Date : Monday, 20-07-2015
ಚೆನ್ನೈ: ಬಡವರಿಗೆ ಕಡಿಮೆ ಬೆಲೆಯಲ್ಲಿ ಔಷಧಗಳು ದೊರಕುವಂತೆ ಮಾಡುವ ಸಲುವಾಗಿ ದೆಹಲಿಯಾದ್ಯಂತ ‘ಆಮ್ ಆದ್ಮಿ ಕ್ಲಿನಿಕ್’ಗಳನ್ನು ತೆರೆಯಲು ಎಎಪಿ ಸರ್ಕಾರ ಮುಂದಾಗಿದೆ. ಈಗಾಗಲೇ ಭಾನುವಾರ ಒಂದು ಕ್ಲಿನಿಕ್‌ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಚಾಲನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಇಂತಹ ಸಾವಿರ...
Date : Monday, 20-07-2015
ಟರ್ಕಿ: 120 ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಅವರೆಲ್ಲರ ಕೈಗೆ ಒಂದೊಂದು ಗೊಂಬೆ ಮತ್ತು ಖಡ್ಗವನ್ನು ಕೊಟ್ಟು, ಬಳಿಕ ಒಬ್ಬೊಬ್ಬರೇ ಮಕ್ಕಳನ್ನು ಕರೆಸಿ ಆ ಖಡ್ಗದಿಂದ ಗೊಂಬೆಯ ರುಂಡವನ್ನು ಕಡಿಯಲು ಹೇಳಿಕೊಡುತ್ತಾರೆ. ಈ ಮೂಲಕ ಮನುಷ್ಯನ ರುಂಡವನ್ನು ಹೇಗೆ ಕಡಿಯುವುದು ಎಂಬುದನ್ನು ಮಕ್ಕಳಿಗೆ...
Date : Monday, 20-07-2015
ಮುಂಬಯಿ: ಕರ್ತವ್ಯ ನಿರತ ಯೋಧನ ಬಳಿಯಿದ್ದ ಸರ್ವಿಸ್ ಗನ್ನನ್ನು ಕಿತ್ತುಕೊಂಡ ಇಬ್ಬರು ಯುವಕರು ಅದೇ ಗನ್‌ನಿಂದ ಆತನನ್ನು ಹತ್ಯೆ ಮಾಡಿದ ಘಟನೆ ಉತ್ತರ ಮಹಾರಾಷ್ಟ್ರದ ಭೂಸಾವಾಲ್‌ನಲ್ಲಿ ನಡೆದಿದೆ. ಜಲಗಾಂವ್ ಜಿಲ್ಲೆಯ ಭೂಸಾವಾಲ್‌ನ ಬಜಾರ್‌ಪೇಟ್‌ನಲ್ಲಿ ಭಾನುವಾರ ಈ ಘಟನೆ ನಡೆದಿದೆ. ಮೃತ ಯೋಧನನ್ನು...
Date : Monday, 20-07-2015
ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಆಡಳಿತರೂಢ ಬಿಜೆಪಿ ತಂತ್ರಗಳನ್ನು ರೂಪಿಸುತ್ತಿದೆ. ಪ್ರತಿಪಕ್ಷಗಳು ಪ್ರಸ್ತಾಪಿಸುವ ಎಲ್ಲಾ ವಿಷಯಗಳ ಬಗ್ಗೆ, ವಿವಾದಗಳ ಬಗ್ಗೆ ಚರ್ಚಿಸಲು ಸರ್ಕಾರ ತಯಾರಿದೆ, ಆದರೆ ಪ್ರತಿಪಕ್ಷಗಳು ಚರ್ಚೆಯಲ್ಲಿ ಪಾಲ್ಗೊಳ್ಳಲು ಸಿದ್ಧವಾಗಿರಬೇಕು ಎಂದು ಬಿಜೆಪಿ...
Date : Monday, 20-07-2015
ವಾರಣಾಸಿ: ಚುನಾವಣೆಯ ಸಂದರ್ಭ ಹಲವು ಆಶ್ವಾಸನೆಗಳನ್ನು ಕೊಟ್ಟು ಗೆದ್ದ ಬಳಿಕ ಆರಿಸಿದ ಜನರನ್ನು, ಕ್ಷೇತ್ರವನ್ನು ಮರೆತ ಶಾಸಕನೊಬ್ಬನಿಗೆ ಉತ್ತರಪ್ರದೇಶದ ಜನ ತಕ್ಕ ಶಾಸ್ತಿಯನ್ನೇ ಮಾಡಿದ್ದಾರೆ. ಮುಗಲ್‌ಸರೈ ಕ್ಷೇತ್ರದ ಬಹುಜನ ಸಮಾಜವಾದಿ ಶಾಸಕ ಬಬ್ಬನ್ ಸಿಂಗ್ ಚೌಹಾಣ್‌ನನ್ನು ಜನರು ಹಗ್ಗದಿಂದ ಕಟ್ಟಿ ಹಾಕಿ...
