News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 13th November 2025


×
Home About Us Advertise With s Contact Us

ಭಾರತದ 5.6ಲಕ್ಷ ಫೇಸ್‌ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ

ನವದೆಹಲಿ: ಭಾರತದ ಸುಮಾರು 5.6ಲಕ್ಷ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಕ್ಯಾಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ಕದ್ದಿದೆ ಎಂಬುದಾಗಿ ಫೇಸ್‌ಬುಕ್ ಸಂಸ್ಥೆ ಹೇಳಿದೆ. ಭಾರತ ಸರ್ಕಾರ ಕಳುಹಿಸಿರುವ ನೋಟಿಸ್‌ಗೆ ಪ್ರತಿಕ್ರಿಯೆ ನೀಡಿರುವ ಫೇಸ್‌ಬುಕ್, ‘ದಿಸ್‌ಇಸ್‌ಮೈಜಿಟಲ್‌ಲೈಫ್’ ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡವರ ಮಾಹಿತಿಗಳು ಸೋರಿಕೆಯಾಗಿರುವ ಸಾಧ್ಯತೆ...

Read More

ಉದ್ಘಾಟನೆಗೆ ಸಿದ್ಧವಾಗಿದೆ ದೇಶದ ಮೊದಲ ಸ್ಮಾರ್ಟ್, ಗ್ರೀನ್ ಹೈವೇ

ನವದೆಹಲಿ: ರಾಷ್ಟ್ರ ರಾಜಧಾನಿಯ ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸುವ ಭರವಸೆಯೊಂದಿಗೆ ಭಾರತದ ಮೊತ್ತ ಮೊದಲ ಸ್ಮಾರ್ಟ್ ಮತ್ತು ಗ್ರೀನ್ ಹೈವೇ ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ. ಬರೋಬ್ಬರಿ ರೂ.11,000 ಕೋಟಿ ವೆಚ್ಚದಲ್ಲಿ ಈ ಹೈವೇ ನಿರ್ಮಾಣಗೊಂಡಿದ್ದು, 135 ಕಿಲೋಮೀಟರ್‌ಗಳ 6 ಲೇನ್‌ಗಳ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್ ವೇ...

Read More

ಎಪ್ರಿಲ್ 16ರಿಂದ ಮೋದಿ ಯುಕೆ, ಸ್ವೀಡನ್ ಪ್ರವಾಸ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಎಪ್ರಿಲ್ 16ರಿಂದ ಸ್ವೀಡನ್ ಮತ್ತು ಯುಕೆ ಪ್ರವಾಸವನ್ನು ಹಮ್ಮಿಕೊಳ್ಳಲಿದ್ದಾರೆ. ಬಂಡವಾಳ ಹೂಡಿಕೆ ಸೇರಿದಂತೆ ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸುವ ಗುರಿಯನ್ನು ಈ ಪ್ರವಾಸ ಹೊಂದಿದೆ. ಯುಕೆಯಲ್ಲಿ ಪ್ರಧಾನಿಗಳು ಕಾಮನ್ವೆಲ್ತ್ ಹೆಡ್ಸ್ ಆಫ್ ಗವರ್ನ್‌ಮೆಂಟ್ ಮೀಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು...

Read More

ಜಾಗತಿಕ ಸೈನ್ಸ್ ಫಿಕ್ಷನ್ ಅವಾರ್ಡ್‌ಗೆ ಕೋಲ್ಕತ್ತಾ ಬರಹಗಾರ್ತಿ ಹೆಸರು

ಕೋಲ್ಕತ್ತಾ: ಬರಹಗಾರ್ಥಿ, ಎಡಿಟರ್ ಮತ್ತು ಜಾಧವ್‌ಪುರ ಯೂನಿವರ್ಸಿಟಿಯ ಹಳೆ ವಿದ್ಯಾರ್ಥಿನಿಯಾಗಿರುವ ಕೋಲ್ಕತ್ತಾ ಮೂಲದ ಮಿಮಿ ಮಂಡಲ್ ಅವರು ಜಾಗತಿಕ ಸೈನ್ಸ್ ಫಿಕ್ಷನ್ ಅವಾರ್ಡ್ ‘2018 ಹುಗೊ ಅವಾರ್ಡ್’ಗೆ ನಾಮನಿರ್ದೇಶನಗೊಂಡಿದ್ದಾರೆ. ಸೈನ್ಸ್ ಫಿಕ್ಷನ್ ಬುಕ್-ದಿ ಅಥಾಲಜಿ ’ಲುಮಿನೆಸೆಂಟ್ ಥ್ರೆಡ್ಸ್’ನ್ನು ಕೋ-ಎಡಿಟ್ ಮಾಡಿರುವುದಕ್ಕೆ ಅವರು...

Read More

ಭಯೋತ್ಪಾದನೆಗೆ ಉತ್ತೇಜನ: 1.2 ಮಿಲಿಯನ್ ಅಕೌಂಟ್ ಸಸ್ಪೆಂಡ್

ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಹೊಂದಿದ್ದ ಸುಮಾರು 1.2 ಮಿಲಿಯನ್ ಟ್ವಿಟರ್ ಅಕೌಂಟ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಟ್ವಿಟರ್ ಸಂಸ್ಥೆ ಹೇಳಿದೆ. 2015ರ ಆಗಸ್ಟ್‌ನಿಂದ ಸುಮಾರು 1.2 ಮಿಲಿಯನ್ ಟ್ವಿಟರ್‌ಗಳನ್ನು ಅಮಾನತುಪಡಿಸಲಾಗಿದೆ ಎಂದಿದೆ. ‘2017ರ ಜುಲೈ1ರಿಂದ 2017ರ ಡಿಸೆಂಬರ್ 31ರವರೆಗೆ ಒಟ್ಟು 274,460...

