News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಉತ್ತರಪ್ರದೇಶದಲ್ಲಿ 5ನೇ ಹಂತದ ಮತದಾನ ಆರಂಭ

ಅಯೋಧ್ಯಾ(ಉ.ಪ್ರದೇಶ): ಉತ್ತರ ಪ್ರದೇಶದಲ್ಲಿ 5 ಹಂತದ ಮತದಾನ 12 ಜಿಲ್ಲೆಯ 51 ಕ್ಷೇತ್ರಗಳಲ್ಲಿ ಇಂದು ಆರಂಭವಾಗಿದೆ. ಒಟ್ಟು 607 ಅಭ್ಯರ್ಥಿಗಳು ಕಣದಲ್ಲಿದ್ದು, ಗರಿಷ್ಠವೆಂದರೆ ಅಮೇಥಿಯಲ್ಲಿ 24 ಹಾಗೂ ಕಪಿಲವಾಸ್ತು ಹಾಗೂ ಎತ್ವಾ ಕ್ಷೇತ್ರದಲ್ಲಿ ಕನಿಷ್ಟ ತಲಾ 6 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. 1.84 ಕೋಟಿ ಜನ ಮತದಾರರಿದ್ದು, 18,882  ಮತದಾನದ ಬೂತ್‌ಗಳನ್ನು...

Read More

ಇಂದು ಪ್ರಧಾನಿ ಮೋದಿ ಭೇಟಿ ಮಾಡಲಿರುವ ತಮಿಳುನಾಡು ಸಿಎಂ ಪಳನಿಸ್ವಾಮಿ

ನವದೆಹಲಿ: ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಭಾನುವಾರ ರಾತ್ರಿಯೇ ಪಳನಿಸ್ವಾಮಿ ನವದೆಹಲಿಗೆ ಬಂದಿಳಿದಿದ್ದಾರೆ. ತಮಿಳುನಾಡಿಗೆ ನೀಟ್ ಪರೀಕ್ಷೆಯಲ್ಲಿ ವಿನಾಯ್ತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಲಿದ್ದಾರೆ. ಫೆ.24 ರಂದು ಕೊಯಿಮತ್ತೂರ್‌ಗೆ...

Read More

ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಂದ ಕನ್ನಡ ವಿದ್ಯಾರ್ಥಿಗಳ ದತ್ತು

ಸುಳ್ಯ : ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಮತ್ತು ಅವರ ಪತ್ನಿ ಡಾ. ಇಂದುಮತಿ ರಾವ್ ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಈ ಭೇಟಿಯಿಂದ ತಮಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಲ್ಲದೆ ಕನ್ನಡ ಮಾಧ್ಯಮದಲ್ಲಿ ಅನುದಾನರಹಿತವಾಗಿಯೂ...

Read More

ಇಂದು ಚಂದ್ರಶೇಖರ್ ಆಜಾದ್ ಹುತಾತ್ಮ ದಿನ: ಮೋದಿ ನಮನ

ನವದೆಹಲಿ: ದೇಶಕಂಡ ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ಅವರ ಹುತಾತ್ಮ ದಿನವನ್ನು ಸೋಮವಾರ ದೇಶದಾದ್ಯಂತ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆ ಮಹಾನ್ ದೇಶಪ್ರೇಮಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ...

Read More

ಸೇವಾಂಜಲಿ ಅರೋಗ್ಯ ಕೇಂದ್ರದಲ್ಲಿ ವಕ್ರದಂತ ಚಿಕಿತ್ಸಾ ವಿಭಾಗದ ಉದ್ಘಾಟನಾ ಸಮಾರಂಭ

ಬಂಟ್ವಾಳ : ಸೇವಾಂಜಲಿ ಅರೋಗ್ಯ ಕೇಂದ್ರವು ನಿಟ್ಟೆ ವಿಶ್ವವಿದ್ಯಾಲಯ ಮತ್ತು ಎ. ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ಇದರ ಸಹಯೋಗದೊಂದಿಗೆ ಬಂಟ್ವಾಳ ತಾಲೂಕಿನಲ್ಲಿ ಅತ್ಯತ್ತಮ ಸೇವೆ ಸಲ್ಲಿಸುತ್ತಿದೆ. ನೆರೆಯ ಜಿಲ್ಲೆಗಳಾದ ಕೊಡಗು ಉಡುಪಿ ಮತ್ತು ಕಾಸರಗೋಡುಗಳಲ್ಲಿ ನಿಟ್ಟೆ ವಿಶ್ವ ವಿದ್ಯಾಲಯದ ಒಟ್ಟು...

