Date : Saturday, 16-05-2015
ಬೆಂಗಳೂರು: ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಪೌರ ಕಾರ್ಮಿಕರ ವೇತನ ಹೆಚ್ಚಿಸುವ ಕುರಿತು ಪ್ರಸ್ತಾಪಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಪೌರ ಕಾರ್ಮಿಕರ ಕುಟುಂಬದ ವೈದ್ಯಕೀಯ ಚಿಕಿತ್ಸೆ ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಭತ್ಯೆ ನೀಡುವುದೂ ಸೇರಿದಂತೆ...
Date : Saturday, 16-05-2015
ಬೆಳ್ತಂಗಡಿ: ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ವಿಠಲ್ ಮಲೆಕುಡಿಯ ಅವರು ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಶನಿವಾರ ಬೆಳ್ತಂಗಡಿ ನಾರಾವಿ ಕ್ಷೇತ್ರದ ಕುತ್ಲೂರು ಗ್ರಾಮಪಂಚಾಯತ್ ಚುನಾವಣೆಗೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಇವರು ಬೆಳ್ತಂಗಡಿ ಡಿವೈಎಫ್ಐ...
Date : Saturday, 16-05-2015
ಸೀತಾಂಗೋಳಿ: ಕಾಸರಗೋಡು ಗೋ ತಳಿಯ ವಿಶೇಷ ಸಂರಕ್ಷಣ ಕೇಂದ್ರವಾದ ಬಜಕೂಡ್ಲು ಅಮೃತಧಾರ ಗೋ ಶಾಲೆಯ ನೂತನ ಸಮುಚ್ಚಯದ ಲೋಕಾರ್ಪಣೆಯ ಸಂಧರ್ಬದಲ್ಲಿ ದೇಶಿಯ ತುಪ್ಪದಿಂದಲೇ ಆರತಿ ಬೆಳಗುವ ‘ಅನಂತ ನೀರಾಜನ’ ಗೋ ಯಾತ್ರೆಗೆ ಸೀತಾಂಗೋಳಿಯಲ್ಲಿ ಆತ್ಮೀಯ ಸ್ವಾಗತ ದೊರಕಿತು . ಇಂದು ಯುವ ತಲೆಮಾರಿನಲ್ಲಿ...
Date : Saturday, 16-05-2015
ಬೆಂಗಳೂರು: ಎರಡು ದಿನಗಳ ಪ್ರವಾಸಕ್ಕಾಗಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಮೇ.21ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಅವರು ತಮ್ಮ ಪತ್ನಿ ಸಲ್ಮಾ ಅನ್ಸಾರಿ ಜೊತೆ ಎಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರು ಅವರನ್ನು ಸ್ವಾಗತಿಸಲಿದ್ದಾರೆ. ಅಂದು ರಾತ್ರಿ ರಾಜಭವನದಲ್ಲಿ...
Date : Saturday, 16-05-2015
ಬೆಂಗಳೂರು: ಅನಕೃ ನಿರ್ಮಾಣ್ ಪ್ರತಿಷ್ಠಾನ ವತಿಯಿಂದ ದಿ.ಅ.ನ.ಕೃಷ್ಣರಾಯರ ನೆನಪಿನಲ್ಲಿ ಪ್ರತಿ ವರ್ಷವೂ ನೀಡಲಾಗುವ ಅನಕೃ ನಿರ್ಮಾಣ್ ಪ್ರಶಸ್ತಿಯ 2015ನೇ ಸಾಲಿನ ಪ್ರಶಸ್ತಿಗೆ ಸಾಹಿತಿ ಬರಗೂರು ರಾಮಚಂದ್ರಪ್ಪ, ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಹಾಗೂ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಆಯ್ಕೆಯಾಗಿದ್ದಾರೆ. ಜುಲೈ...
