Date : Thursday, 02-04-2015
ನೈರೋಬಿ: ಈಶಾನ್ಯ ಕೀನ್ಯಾದ ಮೊಯಿ ವಿಶ್ವದ್ಯಾಲಯದ ಮೇಲೆ ಗುರುವಾರ ಶಸ್ತ್ರಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 15 ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಒಟ್ಟು 30 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ಗಾಯಗೊಂಡಿದ್ದ ನಾಲ್ವರನ್ನು ವಿಶೇಷ ವಿಮಾನದ ಮೂಲಕ...
Date : Thursday, 02-04-2015
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಬೆಂಗಳೂರಿಗೆ ಆಗಮಿಸಿದ್ದರು. ಅವರೊಂದಿಗೆ ಸಚಿವ ವೆಂಕಯ್ಯ ನಾಯ್ಡು ಅವರೂ ಇದ್ದಾರೆ. ಎಚ್‌ಎಎಲ್ ವಿಮಾನನಿಲ್ದಾಣದಲ್ಲಿ ಬಂದಿಳಿದ ಅವರನ್ನು ರಾಜ್ಯಪಾಲ ವಜುಭಾಯ್ ವಾಲಾ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು. ಬಿಜೆಪಿ...
Date : Thursday, 02-04-2015
ನವದೆಹಲಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತನ್ನ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರಾಕರಿಸಿದ್ದಾರೆ. ಕೀಳು ಮನಸ್ಥಿತಿಯ ಜನರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಗಿರಿರಾಜ್ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು...
Date : Thursday, 02-04-2015
ಇಸ್ಲಾಮಾಬಾದ್: ಪಾಕಿಸ್ಥಾನದ ಮಾಜಿ ಸೇನಾಡಳಿತಗಾರ ಪರ್ವೇಜ್ ಮುಶರಫ್ ವಿರುದ್ಧ ಗುರುವಾರ ಇಸ್ಲಾಮಾಬಾದ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದೆ. 2007ರ ಲಾಲ್ ಮಸೀದಿಯ ಧರ್ಮಗುರು ಅಬ್ದುಲ್ ರಶೀದ್ ಘಾಜಿ ಅವರ ಹತ್ಯೆ ಪ್ರಕರಣದ ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರಾಗಲು ಪದೇ ಪದೇ ವಿಫಲರಾಗುತ್ತಿರುವ...
Date : Thursday, 02-04-2015
ನವದೆಹಲಿ: ಆಂತರಿಕ ಕಲಹದಿಂದ ಕಂಗೆಟ್ಟಿರುವ ಎಎಪಿಯಲ್ಲಿ ಉಚ್ಛಾಟನೆಯ ಪರ್ವ ಮುಂದುವರೆದಿದೆ. ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರ ಆಪ್ತ ಎಎಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಕೇಶ್ ಸಿನ್ಹಾ ಅವರನ್ನು ಗುರುವಾರ ಅಮಾನತುಗೊಳಿಸಲಾಗಿದೆ. ಯಾದವ್ ಅವರನ್ನು ಶಿಸ್ತುಪಾಲನಾ ಸಮಿತಿಯಿಂದ ಉಚ್ಛಾಟನೆಗೊಳಿಸಿದ್ದರ ವಿರುದ್ಧ...
Date : Thursday, 02-04-2015
ಮುಂಬಯಿ: ಜನಧನ ಯೋಜನೆಯಡಿ ಸುಮಾರು 14 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಅಕೌಂಟ್‌ನಲ್ಲಿ ಜಮಾವಣೆಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಲ್ಲದೇ 20 ವರ್ಷಗಳ ಆರ್ಥಿಕ ಸೇರ್ಪಡೆಗೆ ಈಗಿನಿಂದಲೇ ಮಾರ್ಗಸೂಚಿಗಳನ್ನು ತಯಾರಿಸುವಂತೆ ಅವರು ಆರ್‌ಬಿಐಗೆ ಸಲಹೆ ನೀಡಿದರು. ಮುಂಬಯಿನಲ್ಲಿ ಗುರುವಾರ...
Date : Thursday, 02-04-2015
ಬೆಂಗಳೂರು: ಎಪ್ರಿಲ್ 3ರಿಂದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿರುವ ಹಿನ್ನಲೆಯಲ್ಲಿ ಗುರುವಾರ ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ರಾಷ್ಟ್ರೀಯ ಪದಾಧಿಕಾರಿಗಳ ಮತ್ತು ಪ್ರದೇಶ ಅಧ್ಯಕ್ಷರುಗಳು ಸಭೆ ನಡೆಯಿತು. ನಾಳೆಯಿಂದ ಆರಂಭವಾಗಿ ಎ.4ರವರೆಗೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಇದಕ್ಕಾಗಿ...
Date : Thursday, 02-04-2015
ನವದೆಹಲಿ: ದೇಶದಾದ್ಯಂತ ಗುರುವಾರ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ದೇಶದ ಜನತೆಗೆ ಶುಭ ಕೋರಿದ್ದಾರೆ. ‘ಇಡೀ ಮನುಕುಲಕ್ಕೆ ಶಾಂತಿ ಮತ್ತು ಕಲ್ಯಾಣದ ಹಾದಿ ತೋರಿಸಿದ ಭಗವಾನ್ ಮಹಾವೀರನಿಗೆ ನಾನು ತಲೆ...
Date : Thursday, 02-04-2015
ಚಂಡೀಗಢ: ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾರ ಅಕ್ರಮ ಭೂ ಒಪ್ಪಂದಗಳ ವಿರುದ್ಧ ಸಮರ ಸಾರಿದ ಹಿನ್ನಲೆಯಲ್ಲಿ ಆಗಿನ ಹರಿಯಾಣದ ಕಾಂಗ್ರೆಸ್ ಸರ್ಕಾರದಿಂದ 44 ಬಾರಿ ವರ್ಗಾವಣೆ ಶಿಕ್ಷೆಯಾಗಿದ್ದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರಿಗೆ ಬಿಜೆಪಿ ಸರ್ಕಾರ ಬಂದರೂ ನೆಮ್ಮದಿ...
Date : Thursday, 02-04-2015
ಹೈದರಾಬಾದ್: ವಿಜಯವಾಡ ಮತ್ತು ಗುಂಟೂರು ಪ್ರದೇಶದಲ್ಲಿ ಬರುವ ತನ್ನ ನೂತನ ರಾಜಧಾನಿಗೆ ಅಮರಾವತಿ ಎಂದು ಹೆಸರಿಡಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ. ಈ ಬಗೆಗಿನ ನಿರ್ಣಯವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ರಾಜ್ಯ ಸಂಪುಟ ಬುಧವಾರ ಅಂಗೀಕಾರಗೊಳಿಸಿತು. ಅಮರಾವತಿ ಪ್ರದೇಶ...