ಬಿಕನೇರ್: 80 ವರ್ಷಗಳ ಹಿಂದೆ ರಚಿಸಿದ ಮತ್ತು ಹಿಂದೂ ಬನರಾಸ್ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಜಯಿಸಿದ ರಾಮಾಯಣದ ಉರ್ದು ಅವತರಣಿಕೆ ಇದೀಗ ರಾಜಸ್ಥಾನದ ಬಿಕನೇರ್ನಲ್ಲಿ ಸೌಹಾರ್ದದ ಬಂಧಗಳನ್ನು ನಿರ್ಮಾಣ ಮಾಡುತ್ತಿದೆ.
ಬಿಕನೇರ್ನ ಕಲ್ಚುರಲ್ ಸೊಸೈಟಿಯು 1935ರಲ್ಲಿ ಬರೆಯಲ್ಪಟ್ಟ ಉರ್ದು ರಾಮಾಯಣದ ಬಗ್ಗೆ ಕವಿತೆ ವಾಚನ ಸ್ಪರ್ಧೆಯನ್ನು ಏರ್ಪಡಿಸಿತ್ತು. ಮೆಹಫಿಲ್ ಎ ಅದಬ್ ಸೊಸೈಟಿ ಮತ್ತು ಪರ್ಯಟನ್ ಲೇಖನ್ ಸಂಘ ಜಂಟಿಯಾಗಿ ಇದನ್ನು ಆಯೋಜನೆ ಮಾಡಿತ್ತು.
ಉರ್ದು ರಾಮಾಯಣವನ್ನು ಕವಿ ಮೌಲಾನಾ ಬಾದ್ಶಾ ಹುಸೈನ್ ಖಾನ್ ರಾಣಾ ‘ಕಖ್ನವಿ’ಯವರು 1935ರಲ್ಲಿ ರಚಿಸಿದ್ದರು.
ಈ ರಾಮಾಯಣ ಹಿಂದೂ ಮತ್ತು ಮುಸ್ಲಿಂ ಬಾಂಧವ್ಯದ ಅಪೂರ್ವ ಸಂಕೇತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.