News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st September 2024


×
Home About Us Advertise With s Contact Us

ಕಳೆದ 3 ವರ್ಷದಲ್ಲಿ ಒಟ್ಟು 39 ರಕ್ಷಣಾ ಏರ್‌ಕ್ರಾಫ್ಟ್ ಪತನ

ನವದೆಹಲಿ: 14 ಹೆಲಿಕಾಫ್ಟರ್‌ಗಳೂ ಸೇರಿದಂತೆ 2012ರಿಂದ ದೇಶದ ರಕ್ಷಣಾ ವಲಯದ ಒಟ್ಟು 39 ರಕ್ಷಣಾ ಏರ್‌ಕ್ರಾಫ್ಟ್‌ಗಳು ಪತನಗೊಂಡಿದೆ. ಇದರಲ್ಲಿ ಒಟ್ಟು 36 ಸಿಬ್ಬಂದಿಗಳು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಲೋಕಸಭೆಯಲ್ಲಿ ಶುಕ್ರವಾರ ಮಾಹಿತಿ ನೀಡಿದ್ದಾರೆ. ಏರ್‌ಕ್ರಾಫ್ಟ್‌ಗಳ ಪತನದಿಂದ 36...

Read More

ಎಪ್ರಿಲ್‌ನಿಂದ ಒಟ್ಟು 9,700 ಮಹಿಳಾ ದೌರ್ಜನ್ಯ ಪ್ರಕರಣ ದಾಖಲು

ನವದೆಹಲಿ: ಈ ವರ್ಷದ ಎಪ್ರಿಲ್ ತಿಂಗಳಿನಿಂದ  ಇಲ್ಲಿಯವರೆಗೆ ಒಟ್ಟು 9,700 ಮಹಿಳಾ ದೌರ್ಜನ್ಯ, ಅತ್ಯಾಚಾರ, ಹಲ್ಲೆ ಸೇರಿದಂತೆ ಮಹಿಳಾ ಹಕ್ಕು ಉಲ್ಲಂಘನೆಯ ಪ್ರಕರಣಗಳು ದೇಶದಲ್ಲಿ ದಾಖಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಹಕ್ಕು ಕಲ್ಯಾಣ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ....

Read More

ಪ್ರಭಾ ಹತ್ಯೆ: ಶೀಘ್ರದಲ್ಲೇ ಆಸ್ಟ್ರೇಲಿಯಾ ತನಿಖಾಧಿಕಾರಿಗಳು ಮಂಗಳೂರಿಗೆ

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ಪಾರ್ಕ್‌ನಲ್ಲಿ ಇತ್ತೀಚಿಗೆ ಹತ್ಯೆಗೀಡಾದ ಮಂಗಳೂರು ಮೂಲದ ಟೆಕ್ಕಿ ಪ್ರಭಾ ಅರುಣ್ ಕುಮಾರ್ ಅವರ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಅಲ್ಲಿನ ತನಿಖಾಧಿಕಾರಿಗಳು ಮಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. 41 ವರ್ಷದ ಪ್ರಭಾ ತಮ್ಮ ಪತಿ ಅರುಣ್ ಕುಮಾರ್ ಅವರೊಂದಿಗೆ...

Read More

ಚಿನ್ನದ ಬೆಲೆ ಮತ್ತಷ್ಟು ಇಳಿಕೆ

ಹೊಸದಿಲ್ಲಿ: ಕಳೆದ ಐದೂವರೆ ವರ್ಷಗಳಲ್ಲೇ ಈ ಬಾರಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದ್ದು, ಶುಕ್ರವಾರ ಆರಂಭಿಕ ಕುಸಿತ ಕಂಡಿದೆ. ಇದು ವಾರದಲ್ಲೇ ಅತ್ಯಧಿಕ ಕುಸಿತವಾಗಿದೆ. 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ 250ರೂ. ಇಳಿಕೆ ಕಂಡು 24,553 ತಲುಪಿದೆ. ಬೆಳ್ಳಿ ದರ...

Read More

ಮತ್ತೆ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಕಡಿತ ಸಾಧ್ಯತೆ

ನವದೆಹಲಿ: ಪೆಟ್ರೋಲ್, ಡಿಸೇಲ್ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ. ಶುಕ್ರವಾರ ಪೆಟ್ರೋಲ್, ಡಿಸೇಲ್ ದರದಲ್ಲಿ ಮತ್ತೆ ಕಡಿಮೆಯಾಗುವ ಸಾಧ್ಯತೆ ಇದೆ. ಭಾರತದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಕಾರ್ಪ್ ಮತ್ತು ಹಿಂದೂಸ್ಥಾನ್ ಪೆಟ್ರೋಲಿಂ ಕಾರ್ಪ್ ದರ ಕಡಿತದ ಬಗ್ಗೆ...

Read More

ಬಾಸ್ಕೆಟ್ ಬಾಲ್ : ಟರ್ಬನ್ ಧರಿಸಲು ಅವಕಾಶ ನೀಡುವಂತೆ ಒತ್ತಾಯ

ವಾಷಿಂಗ್ಟನ್: ಸಿಖ್ ಆಟಗಾರರಿಗೆ ಟರ್ಬಲ್ ಧರಿಸಿ ಆಡಲು ಅನುವು ಮಾಡಿಕೊಡಬೇಕೆಂದು ಅಮೆರಿಕಾದ 39 ಸಂಸದರು ಇಂಟರ್‌ನ್ಯಾಷನಲ್ ಬಾಸ್ಕೆಟ್‌ಬಾಲ್ ಫೆಡರೇಶನ್‌ನನ್ನು ಕೇಳಿಕೊಂಡಿದ್ದಾರೆ. ಸಿಖ್ ಸೇರಿದಂತೆ ಇತರ ಆಟಗಾರರಿಗೆ ತಮ್ಮ ನಂಬಿಕೆಗಳ ವಸ್ತುಗಳನ್ನು ಧರಿಸಲು ಅನುಮತಿ ನೀಡಬೇಕು ಎಂದು ಭಾರತೀಯ ಮೂಲದ ಸಂಸದ ಅಮಿ...