Read More

ನಗದು ರಹಿತ ವ್ಯವಹಾರ ಜನಾಂದೋಲನವಾಗಲಿ: ಕೇಂದ್ರ ಸಚಿವ ರಮೇಶ ಜಿಗಜಿಣಗಿ

ಧಾರವಾಡ: ನಗದು ರಹಿತ ವ್ಯವಹಾರದ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ಆಡಳಿತದಲ್ಲಿ ಪಾರದರ್ಶಕತೆ ತರಲು ಸಾಧ್ಯವಿದೆ. ಡಿಜಿ ಧನ್ ಮೇಳಗಳ ಮೂಲಕ ದೇಶದ ಆಯ್ದ ನೂರು ನಗರಗಳಲ್ಲಿ ಕಾರ್ಯಕ್ರಮ ನಡೆಸಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲೀಕರಣ...

Read More

ಇಸ್ರೇಲ್ ಜೊತೆ 17,000 ಕೋಟಿ ರೂ. ಕ್ಷಿಪಣಿ ಒಪ್ಪಂದಕ್ಕೆ ಕೇಂದ್ರ ಒಪ್ಪಿಗೆ

ನವದೆಹಲಿ: ಭಾರತದ ಸೇನಾಬಲ ಹೆಚ್ಚಿಸಲು ಇಸ್ರೇಲ್ ಜೊತೆ 17,000 ಕೋಟಿ ರೂ. ವೆಚ್ಚದಲ್ಲಿ ಜಂಟಿಯಾಗಿ ಅಭಿವೃದ್ಧಿಪಡಿಸಲಾಗುವ ಮಧ್ಯಮ ಶ್ರೇಣಿಯ ಸರ್ಫೇಸ್-ಟು-ಏರ್ ಕ್ಷಿಪಣಿ (ಎಂಆರ್-ಸ್ಯಾಮ್) ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ  ಒಪ್ಪಂದಕ್ಕೆ ಅನುಮೋದನೆ...

Read More

ಶಸ್ತ್ರಚಿಕಿತ್ಸೆ ಮಾಡಿ ಮಹಿಳೆಯ ಪ್ರಾಣ ಉಳಿಸಿದ ಮಿಜೋರಾಂ ಶಾಸಕ

ಐಜ್ವಾಲ್: ಶಾಸಕರೋರ್ವರು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಹಿಳೆಯೊಬ್ಬರ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ಶಾಸಕ ಕೆ.ಬೈಚುವಾ ಕಾರ್ಯಕ್ರಮ ನಿಮಿತ್ತ ಗ್ರಾಮವೊಂದಕ್ಕೆ ತೆರಳಿದ್ದರು. ಆಗ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿ ವೈದ್ಯರೇ...

Read More

ಮಾ.31ರಿಂದ ನಮಾಮಿ ಬ್ರಹ್ಮಪುತ್ರ ಉತ್ಸವ

ಗುವಾಹಟಿ: ದೇಶದ ಸಂಸ್ಕೃತಿ, ಪ್ರವಾಸೋದ್ಯಮ, ಆರ್ಥಿಕತೆ, ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಸ್ಸಾಂನ 21 ಜಿಲ್ಲೆಗಳಲ್ಲಿ ‘ನಮಾಮಿ ಬ್ರಹ್ಮಪುತ್ರ’ ಮಹೋತ್ಸವ ಮಾರ್ಚ್ 31ರಿಂದ ನಡೆಯಲಿದೆ. ನಮಾಮಿ ಬ್ರಹ್ಮಪುತ್ರ ಎಂದರೆ ಬ್ರಹ್ಮಪುತ್ರೆಗೆ ಪ್ರಣಾಮ ಅಥವಾ ವಂದನೆ ಎಂದರ್ಥ. ಅಸ್ಸಾಂ ಸಂಸ್ಕೃತಿಯ ಜಾಗತಿಕ...

Read More

ಪೇಢಾ ನಗರಿಯಲ್ಲಿ ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ

ಧಾರವಾಡ: ನಗರದ ಕೆಸಿಡಿ ಮೈದಾನದಲ್ಲಿ ಒಂದು ತಿಂಗಳ ಕಾಲ ಆಯೋಜಿಸಿರುವ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ, ಮನಗುಂಡಿಯ ಶ್ರೀ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿ ಜಗತ್ತಿನಲ್ಲಿ ಎಲ್ಲೆಡೆ...

Read More

Recent News

Back To Top