ಕೋಲ್ಕತ್ತಾ; ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದ ರೈತರಿಗೆ ಗೋವುಗಳನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ.
ಸಣ್ಣ ಪುಟ್ಟ ಕೃಷಿ ಮಾಡಿಕೊಂಡು ಜೀವನ ಮಾಡುವ ರೈತರು ಗೋವುಗಳ ಹಾಲನ್ನು ಮಾರಿ ತಮ್ಮ ಆದಾಯವನ್ನು ಹೆಚ್ಚಿಸಲಿ ಮತ್ತು ಗೋವುಗಳ ಗೊಬ್ಬರದಿಂದ ಪರಿಸರ ಸ್ನೇಹಿ ಸಾವಯವ ಕೃಷಿ ಮಾಡಲಿ ಎಂಬ ಉದ್ದೇಶದಿಂದ ಈ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದಾರೆ ಎಂದು ಅವರ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಈ ಕಾರ್ಯ ಗೋವುಗಳ ಬದುಕುವ ವಾತಾವರಣವನ್ನು ಸುಧಾರಿಸುತ್ತದೆ ಮಾತ್ರವಲ್ಲದೇ ಕೃಷಿ ಕೈಕೊಟ್ಟಾಗ ರೈತರಿಗೆ ಪರ್ಯಾಯ ಆದಾಯ ನೀಡುತ್ತದೆ ಎಂದಿದ್ದಾರೆ.
ಉತ್ತರ ೨೪ ಪರಗಣ, ಹೂಗ್ಲೆ ಜಿಲ್ಲೆಗಳ ರೈತರು ಮೊದಲ ಹಂತದ ಹಸುಗಳನ್ನು ಉಡುಗೊರೆಯಾಗಿ ಪಡೆಯಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.