Date : Saturday, 18-07-2015
ಬೀಜಿಂಗ್: ಗಡಿಯಲ್ಲಿ ಪಾಕಿಸ್ಥಾನ ಸೇನೆ ಹೊಡೆದುರುಳಿಸಿದ ದ್ರೋನ್ ಕ್ಯಾಮೆರಾ ನಾವೇ ತಯಾರಿಸಿದ್ದು ಎಂದು ಚೀನಾ ಹೇಳಿದೆ. ಚೀನಾ ತಯಾರಿತ ‘ಡಿಜೆಐ ಫ್ಯಾಥೋಮ್3’ ದ್ರೋನ್ ಕ್ಯಾಮೆರಾ ಇದೆಂದು ಬೀಜಿಂಗ್‌ಗೆ ತಿಳಿದುಬಂದಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ವರದಿ ಮಾಡಿದೆ. ಚೀನಾದ ಈ...
Date : Saturday, 18-07-2015
ಶ್ರೀನಗರ: ಈದ್ ಹಬ್ಬದ ಹಿನ್ನಲೆಯಲ್ಲಿ ಭಾರತ ಕಳುಹಿಸಿರುವ ಸಿಹಿಯನ್ನು ಸ್ವೀಕರಿಸಲು ನಿರಾಕರಿಸಿರುವ ಪಾಕಿಸ್ಥಾನ ಸೇನೆ ಜಮ್ಮು ಕಾಶ್ಮೀರದ ಗಡಿಯಲ್ಲಿ ಮತ್ತೆ ಗುಂಡಿನ ದಾಳಿ ನಡೆಸಿದೆ. ಪೂಂಚ್ ಜಿಲ್ಲೆಯ ಎಲ್‌ಓಸಿಯಲ್ಲಿ ಮಧ್ಯಾಹ್ನ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು...
Date : Saturday, 18-07-2015
ಭುವನೇಶ್ವರ: ಒರಿಸ್ಸಾದ ಪುರಿಯಲ್ಲಿ ಸಹಸ್ರಮಾನದ ಮೊದಲ ‘ನಬಕಲೇಬರ ರಥ ಯಾತ್ರೆ’ ಶನಿವಾರದಿಂದ ಆರಂಭವಾಗಿದ್ದು, ಇದನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಜಮಾಯಿಸಿದ್ದಾರೆ. ಪುರಿ ದೇಗುಲದಲ್ಲಿ ಆರಂಭವಾಗಿರುವ ಈ ಯಾತ್ರೆ ಸುಮಾರು 2.5 ಕಿ.ಮೀ ಸಂಚರಿಸಿ ಜುಲೈ 29ರಂದು ಶ್ರೀ ಗುಂಡಿಚ ದೇಗುಲದಲ್ಲಿ...
Date : Saturday, 18-07-2015
ಕೋಲ್ಕತ್ತಾ: ಮಾವೋವಾದಿ ನಾಯಕ ಕಿಶನ್ ಅವರನ್ನು ಕೊಲೆ ಮಾಡಿದ್ದು ಮಮತಾ ಬ್ಯಾನರ್ಜಿ ಸರ್ಕಾರ ಎಂದು ಟಿಎಂಸಿ ಯುವ ಮೋರ್ಚಾದ ಅಧ್ಯಕ್ಷ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ. ಕಾಡಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕಿಶಾನ್ ಹತ್ಯೆಯಾಗಿದ್ದಾರೆ ಎಂದು ಟಿಎಂಸಿ ಸರ್ಕಾರ ಹೇಳಿಕೊಳ್ಳುತ್ತಾ ಬಂದಿದೆ....
Date : Saturday, 18-07-2015
ವಾಘಾ: ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಈದ್ ಹಬ್ಬದ ಪ್ರಯುಕ್ತ ಸಿಹಿ ಹಂಚುವ ಭಾರತ-ಪಾಕಿಸ್ಥಾನ ಯೋಧರ ಸಂಪ್ರದಾಯ ಮೊಟಕುಗೊಂಡಿದೆ. ಗಡಿಯಲ್ಲಿ ಪಾಕಿಸ್ಥಾನ ಪದೇ ಪದೇ ಕದನವಿರಾಮ ಉಲ್ಲಂಘಣೆ ಮಾಡಿ ಭಾರತೀಯ ಯೋದರ ಮೇಲೆ ಗುಂಡಿನ ದಾಳಿ ನಡೆಸುತ್ತಿದೆ. ಇದು ಎರಡು ದೇಶಗಳ ಸಂಬಂಧವನ್ನು...