ತಿರುವನಂತಪುರಂ: ಕೇರಳ ಸರ್ಕಾರ ಮದುವೆಗಳಿಗೆ ಹಸಿರು ನಿಯಮಗಳನ್ನು ಜಾರಿಗೊಳಿಸಿದ್ದು, ಇನ್ನು ಮುಂದೆ ಕೇರಳದ ವಿವಾಹಗಳು ಪರಿಸರ ಸ್ನೇಹಿಯಾಗಲಿವೆ.
ನಿಯಮದ ಪ್ರಕಾರ ಮದುವೆಗಳಲ್ಲಿ ಪ್ಲಾಸ್ಟಿಕ್, ಬಿಸಾಕುವ ಲೋಟಗಳು ಮತ್ತು ತಟ್ಟೆಗಳು, ಅಲಂಕಾರಿಕ ಥರ್ಮಕೋಲ್ಗಳನ್ನು ಬಳಕೆ ಮಾಡಬಾರದು. ಇವುಗಳ ಬದಲು ಗಾಜಿನಿಂದ ಅಥವಾ ಪರಿಸರ ಸ್ನೇಹಿ ಲೋಹಗಳಿಂದ ಮಾಡಿದ ತಟ್ಟೆ ಲೋಟಗಳನ್ನು ಬಳಸಬೇಕು.
ಮದುವೆ ನಡೆಯುವ ಹಾಲ್, ಹೋಟೆಲ್ ಮುಂತಾದುವುಗಳನ್ನು ಪರಿಶೀಲನೆ ನಡೆಸಲಾಗುತ್ತದೆ, ನಿಯಮ ಪಾಲಿಸದೇ ಇದ್ದರೆ ಕಠಿಣ ಕ್ರಮವನ್ನು ಜಾರಿಗೊಳಿಸಲಾಗುತ್ತದೆ.
‘ಸುಚಿತ್ವ ಅಭಿಯಾನ’ದ ಉಸ್ತುವಾರಿಯಲ್ಲಿ ರಾಜ್ಯದ ಪ್ಲಾಸ್ಟಿಕ್ ವಿರೋಧಿ ಅಭಿಯಾನ ಮತ್ತು ಗ್ರೀನ್ ಕೇರಳ ಮಿಶನ್ ಅಡಿಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.