ಸಾಲ್ ಎಲೆಗಳಿಂದ ಮಾಡಿದ ಸುಸ್ಥಿರ ಪರ್ಯಾಯಗಳೊಂದಿಗೆ ಬದಲಿಸುವ ಮೂಲಕ ಇದು ಅದ್ಭುತವನ್ನೇ ಸೃಷ್ಟಿಸಿದೆ. ಈ ಪ್ರದೇಶದಲ್ಲಿ ಹೇರಳವಾಗಿರುವ...
Date : Tuesday, 27-08-2019
ಭುವನೇಶ್ವರ: ಒರಿಸ್ಸಾದ ಶಾಲಾ ಶಿಕ್ಷಕರೊಬ್ಬರ ಅನನ್ಯ ಬೋಧನಾ ವಿಧಾನವು ಈಗ ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿದೆ. ಒರಿಸ್ಸಾದ ಕೊರಪುಟ್ ಜಿಲ್ಲೆಯ ಲ್ಯಾಮ್‌ಟಾಪುಟ್ ಅಪ್ಪರ್ ಪ್ರೈಮರಿ ಸ್ಕೂಲಿನಲ್ಲಿ ಅವರು ಬೋಧನೆ ಮಾಡುತ್ತಿರುವ ದೃಶ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ಅವರಿಗೆ ಶ್ಲಾಘನೆಗಳ ಮಹಾಪೂರವೂ...
Date : Tuesday, 20-08-2019
ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ನೈಸರ್ಗಿಕ ವಿಪತ್ತುಗಳಿಂದ ಪೀಡಿತಗೊಂಡಿದ್ದ ಕರ್ನಾಟಕ, ಒರಿಸ್ಸಾ ಮತ್ತು ಪಶ್ಚಿಮಬಂಗಾಳ ರಾಜ್ಯಗಳಿಗೆ ಕೇಂದ್ರವು ರೂ.4,432 ಕೋಟಿ ರೂಪಾಯಿಗಳ ನೆರವನ್ನು ನೀಡಿದೆ. ಇಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಸಭೆಯನ್ನು ನಡೆಸಿ ನೆರವನ್ನು ಬಿಡುಗಡೆಗೊಳಿಸಿದ್ದಾರೆ....
Date : Tuesday, 30-07-2019
ಭುವನೇಶ್ವರ: ಕೊನೆಗೂ ಒರಿಸ್ಸಾ ತನ್ನ ‘ರಸಗೋಲಾ (ರಸಗುಲ್ಲಾ)’ಕ್ಕೆ ಭೌಗೋಳಿಕ ಗುರುತಿಸುವಿಕೆ (ಜಿಐ) ಟ್ಯಾಗ್ ಅನ್ನು ಪಡೆದುಕೊಂಡಿದೆ. ಈ ಮೂಲಕ 2015 ರಿಂದ ಈ ಸಿಹಿ ತಿಂಡಿಗಾಗಿ ಪಶ್ಚಿಮಬಂಗಾಳದೊಂದಿಗೆ ನಡೆಸಿದ ಗುದ್ದಾಟಕ್ಕೆ ತಡವಾಗಿ ನ್ಯಾಯಪಡೆದುಕೊಂಡಿದೆ. ಪಶ್ಚಿಮ ಬಂಗಾಳ ಹೋರಾಟದಲ್ಲಿ ಮೊದಲ ಜಯವನ್ನು ಗಳಿಸಿಕೊಂಡಿತ್ತು. ಈಗಾಗಲೇ ಅದು ರಸಗುಲ್ಲಕ್ಕೆ ಜಿಐ...
Date : Friday, 19-07-2019
ಭುವನೇಶ್ವರ: ಇತ್ತೀಚಿಗೆ ಸಂಭವಿಸಿದ ಫೋನಿ ಚಂಡಮಾರುತಕ್ಕೆ ಭಾರೀ ಪ್ರಮಾಣದ ಮರಗಳನ್ನು ಕಳೆದುಕೊಂಡಿರುವ ಒರಿಸ್ಸಾದ ರಾಜಧಾನಿ ಭುವನೇಶ್ವರದಲ್ಲಿ, ಸರ್ಕಾರಿ ಆಸ್ಪತ್ರೆಗಳು ಕಳೆದುಹೋದ ಹಸಿರು ಹೊದಿಕೆಯನ್ನು ಮರುಪಡೆಯಲು ಒಂದು ವಿಶಿಷ್ಟ ಕಾರ್ಯಕ್ರಮವನ್ನು ಆರಂಭಿಸಿವೆ. ನವಜಾತ ಶಿಶುಗಳ ಪೋಷಕರಿಗೆ ಉಚಿತ ಸಸಿಗಳನ್ನು ವಿತರಣೆ ಮಾಡುತ್ತಿವೆ. “ತಾಯಿಯ ಭಾವನೆಯನ್ನು ಸಸ್ಯದೊಂದಿಗೆ ಸಂಪರ್ಕಿಸುವ ಯೋಚನೆ...
Date : Thursday, 11-07-2019
ಭುವನೇಶ್ವರ: ಒರಿಸ್ಸಾದ ಭುವನೇಶ್ವರ ಮೂಲದ ಆವಿಷ್ಕಾರಿಗಳಾದ ಪ್ರೇಮ್ ಪಾಂಡೆ ಮತ್ತು ಎಂ.ಡಿ ಅಹ್ಮದ್ ರಾಝಾ ಎಂಬುವವರು ಪ್ಲಾಸ್ಟಿಕ್ ಪೆನ್ನುಗಳಿಗೆ ಪರ್ಯಾಯವಾಗಿ, ನ್ಯೂಸ್ ಪೇಪರ್, ತರಕಾರಿ-ಹಣ್ಣು ಮತ್ತು ಹೂವಿನ ಬೀಜಗಳನ್ನು ಬಳಸಿ ಬಿಸಾಕಬಲ್ಲಂತಹ ಪರಿಸರ ಸ್ನೇಹಿಯಾದ ಪೆನ್ನುಗಳನ್ನು ತಯಾರಿಸಿದ್ದಾರೆ. ಪ್ಲಾಸ್ಟಿಕ್ ಬಳಕೆಯಿಂದಾಗಿ ಹೆಚ್ಚುತ್ತಿರುವ ಸಮಸ್ಯೆಗಳು...