Read More

ಪದವಿಪೂರ್ವ ವಿಜ್ಞಾನ ಪಠ್ಯಪುಸ್ತಕ ಇನ್ನು ಕನ್ನಡದಲ್ಲೂ ಲಭ್ಯ

ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷದಿಂದ ಪದವಿಪೂರ್ವ ವಿಜ್ಞಾನ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಕನ್ನಡದಲ್ಲೂ ಲಭ್ಯವಾಗಲಿದೆ. ಮುಂದಿನ 15 ದಿನಗಳಲ್ಲಿ ಈ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಗ್ರಾಮೀಣ ಭಾಗದ, ಕನ್ನಡ ಮಾಧ್ಯಮ ಶಾಲೆಯಿಂದ ಬಂದ ಮಕ್ಕಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ವಿಜ್ಞಾನ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರ...

Read More

ಬಿಜೆಪಿ ಸ್ಥಾಪನಾ ದಿನ: ಕಾರ್ಯಕರ್ತರ ಪರಿಶ್ರಮ ಸ್ಮರಿಸಿದ ಮೋದಿ

ನವದೆಹಲಿ: ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಪಕ್ಷದ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಬಿಜೆಪಿ ಕಟ್ಟಲು ಮತ್ತು ಬಲಿಷ್ಠ ಭಾರತ ನಿರ್ಮಾಣಕ್ಕೆ ನಿರಂತರ ಪರಿಶ್ರಮಪಟ್ಟ ಕಾರ್ಯಕರ್ತರನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತೇವೆ ಎಂದಿದ್ದಾರೆ. ಸರಣಿ ಟ್ವಿಟ್ ಮಾಡಿರುವ ಮೋದಿ ’ಕಾರ್ಯಕರ್ತರು...

Read More

ಕಾಮನ್ವೆಲ್ತ್ ಗೇಮ್ಸ್: ವೇಟ್ ಲಿಫ್ಟರ್ ಸಂಜೀತಾ ಚಾನುಗೆ ಬಂಗಾರ

ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಳುಗಳು ಅತ್ಯುತ್ತಮ ಪ್ರದರ್ಶನ ನೀಡಿತ್ತಿದ್ದು, ಗುರುವಾರ ಮಹಿಳಾ ವೇಟ್‌ಲಿಫ್ಟರ್ ಸಂಜಿತಾ ಚಾನು ಬಂಗಾರದ ಪದಕವನ್ನು ಜಯಿಸಿದ್ದಾರೆ. 53 ಕೆಜಿ ಕೆಟಗರಿಯಲ್ಲಿ ಕ್ರಮವಾಗಿ 81 ಕೆಜಿ, 82 ಕೆಜಿ ಮತ್ತು 84 ಕೆಜಿಯಂತೆ...

Read More

ತಂಬಾಕು ಉತ್ಪನ್ನಗಳಿಗೆ ಹೊಸ ‘ಹೆಲ್ತ್ ವಾರ್ನಿಂಗ್’ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ತಂಬಾಕು ಉತ್ಪನ್ನಗಳಿಗೆ ಆರೋಗ್ಯ ಸಚಿವಾಲಯ ಹೊಸ ‘ಹೆಲ್ತ್ ವಾರ್ನಿಂಗ್’ಗಳನ್ನು ಬಿಡುಗಡೆಗೊಳಿಸಿದೆ. ಇನ್ನು ಮುಂದೆ ಭಯಂಕರವೆನಿಸುವ ನೈಜ ಚಿತ್ರ, ಗಂಭೀರ ಸಂದೇಶ ಮತ್ತು ತಂಬಾಕು ಬಿಡಲು ಸಹಾಯ ಮಾಡುವ ಟೋಲ್ ಫ್ರೀ ನಂಬರ್ ಇವುಗಳ ಮೇಲಿರಲಿದೆ. ತಂಬಾಕು ಪ್ಯಾಕೆಟ್, ಬೀಡಿಗಳ ಎರಡೂ...

Read More

ಮುಂಬರುವ ವರ್ಷಗಳಲ್ಲಿ 56 ನೂತನ ಏರ್‌ಪೋರ್ಟ್‌ಗಳ ಕಾರ್ಯಾರಂಭ: ಸುರೇಶ್ ಪ್ರಭು

ನವದೆಹಲಿ: ಮುಂದಿನ ಕೆಲವೇ ವರ್ಷದಲ್ಲಿ ದೇಶದಲ್ಲಿ 56 ಹೊಸ ವಿಮಾನನಿಲ್ದಾಣಗಳು ಕಾರ್ಯಾರಂಭ ಮಾಡಲಿವೆ ಎಂದು ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ. ನವದೆಹಲಿಯಲ್ಲಿ ಗ್ಲೋಬಲ್ ಲಾಜಿಸ್ಟಿಕ್ಸ್ ಸಮಿತ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತದಂತಹ ದೇಶಗಳಿಗೆ ವ್ಯಾಪಾರವನ್ನು ವೃದ್ಧಿಸಲು, ದೇಶಿ ಮತ್ತು...

Read More

Recent News

Back To Top