Date : Saturday, 16-05-2015
ದಾವಣಗೆರೆ: ರಾಜ್ಯ ಕಾಂಗ್ರೆಸ್ ಸರಕಾರ ಎರಡು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ನಡೆಸಲಾಗುತ್ತಿರುವ ’ಸರ್ವೋದಯ ಸಮಾವೇಶ’ಕ್ಕೆ ಭಾರೀ ಸಿದ್ಧತೆಗಳು ನಡೆದಿವೆ. ಸಮಾವೇಶವು ನಗರದ ಬಾಪೂಜಿ ಎಂಬಿಎ ಕಾಲೇಜಿನ ಮೈದಾನದಲ್ಲಿ ಶನಿವಾರ ನಡೆಯಲಿದ್ದು, 400 ಆಸನಗಳುಳ್ಳ ವೇದಿಕೆ ಸಿದ್ಧಗೊಂಡಿದೆ. ಕಾರ್ಯಕ್ರಮವು ಬೆಳಗ್ಗೆ 11.30 ಗಂಟೆಗೆ ಆರಂಭಗೊಳ್ಳಲಿದೆ....
Date : Friday, 15-05-2015
ಮಂಗಳೂರು : ‘ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಲನಚಿತ್ರದ ಬಿಡುಗಡೆ ಸಮಾರಂಭವು ಮಂಗಳೂರಿನ ಸೆಂಟ್ರಲ್ ಚಿತ್ರಮಂದಿರದಲ್ಲಿ ಮೇ 15 ಶುಕ್ರವಾರ ಬೆಳಿಗ್ಗೆ ಅದ್ದೂರಿಯಿಂದ ನಡೆಯಿತು.ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ರಮಾನಾಥ ಹೆಗ್ಡೆಯವರು ಸಾಂಕೇತಿಕವಾಗಿ ದೀಪ ಬೆಳಗಿಸುವುದರ ಮೂಲಕ ಚಲನಚಿತ್ರದ ಬಿಡುಗಡೆ ಸಮಾರಂಭದ...
Date : Friday, 15-05-2015
ಪೆರ್ಲ: ಕಾಸರಗೋಡು ತಳಿಯ ಗೋವುಗಳ ಸಂರಕ್ಷಣೆ, ಸಂವರ್ಧನೆ ಹಾಗೂ ಸಂಬೋಧನೆಯ ಗುರಿಯೊಂದಿಗೆ 2004 ನವೆಂಬರ್ 6 ರಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ‘ಕಾಮದುಘಾ’ ಯೋಜನೆಯ ಮೂಲಕ ಪೆರ್ಲದ ಬಜಕೂಡ್ಲಿನ ಪ್ರಶಾಂತ ಪರಿಸರದಲ್ಲಿ ಆರಂಭವಾದ ‘ಅಮೃತಧಾರಾ ಗೋಶಾಲೆ’ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ನೂತನ...
Date : Friday, 15-05-2015
ಮಂಗಳೂರು : ಕೇಂದ್ರ ಸರಕಾರದ ಸಾಮಾಜಿಕ ಭದ್ರತಾ ಯೋಜನೆಯಂತೆ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯನ್ನು ವಿಶ್ವಕರ್ಮ ಸಹಕಾರ ಬ್ಯಾಂಕ್ನ ಎಲ್ಲಾ ಗ್ರಾಹಕರಿಗೆ ಉಚಿತವಾಗಿ ನೀಡಿ ಜಾರಿಗೊಳಿಸಲಾಗುವುದೆಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ಇವರು ತಿಳಿಸಿದ್ದಾರೆ. ಸಾಮಾಜಿಕ ಭದ್ರತೆಯ ಕಾಳಜಿಯಿಂದ...
Date : Friday, 15-05-2015
ಬೆಂಗಳೂರು: ದೇಶದಲ್ಲಾದಂತೆ ರಾಜ್ಯದಲ್ಲೂ ಜನತಾ ಪರಿವಾರ ಒಂದುಗೂಡಲಿದೆ, ಜೆಡಿಎಸ್ ತೊರೆದ ನಾಯಕರುಗಳು ಮರಳಿ ಪಕ್ಷ ಸೇರಲಿದ್ದಾರೆ ಎಂದು ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ಶುಕ್ರವಾರ ಹಾಸನದಲ್ಲಿ ಮಾತನಾಡಿದ ಅವರು ‘ಕಾಂಗ್ರೆಸ್ ಸೇರಿರುವ ಸಿ.ಎಂ.ಇಬ್ರಾಹಿಂ ಅವರು ಮರಳಿ ಜೆಡಿಎಸ್ಗೆ ಆಗಮಿಸುವ ಸುಳಿವು ನೀಡಿದ್ದಾರೆ’...