Date : Tuesday, 18-07-2017
ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿರುವ ವೆಂಕಯ್ಯ ನಾಯ್ಡು ಅವರು, ತನಗೆ ಬೆಂಬಲವಾಗಿ ನಿಂತ ಪ್ರಧಾನಿ ನರೇಂದ್ರ ಮೋದಿ ಮತ್ತು ಮಿತ್ರ ಪಕ್ಷಗಳಿಗೆ ಧನ್ಯವಾದಗಳನ್ನು ಹೇಳಿದರು. ‘ನನ್ನ ಮೇಲೆ ನಂಬಿಕೆಯಿಟ್ಟ ಮೋದಿ, ಷಾ, ಇತರ ನಾಯಕರಿಗೆ ಧನ್ಯವಾದಗಳು. ಉಪರಾಷ್ಟ್ರಪತಿ ಚುನಾವಣೆಗೆ...
Date : Tuesday, 18-07-2017
ಬೆಂಗಳೂರು: ಕಾನೂನಾತ್ಮಕವಾಗಿ ಕರ್ನಾಟಕ ಪ್ರತ್ಯೇಕ ಧ್ವಜವನ್ನು ಹೊಂದಬಹುದೇ ಎಂದು ಪರಿಶೀಲನೆ ನಡೆಸುವ ಸಲುವಾಗಿ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದೆ. ಅಲ್ಲದೇ ಧ್ವಜದ ಸಂಭಾವನೀಯ ವಿನ್ಯಾಸದ ಬಗ್ಗೆಯೂ ಗಮನಿಸುವಂತೆ ಸಮಿತಿಗೆ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ. ಒಂದು ವೇಳೆ ಪ್ರತ್ಯೇಕ ಧ್ವಜ ಹೊಂದುವುದು...
Date : Tuesday, 18-07-2017
ಸಿಂಧ್: ಪಾಕಿಸ್ಥಾನದ ಸಿಂಧ್‌ನಲ್ಲಿ ಸ್ವಾತಂತ್ರ್ಯದ ಕೂಗು ಬಲವಾಗಿ ಕೇಳಿ ಬರುತ್ತಿದೆ. ಇಲ್ಲಿನ ಹಲವಾರು ಪ್ರತ್ಯೇಕತಾವಾದಿ ಸಂಘಟನೆಗಳು ತಮಗೆ ಸ್ವಾತಂತ್ರ್ಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆಗೆ ಇಳಿದಿವೆ. ಪಾಕ್‌ನಿಂದ ನಿಷೇಧಕ್ಕೊಳಪಟ್ಟಿರುವ ಪ್ರತ್ಯೇಕ ಸಿಂಧ್ ಹೋರಾಟ ಸಂಘಟನೆ ಜೇ ಸಿಂಧ್ ಮುತ್ತಹಿದ ಮಹಝ್(ಜೆಎಸ್‌ಎಂಎಂ)ನ ನೇತೃತ್ವದಲ್ಲಿ ಭಾರೀ...
Date : Tuesday, 18-07-2017
ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದನ್ನು ಪಾಕಿಸ್ಥಾನ ಅನಧಿಕೃತವಾಗಿ ಆಕ್ರಮಿಸಿಕೊಂಡಿದೆ. ಅಲ್ಲಿನ ವ್ಯಕ್ತಿಗೆ ವೈದ್ಯಕೀಯ ವೀಸಾ ನೀಡುತ್ತೇವೆ. ಅದಕ್ಕೆ ಪಾಕಿಸ್ಥಾನದ ಪತ್ರದ ಅವಶ್ಯಕತೆ ಇಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಭಾರತದ ಹೊಸ ನಿಯಮದ...
Date : Tuesday, 18-07-2017
ನವದೆಹಲಿ: ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರಿಗೆ ಹೆಚ್ಚುವರಿಯಾಗಿ ಮಾಹಿತಿ ಮತ್ತು ಪ್ರಸಾರ ಖಾತೆಯ ಜವಾಬ್ದಾರಿಯನ್ನು ನೀಡಲಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಹೆಚ್ಚುವರಿಯಾಗಿ ನಗರಾಭಿವೃದ್ಧಿ ಖಾತೆಯನ್ನು ನೀಡಲಾಗಿದೆ. ಎನ್‌ಡಿಎಯ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ...
