ಭುವನೇಶ್ವರ: ಒರಿಸ್ಸಾದ ಪುರಿಯಲ್ಲಿ ಸಹಸ್ರಮಾನದ ಮೊದಲ ‘ನಬಕಲೇಬರ ರಥ ಯಾತ್ರೆ’ ಶನಿವಾರದಿಂದ ಆರಂಭವಾಗಿದ್ದು, ಇದನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಜಮಾಯಿಸಿದ್ದಾರೆ.
ಪುರಿ ದೇಗುಲದಲ್ಲಿ ಆರಂಭವಾಗಿರುವ ಈ ಯಾತ್ರೆ ಸುಮಾರು 2.5 ಕಿ.ಮೀ ಸಂಚರಿಸಿ ಜುಲೈ 29ರಂದು ಶ್ರೀ ಗುಂಡಿಚ ದೇಗುಲದಲ್ಲಿ ಕೊನೆಗೊಳ್ಳಲಿದೆ. ಒಟ್ಟು 9 ದಿನಗಳ ಯಾತ್ರೆ ಇದಾಗಿದೆ.
ಈ ಯಾತ್ರೆಗೆಂದು ಒರಿಸ್ಸಾ ಸರ್ಕಾರ ಉಚಿತ ಬಸ್ ಸೇವೆಗಳನ್ನು ಆರಂಭಿಸಿದೆ, ಅಲ್ಲದೇ ರೈಲ್ವೇ ಇಲಾಖೆ ದೇಶದಾದ್ಯಂತದಿಂದ ಇಲ್ಲಿಗೆ ಆಗಮಿಸಲು 216 ವಿಶೇಷ ರೈಲಿನ ವ್ಯವಸ್ಥೆಯನ್ನು ಮಾಡಿದೆ.
ಪುರಿಯಲ್ಲಿರುವ 500 ಹೋಟೆಲ್ಗಳು, 200ಲಾಡ್ಜ್ಗಳು, ಸುಮಾರು 100 ಆಶ್ರಮಗಳು, ಧರ್ಮಶಾಲಾಗಳು ಭಕ್ತಾಧಿಗಳಿಂದ ತುಂಬಿ ತುಳುಕುತ್ತಿದೆ. ಸರ್ಕಾರ ಪ್ರವಾಸಿಗರಿಗೆ ಉಳಿದುಕೊಳ್ಳಲೆಂದು 33 ನಬಕಲೇಬರ ಗ್ರಾಮಗಳನ್ನು ಸ್ಥಾಪಿಸಿದೆ.
ಸಾರ್ವಜನಿಕರನ್ನು ನಿಯಂತ್ರಿಸಲೆಂದು ಮತ್ತು ಭಯೋತ್ಪಾದಕ ದಾಳಿ ಭೀತಿಯಿಂದಾಗಿ 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರಿಯಾದ್ಯಂತ ಬಿಗಿ ಬಂದೋಬಸ್ತ್ಗಳನ್ನು ಏರ್ಪಡಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಈ ರಥಯಾತ್ರೆಯ ಅಂಗವಾಗಿ ಸಮಸ್ತ ನಾಡಿನ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.