Date : Friday, 19-05-2017
ಶ್ರೀನಗರ: ಇನ್ನು ಮುಂದೆ ಗುಟ್ಕಾ ಪಾನ್ ಮಸಾಲ ತಿನ್ನುವವವರು ಶೇ.204ರಷ್ಟು ಸೆಸ್ ನೀಡಲು ಸಿದ್ಧರಾಗಿರಬೇಕು. ಏರೇಟೆಡ್ ವಾಟರ್ ಖರೀದಿಸುವವರು ಶೇ.12ರಷ್ಟು ಸೆಸ್ ನೀಡಬೇಕು. ದೊಡ್ಡ ದೊಡ್ಡ ಕಾರುಗಳನ್ನು ಖರೀದಿ ಮಾಡುವವರು ಶೇ.15ರಷ್ಟು ಸೆಸ್ ನೀಡಬೇಕು. ಜುಲೈ1ರಿಂದಲೇ ಈ ನಿಯಮ ಜಾರಿಗೆ ಬರಲಿದೆ....
Date : Friday, 19-05-2017
ನವದೆಹಲಿ: ಕಾಶ್ಮೀರ ಕಣಿವೆಯಲ್ಲಿನ ಅಶಾಂತಿಗೆ, ಉದ್ವಿಗ್ನ ಪರಿಸ್ಥಿತಿಗಳಿಗೆ ಪಾಕಿಸ್ಥಾನವೇ ಕಾರಣ ಎಂದು ಭಾರತ ಆರೋಪಿಸುತ್ತಲೇ ಬಂದಿದೆ. ಇದೀಗ ಈ ಆರೋಪ ಮಾಧ್ಯಮವೊಂದು ನಡೆಸಿದ ಸ್ಟಿಂಗ್ ಆಪರೇಶನ್‌ನಲ್ಲಿ ಸಾಬೀತುಗೊಂಡಿದೆ. ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್‌ನ ಹಲವಾರು ಮಂದಿ ಮುಖಂಡರುಗಳು ಪಾಕಿಸ್ಥಾನದಿಂದ ಬಂದ ಹಣವನ್ನು...
Date : Friday, 19-05-2017
ಕನ್ನಂನ್ಕರ ವೆಲಾಯುಧನ್ ರಾಮನ್ ಪಿಳ್ಳೈ ಅವರು ಭಾರತ ಕಂಡ ಒರ್ವ ಶ್ರೇಷ್ಠ ಕಾದಂಬರಿಕಾರ ಮತ್ತು ನಾಟಕಕಾರ. ಮಾತ್ರವಲ್ಲದೇ ಮಲಯಾಳಂನ ಖ್ಯಾತ ಪತ್ರಕರ್ತನೂ ಹೌದು. 1858ರ ನವೆಂಬರ್ 8ರಂದು ತ್ರಿವಂಕೂರಿನಲ್ಲಿ ಜನಿಸಿದ ಇವರ ತಂದೆ ಸಂಸ್ಕೃತ ವಿದ್ವಂಸರು. ಪತ್ರಕೋದ್ಯಮದ ಪ್ರವರ್ತಕ ಎನಿಸಿದ ಇವರು...
Date : Friday, 19-05-2017
ಪುಣೆ: ದೇಶದಲ್ಲೇ ಮೊದಲ ಬಾರಿಗೆ ಪುಣೆಯ ಆಸ್ಪತ್ರೆಯೊಂದು ಗರ್ಭಾಶಯ ಕಸಿಯನ್ನು ಮಾಡಿದ್ದು, ಅದು ಯಶಸ್ವಿಯಾಗಿದೆ. ಪುಣೆಯ ಗ್ಯಾಲಕ್ಷಿ ಕೇರ್ ಲ್ಯಾಪ್ರೊಸ್ಕೋಪಿ ಇನ್‌ಸ್ಟಿಟ್ಯೂಟ್ 44 ವರ್ಷದ ತಾಯಿಯ ಗರ್ಭವನ್ನು ಆಕೆಯ 21 ವರ್ಷದ ಪುತ್ರಿಗೆ ಯಶಸ್ವಿಯಾಗಿ ಅಳವಡಿಸಿದೆ. ಯುವತಿಗೆ ಗರ್ಭಾಶಯವೇ ಇರಲಿಲ್ಲ, ಇದರಿಂದಾಗಿ...