Date : Tuesday, 18-07-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕನಸಿನ ಯೋಜನೆಯಾದ ಬುಲೆಟ್ ಟ್ರೈನ್ ಯೋಜನೆ ವೇಗ ಪಡೆದುಕೊಳ್ಳುತ್ತಿದೆ. ಹಲವಾರು ಬುಲೆಟ್ ಟ್ರೈನ್ ಯೋಜನೆಗಳ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನ ನಡೆಸುತ್ತಿರುವ ಹೈ ಸ್ಪೀಡ್ ರೈಲ್ವೇ ಕಾರ್ಪೋರೇಶನ್(ಎಚ್‌ಎಸ್‌ಆರ್‌ಸಿ) ದೆಹಲಿ-ಅಮೃತಸರ ಯೋಜನೆಯ ಕಾರ್ಯಸಾಧ್ಯತೆಯ ಅಂತಿಮ ವರದಿ ನೀಡಿದೆ....
Date : Tuesday, 18-07-2017
ನವದೆಹಲಿ : ಸಂಸತ್ ಭವನದ ಎದುರು ಕರ್ನಾಟಕದ ಬಿಜೆಪಿ ಸಂಸತ್ ಸದಸ್ಯರು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು (ಜುಲೈ 18) ಪ್ರತಿಭಟನೆ ನಡೆಸಿ ಕೆಎಫ್ಡಿ, ಪಿಎಫ್ಐ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ...
Date : Tuesday, 18-07-2017
ನವದೆಹಲಿ: ಮಳೆಗಾಲದ ಅಧಿವೇಶನದ ಬಳಿಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟವನ್ನು ವಿಸ್ತರಿಸುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಅತೀ ಪ್ರಮುಖ ರಕ್ಷಣಾ ಖಾತೆ ಮತ್ತು ಪರಿಸರ ಖಾತೆಗೆ ಪೂರ್ಣ ಪ್ರಮಾಣದ ಸಚಿವರುಗಳಿಲ್ಲ. ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ತಂತ್ರಜ್ಞಾನ ಸಚಿವ...
Date : Tuesday, 18-07-2017
ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆಗೆ ಮತ್ತಷ್ಟು ಒತ್ತು ನೀಡುವ ಸಲುವಾಗಿ ಆರ್‌ಬಿಐ ಕರೆನ್ಸಿ ಸೆಕ್ಯೂರಿಟಿ ಫೀಚರ‍್ಸ್‌ಗಳಿಗೆ ಹೊಸ ಟೆಂಡರ್ ಕರೆದಿದೆ. ಇದರನ್ವಯ ಎರಡು ವರ್ಷದೊಳಗೆ ದೇಶದೊಳಗಡೆಯೇ ಪೂರೈಕೆದಾರರು ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದು ಮತ್ತು ಸ್ಥಳಿಯ ಕಂಟೆಂಟ್‌ಗಳನ್ನು ಹೆಚ್ಚಿಸುವುದು ಕಡ್ಡಾಯವಾಗಲಿದೆ. ‘ಮೇಕ್...
Date : Tuesday, 18-07-2017
ನವದೆಹಲಿ: ಬಿಎಸ್‌ಎಫ್ ಮತ್ತು ಪಾಕಿಸ್ಥಾನದ ರೇಂಜರ‍್ಸ್‌ಗಳ ನಡುವೆ ಸೋಮವಾರ ಜಮ್ಮು ಕಾಶ್ಮೀರದ ಸಾಂಬಾ ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಧ್ವಜ ಸಭೆ ನಡೆಯಿತು. ಪಾಕಿಸ್ಥಾನ ರೇಂಜರ‍್ಸ್‌ಗಳ ಮನವಿಯ ಮೇರೆಗೆ ಬಿಎಸ್‌ಎಫ್ ಮತ್ತು ಪಾಕಿಸ್ಥಾನ ಬಾರ್ಡರ್ ಗಾರ್ಡಿಂಗ್ ಫೋರ್ಸ್ ನಡುವೆ ಕಮಾಂಡೆಂಟ್ ವಿಂಗ್...