ಭುವನೇಶ್ವರ: ಕೊನೆಗೂ ಒರಿಸ್ಸಾ ತನ್ನ ‘ರಸಗೋಲಾ (ರಸಗುಲ್ಲಾ)’ಕ್ಕೆ ಭೌಗೋಳಿಕ ಗುರುತಿಸುವಿಕೆ (ಜಿಐ) ಟ್ಯಾಗ್ ಅನ್ನು ಪಡೆದುಕೊಂಡಿದೆ. ಈ ಮೂಲಕ 2015 ರಿಂದ ಈ ಸಿಹಿ ತಿಂಡಿಗಾಗಿ ಪಶ್ಚಿಮಬಂಗಾಳದೊಂದಿಗೆ ನಡೆಸಿದ ಗುದ್ದಾಟಕ್ಕೆ ತಡವಾಗಿ ನ್ಯಾಯಪಡೆದುಕೊಂಡಿದೆ. ಪಶ್ಚಿಮ ಬಂಗಾಳ ಹೋರಾಟದಲ್ಲಿ ಮೊದಲ ಜಯವನ್ನು ಗಳಿಸಿಕೊಂಡಿತ್ತು. ಈಗಾಗಲೇ ಅದು ರಸಗುಲ್ಲಕ್ಕೆ ಜಿಐ ಟ್ಯಾಗ್ ಅನ್ನು ಪಡೆದುಕೊಂಡಿದೆ.
ಈ ಎರಡೂ ರಾಜ್ಯಗಳು ರಸಗುಲ್ಲ ನಮ್ಮದು ಎಂದು ಪ್ರತಿಪಾದಿಸಿವೆ. 2017 ರಲ್ಲಿ, ಪಶ್ಚಿಮ ಬಂಗಾಳವು ತನ್ನ “ಬಾಂಗ್ಲರ್ ರಸೋಗೊಲ್ಲಾ” ಗಾಗಿ ಜಿಐ ಟ್ಯಾಗ್ ಅನ್ನು ಪಡೆದುಕೊಂಡಿದೆ. ಈಗ ಒಡಿಶಾ ಇದೇ ರೀತಿಯ ಆದರೆ ಸ್ವಲ್ಪ ವಿಭಿನ್ನವಾಗಿ ಹೆಸರಿಸಲಾದ ‘ರಸಗೋಲ’ಕ್ಕೆ ಜಿಐ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಈ ಮೂಲಕ ರಾಜ್ಯಗಳ ನಡುವಣ ಸಿಹಿ ಯುದ್ಧ ಸಿಹಿಯಾಗಿ ಅಂತ್ಯಗೊಂಡಿದೆ.
ಚೆನ್ನೈ ಮೂಲದ ಜಿಐ ರಿಜಿಸ್ಟ್ರಿ ಸೋಮವಾರ ತನ್ನ ವೆಬ್ಸೈಟ್ನಲ್ಲಿ ‘ಒಡಿಶಾ ರಸಗೋಲಾ’ಕ್ಕೆ ಅಧಿಕೃತ ಪ್ರಮಾಣೀಕರಣವನ್ನು ನೀಡಿದೆ.
“ಪ್ರಪಂಚದಾದ್ಯಂತದ ಜನರು ಪ್ರೀತಿಸುವ ಒರಿಸ್ಸಾದ ಕಾಟೇಜ್ ಚೀಸ್ನಿಂದ ತಯಾರಿಸಿದ ಬಾಯಲ್ಲಿ ನೀರುರಿಸುವ ಈ ಸಿಹಿ ಖಾದ್ಯವನ್ನು ಭಗವಾನ್ ಜಗನ್ನಾಥನಿಗೆ ಶತಮಾನಗಳಿಂದಲೂ ನೈವೇದ್ಯವಾಗಿ ಅರ್ಪಣೆ ಮಾಡಲಾಗುತ್ತಿದೆ” ಎಂದು ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಟ್ವೀಟ್ ಮಾಡಿದ್ದಾರೆ.
ರುಚಿ ಮತ್ತು ಆಕಾರದಲ್ಲಿ ವಿಭಿನ್ನತೆಯನ್ನು ಗುರುತಿಸಿ ಎರಡೂ ರಾಜ್ಯಗಳ ರಸಗುಲ್ಲಾಕ್ಕೆ ಜಿಐ ರಿಜಿಸ್ಟ್ರಿ ಪ್ರತ್ಯೇಕ ಜಿಐ ಟ್ಯಾಗ್ ಅನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.