Date : Friday, 19-05-2017
ಕೊಚ್ಚಿ: ಹೆಣ್ಣು ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಶಾಲೆಗಳಿಗೂ ಸ್ಯಾನಿಟರಿ ಪ್ಯಾಡ್‌ಗಳನ್ನು ಹಂಚುವ ಕ್ರಾಂತಿಕಾರಿ ಯೋಜನೆಯನ್ನು ಕೇರಳ ಆರಂಭಿಸಿದೆ. ‘ಶೀ ಪ್ಯಾಡ್ ‘ ಯೋಜನೆಯಡಿ ಸ್ಯಾನಿಟರಿ ಪ್ಯಾಡ್‌ಗಳನ್ನು ಶಾಲೆಗಳಿಗೆ ಹಂಚುವ ಕಾರ್ಯ ಮಾಡಲಿದ್ದೇವೆ ಎಂದು ಅಲ್ಲಿನ ಮುಖ್ಯಮಂತ್ರಿ ಪಿನರಾಯಿ...
Date : Friday, 19-05-2017
ನವದೆಹಲಿ: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಯಾದವ್ ಅವರ ಪ್ರಕರಣದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತಕ್ಕೆ ಗೆಲುವಾಗಿದೆ. ಈ ಸಂತೋಷವನ್ನು ಹಲವಾರು ಮಂದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೇ ರೀತಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರೂ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿದ ತೀರ್ಪಿನ ಪರ...
Date : Friday, 19-05-2017
ನವದೆಹಲಿ: ಬಾಹುಬಲಿ ಸಿನಿಮಾ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ನಿರ್ಮಿಸಿರುವ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಇದೀಗ ಉತ್ತಮ ಕಾರ್ಯಕ್ಕಾಗಿ ಹಣವನ್ನು ದಾನ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸ್ವಚ್ಛತೆಗಾಗಿ 6 ಲಕ್ಷ ರೂಪಾಯಿಗಳನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ. ಬಳ್ಳಾರಿಯ ಉಪ ಜಿಲ್ಲಾಧಿಕಾರಿಗೆ 6 ಲಕ್ಷ...
Date : Friday, 19-05-2017
ನವದೆಹಲಿ: ಕೇವಲ ಒಂದು ರೂಪಾಯಿಗೆ ಭಾರತದ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಜಯ ಸಿಗುವಂತೆ ಮಾಡಿದ ಹಿರಿಯ ವಕೀಲ ಹರೀಶ್ ಸಾಲ್ವೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಸಚಿವೆ ಸುಷ್ಮಾ ಸ್ವರಾಜ್, ಜೇಟ್ಲಿ ಸೇರಿದಂತೆ ಸಮಸ್ತ...
Date : Friday, 19-05-2017
ನವದೆಹಲಿ: ಇಹಲೋಕವನ್ನು ತ್ಯಜಿಸಿರುವ ಕೇಂದ್ರ ಪರಿಸರ ಸಚಿವರಾಗಿದ್ದ ಅನಿಲ್ ಮಾಧವ್ ದಾವೆ ಅವರು ಪರಿಸರದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದವರು. ನನ್ನ ಸಾವಿನ ಬಳಿಕವೂ ಮರ ನೆಟ್ಟು ನನ್ನ ನೆನಪನ್ನು ಹಸಿರಾಗಿಸಿ ಎಂದು ತಮ್ಮ ಅಭಿಮಾನಿಗಳಿಗೆ ಇವರು ಕರೆ ನೀಡಿದ್ದರು. ನರ್ಮದಾ...
Date : Thursday, 18-05-2017
ತುಮಕೂರು : ಬರ ಪೀಡಿತ ಪ್ರದೇಶಗಳ ಜನರ ಸಂಕಷ್ಟಗಳಿಗೆ ಸ್ಪಂದಿಸದ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಮೇ 18 ರಿಂದ ಜೂನ್ 29 ರವರೆಗೆ ರಾಜ್ಯವ್ಯಾಪಿ ಜನಸಂಪರ್ಕ ಅಭಿಯಾನವನ್ನು ಕೈಗೊಳ್ಳಲಾಗಿದೆ. ಮೇ 18 ರಂದು ತುಮಕೂರಿನಲ್ಲಿ ಜನಸಂಪರ್ಕ ಅಭಿಯಾನಕ್ಕೆ ವಿದ್ಯುಕ್ತ...