ಬಂಟ್ವಾಳ : ಸೇವಾಂಜಲಿ ಅರೋಗ್ಯ ಕೇಂದ್ರವು ನಿಟ್ಟೆ ವಿಶ್ವವಿದ್ಯಾಲಯ ಮತ್ತು ಎ. ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ಇದರ ಸಹಯೋಗದೊಂದಿಗೆ ಬಂಟ್ವಾಳ ತಾಲೂಕಿನಲ್ಲಿ ಅತ್ಯತ್ತಮ ಸೇವೆ ಸಲ್ಲಿಸುತ್ತಿದೆ. ನೆರೆಯ ಜಿಲ್ಲೆಗಳಾದ ಕೊಡಗು ಉಡುಪಿ ಮತ್ತು ಕಾಸರಗೋಡುಗಳಲ್ಲಿ ನಿಟ್ಟೆ ವಿಶ್ವ ವಿದ್ಯಾಲಯದ ಒಟ್ಟು 23 ಕೇಂದ್ರಗಳಿವೆ. ಸೇವಾಂಜಲಿ ಅರೋಗ್ಯ ಕೇಂದ್ರದಲ್ಲಿ ವಕ್ರದಂತ ಚಿಕಿತ್ಸಾ ವಿಭಾಗ ವಾರಕ್ಕೆ ಒಂದು ದಿನ ಆದಿತ್ಯವಾರದಂದು ಸೇವೆ ನೀಡಲಿದೆ ಎಂದು ಎ. ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ದೇರಳಕಟ್ಟೆ ಇದರ ಪ್ರಾಧ್ಯಾಪಕರಾದ ಡಾ. ಎಮ್. ಎಸ್. ರವಿಯವರು ಸೇವಾಂಜಲಿ ಅರೋಗ್ಯ ಕೇಂದ್ರದಲ್ಲಿ ವಕ್ರದಂತ ಚಿಕಿತ್ಸಾ ವಿಭಾಗದ ಉದ್ಘಾಟನಾ ಸಮಾರಂಭ ದಲ್ಲಿ ದೀಪ ಬೆಳಗಿಸಿ ಉದ್ಗಾಟಿಸಿ ಮಾತನಾಡಿದರು.
ಸೇವಾಂಜಲಿ ಅರೋಗ್ಯ ಕೇಂದ್ರದಲ್ಲಿ ಸಾಮಾನ್ಯ ಚಿಕಿತ್ಸೆಯಿಂದ ಹಿಡಿದು ಸ್ಪೆಶಲಿಸ್ಟ್ ವೈದ್ಯರ ಸೇವೆಯವರೆಗೆ ಉಚಿತವಾಗಿ ಕೊಡಲಾಗುವುದು, ಅಲ್ಲದೆ ಇದೀಗ ವಕ್ರದಂತ ಚಿಕಿತ್ಸಾ ವಿಭಾಗವು ಸೇರ್ಪಡೆಗೊಂಡು ಇದರ ಸೇವೆವು ಕನಿಷ್ಠ ದರದಲ್ಲಿ ಕೊಡಲಾಗುವುದು ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಶ್ರೀ ಕೃಷ್ಣ ಕುಮಾರ್ ಪೂಂಜಾರವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಪ್ರಕಾಶ್ ಕಾರಂತ ನರಿಕೊಂಬು, ಅಧ್ಯಕ್ಷರು ಜನಜಾಗ್ರತಿ ವೇದಿಕೆ ಬಂಟ್ವಾಳ ಶ್ರೀ ರವೀಂದ್ರ ಕಂಬಳಿ ಜಿಲ್ಲಾ ಪಂಚಾಯತ್ ಸದಸ್ಯರು ಪುದು, ಡಾ ಆಡ್ರಿ ಡಿ ಕ್ರೂಜ್ ಪ್ರಾಧ್ಯಾಪಕರು, ಎ. ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ದೇರಳಕಟ್ಟೆ ಶ್ರೀ ವಿನಾಯಕ ಗುನಗಾ ಮೇಲ್ವಿಚಾರಕರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಡಾ. ರೀಮಾ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.