Read More

‘ಹಿಂದೂ ಭಯೋತ್ಪಾದನೆ’ ವಾಕ್ಯ ಸೃಷ್ಟಿಸಿದ ಯುಪಿಎ ವಿರುದ್ಧ ವಾಗ್ದಾಳಿ

ನವದೆಹಲಿ: ಪಂಜಾಬ್‌ನ ಗುರುದಾಸ್‌ಪುರದ ಮೇಲೆ ನಡೆದ ಉಗ್ರರ ದಾಳಿಯ ಬಗ್ಗೆ ಲೋಕಸಭೆಯಲ್ಲಿ ಹೇಳಿಕೆ ನೀಡಿದ ಕೇಂದ್ರ ಸಚಿವ ರಾಜನಾಥ್ ಸಿಂಗ್, ಉಗ್ರರ ಬಗ್ಗೆ ಹಿಂದಿನ ಯುಪಿಎ ಸರ್ಕಾರ ತಳೆದಿದ್ದ ನಿಲುವನ್ನು ಕಟುವಾಗಿ ಟೀಕಿಸಿದರು. ಹಿಂದಿನ ಯುಪಿಎ ಸರ್ಕಾರ ವಿಷಯಾಂತರ ಮಾಡುವ ಸಲುವಾಗಿ...

Read More

ಫೇಸ್‌ಬುಕ್‌ನಿಂದ ಬೃಹದಾಕಾರದ ಇಂಟರ್‌ನೆಟ್ ಡ್ರೋನ್ ನಿರ್ಮಾಣ

ಲಂಡನ್: ಫೇಸ್‌ಬುಕ್ ಸೌರಶಕ್ತಿ ಚಾಲಿತ ಬೃಹತ್ ಡ್ರೋನ್ ಕ್ಯಾಮೆರಾ ಒಂದನ್ನು ನಿರ್ಮಿಸಿದೆ. ಹಲವು ತಿಂಗಳುಗಳ ಕಾಲ ವಾಯುಮಂಡಲದಲ್ಲಿ ಉಳಿಯಬಲ್ಲ ಈ ಡ್ರೋನ್, ಗ್ರಾಮೀಣ ಪ್ರದೇಶದಲ್ಲಿ ಇಂಟರ್‌ನೆಟ್ ಬ್ರಾಡ್‌ಬ್ಯಾಂಡ್ ಸಂಪರ್ಕ ತಲುಪಿಸುವ ಉದ್ದೇಶ ಹೊಂದಿದೆ. ಅಕ್ವಿಲಾ ಎಂಬ ಹೆಸರಿನ ಈ ಡ್ರೋನ್‌ನ ನಿರ್ಮಾಣ...

Read More

ತಾಲಿಬಾನ್ ಮುಖ್ಯಸ್ಥನಾಗಿ ಮುಲ್ಲಾ ಅಖ್ತರ್ ಮನ್‌ಸೋರ್‌

ಕಾಬೂಲ್: ತಾಲಿಬಾನ್ ತನ್ನ ನಾಯಕತ್ವದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿದೆ. ಮುಲ್ಲಾ ಅಖ್ತರ್ ಮನ್‌ಸೋರ್‌ನನ್ನು ಅದು ತನ್ನ ಮುಖ್ಯಸ್ಥನಾಗಿ ಘೋಷಣೆ ಮಾಡಿದೆ. ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ರಕ್ತಸಿಕ್ತ ಯುದ್ಧಕ್ಕೆ ಕಾರಣೀಕರ್ತನಾಗಿದ್ದ ಒಂಟಿ ಕಣ್ಣಿನ ತಾಲಿಬಾನ್ ನಾಯಕ ಮುಲ್ಲಾ ಒಮರ್ ನಿಧನನಾಗಿದ್ದಾನೆ ಎಂದು ವರದಿಗಳು...

Read More

ಕೋಮೆನ್ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸುವ ಸಾಧ್ಯತೆ

ಕಲ್ಕತ್ತಾ : ಈಶಾನ್ಯ ಭಾಗದ ಪ್ರದೇಶವಾದ ಬಂಗಾಳ ಕೊಲ್ಲಿಯಲ್ಲಿ ಹವಾಮಾನ ವೈಪರಿತ್ಯ ಉಂಟಾಗಿದ್ದು ಕುಂಭದ್ರೋಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೋಮೆನ್ ಚಂಡಮಾರುತ ಪ್ರಭಾವದಿಂದ ಈ ಹವಾಮಾನ ವೈಪರಿತ್ಯ ಉಂಟಾಗಿದೆ ಎಂದು ಹೇಳಲಾಗಿದೆ. ಕೋಮೆನ್ ಚಂಡಮಾರುತವು ಬಾಂಗ್ಲಾದೇಶದ ಚಿತ್ತಗಾಂಗ್‌ನ ದಕ್ಷಿಣದ...

Read More

Recent News

Back To Top