ಟರ್ಕಿ: 120 ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಅವರೆಲ್ಲರ ಕೈಗೆ ಒಂದೊಂದು ಗೊಂಬೆ ಮತ್ತು ಖಡ್ಗವನ್ನು ಕೊಟ್ಟು, ಬಳಿಕ ಒಬ್ಬೊಬ್ಬರೇ ಮಕ್ಕಳನ್ನು ಕರೆಸಿ ಆ ಖಡ್ಗದಿಂದ ಗೊಂಬೆಯ ರುಂಡವನ್ನು ಕಡಿಯಲು ಹೇಳಿಕೊಡುತ್ತಾರೆ. ಈ ಮೂಲಕ ಮನುಷ್ಯನ ರುಂಡವನ್ನು ಹೇಗೆ ಕಡಿಯುವುದು ಎಂಬುದನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ಇದು ಇಸಿಸ್ ಉಗ್ರರು ತಮ್ಮ ತರಬೇತಿ ಕೇಂದ್ರಗಳಲ್ಲಿ ಮಕ್ಕಳಿಗೆ ಕೊಡುತ್ತಿರುವ ತರಬೇತಿ.
ಈ ಮಕ್ಕಳೇ ಮುಂದಿನ ಇಸಿಸ್ ಉಗ್ರರ ಭವಿಷ್ಯ. ತಮ್ಮಂತೆ ಅವರನ್ನೂ ಕ್ರೂರಿಗಳನ್ನಾಗಿ ಮಾಡಲು ಮನುಷ್ಯರ ತಲೆ ಕಡಿಯುವುದು ಹೇಗೆ ಎಂಬುದನ್ನು ಈಗಿನಿಂದಲೇ ಅವರಿಗೆ ಹೇಳಿಕೊಡಲಾಗುತ್ತದೆ.
ಯಹೂದಿಗಳನ್ನು ಹತ್ಯೆ ಮಾಡಿ ಅವರ ಮಕ್ಕಳನ್ನು ಅಪಹರಿಸಿಕೊಂಡು ಬಂದು ಇಸಿಸ್ ಉಗ್ರರು ತಮ್ಮ ತರಬೇತಿ ಕೇಂದ್ರಗಳಿಗೆ ಹಾಕುತ್ತಿದ್ದಾರೆ. ಈ ತರಬೇತಿ ಕೇಂದ್ರದಿಂದ ತಪ್ಪಿಸಿಕೊಂಡು ಬಂದ ಯಹೂದಿ ಬಾಲಕ ಯಹ್ಯ ಎಂಬಾತ ಇಸಿಸ್ ಉಗ್ರರು ತಮಗೆ ಹೇಗೆ ತರಬೇತಿ ನೀಡುತ್ತಿದ್ದರು ಎಂಬುದನ್ನು ಎಳೆಎಳೆಯಾಗಿ ವಿವರಿಸಿದ್ದಾನೆ.
ಯಹ್ಯನಂತಹ 12ಕ್ಕೂ ಅಧಿಕ ಯಹೂದಿ ಮಕ್ಕಳು ಇಸಿಸ್ ಉಗ್ರರ ತರಬೇತಿ ಕೇಂದ್ರದಲ್ಲಿದ್ದಾರೆ. ಅವರನ್ನು ಇಸ್ಲಾಂಗೆ ಮತಾಂತರಗೊಳಿಸಿ ಇಸ್ಲಾಂ ಹೆಸರುಗಳನ್ನು ಇಡಲಾಗಿದೆ. ಬಳಿಕ ಬ್ರೇನ್ಬಾಶ್ ಮಾಡಿ ಉಗ್ರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಲಾಗುತ್ತದೆ. ಯಹೂದಿ ಮಹಿಳೆಯರು ಮತ್ತು ಮಕ್ಕಳನ್ನು ಲೈಂಗಿಕ ಜೀತದಾಳುಗಳನ್ನಾಗಿ ಮಾಡಿಕೊಳ್ಳಲಾಗಿದೆ.
ಈಗಾಗಲೇ ಬಾಲಕನೊಬ್ಬನ ಕೈಗೆಯಿಂದ ವ್ಯಕ್ತಿಯೊಬ್ಬನ ಶಿರಚ್ಛೇಧವನ್ನು ಮಾಡಿಸಿ ಅದರ ವಿಡಿಯೋವನ್ನು ಇಸಿಸ್ ಬಿಡುಗಡೆ ಮಾಡಿದೆ. ಮಕ್ಕಳ ಕೈಯಲ್ಲಿ ಭಯಾನಕ ಕಾರ್ಯಗಳನ್ನು ಮಾಡುತ್ತಿರುವ ಇಸಿಸ್ ನಿಜಕ್ಕೂ ಈ ಜಗತ್ತಿನ ಅತಿದೊಡ್ಡ ಶಾಪ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.