ಚಂಡೀಗಢ: ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾರ ಅಕ್ರಮ ಭೂ ಒಪ್ಪಂದಗಳ ವಿರುದ್ಧ ಸಮರ ಸಾರಿದ ಹಿನ್ನಲೆಯಲ್ಲಿ ಆಗಿನ ಹರಿಯಾಣದ ಕಾಂಗ್ರೆಸ್ ಸರ್ಕಾರದಿಂದ 44 ಬಾರಿ ವರ್ಗಾವಣೆ ಶಿಕ್ಷೆಯಾಗಿದ್ದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರಿಗೆ ಬಿಜೆಪಿ ಸರ್ಕಾರ ಬಂದರೂ ನೆಮ್ಮದಿ ಇಲ್ಲದಂತಾಗಿದೆ.
ಬುಧವಾರ ಸಂಜೆ ಹರಿಯಾಣ ಸರ್ಕಾರ ಅವರನ್ನು ಟ್ರಾನ್ಸ್ಪೋರ್ಟ್ ಕಮಿಷನರ್ ಹುದ್ದೆಯಿಂದ ತೆಗೆದು ಹಾಕಿ, ಲೋ ಪ್ರೊಫೈಲ್ ಅರ್ಕಿಯಾಲಜಿ ಮತ್ತು ಮ್ಯೂಸಿಯಂ ಡಿಪಾರ್ಟ್ಮೆಂಟ್ಗೆ ವರ್ಗಾವಣೆ ಮಾಡಿದೆ. ಇದು ಖೆಮ್ಕಾ ಅವರ 23 ವರ್ಷಗಳ ಸೇವಾ ಜೀವನದ 45ನೇ ವರ್ಗಾವಣೆಯಾಗಿದೆ.
‘ಟ್ರಾನ್ಸ್ಪೋರ್ಟ್ ವಲಯದಲ್ಲಿದ್ದ ಭ್ರಷ್ಟಾಚಾರವನ್ನು ಕಿತ್ತು ಹಾಕಲು ನಾನು ಸಾಕಷ್ಟು ಪರಿಶ್ರಮಪಟ್ಟಿದ್ದೆ, ನನ್ನನ್ನು ಮತ್ತೆ ವರ್ಗಾವಣೆ ಮಾಡಿರುವುದು ತುಂಬಾ ನೋವು ತಂದಿದೆ’ ಎಂದು 49 ವರ್ಷದ ಖೇಮ್ಕಾ ಬೇಸರದಿಂದ ಟ್ವೀಟ್ ಮಾಡಿದ್ದಾರೆ.
ರಾಬರ್ಟ್ ವಾದ್ರಾ ಅಕ್ರಮಗಳನ್ನು ಟಾರ್ಗೆಟ್ ಮಾಡಿದ್ದ ವೇಳೆ ಖೇಮ್ಕಾ ಅವರ ಬೆನ್ನಿಗೆ ನಿಂತಿದ್ದ ಬಿಜೆಪಿ ಇದೀಗ ಅವರನ್ನು ಮತ್ತೆ ವರ್ಗಾವಣೆ ಮಾಡಿರುವುದು ಹರಿಯಾಣ ಜನತೆಯನ್ನೂ ಅಸಮಾಧಾನಗೊಳ್ಳುವಂತೆ ಮಾಡಿದೆ.
ಆದರೆ ಸರ್ಕಾರ ಇದೊಂದು ವಾಡಿಕೆಯ ವರ್ಗಾವಣೆ ಎಂದು ಹೇಳಿಕೊಂಡಿದ್ದು, ಇತರ 8 ಐಎಎಸ್ ಅಧಿಕಾರಿಗಳನ್ನೂ ವರ್ಗಾವಣೆ ಮಾಡಿದೆ.
ಓವರ್ ಲೋಡೆಡ್ ಲಾರಿಗಳ ಮೇಲೆ ದಂಡ ವಿಧೀಸುವಂತೆ ಆಜ್ಞೆ ಹೊರಡಿಸಿದ್ದ ಖೇಮ್ಕಾ ಅವರನ್ನು ಮೈನಿಂಗ್ ಲಾಬಿಯ ಒತ್ತಡಕ್ಕೆ ಮಣಿದು ಸರ್ಕಾರ ವರ್ಗಾವಣೆ ಮಾಡಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.