Date : Wednesday, 13-12-2017
ಆಗ್ರಾ: ನನ್ನ ಚಳುವಳಿಯಿಂದ ಮತ್ತೊಬ್ಬ ಕೇಜ್ರಿವಾಲ್ ಸೃಷ್ಟಿಯಾಗಲಾರ ಎಂದು ಆಶಿಸುತ್ತೇನೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ. ಆಗ್ರಾದ ಶಹೀದ್ ಸ್ಮಾರಕದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಷ್ಟ್ರ ರಾಜಧಾನಿಯಲ್ಲಿ ಮಾರ್ಚ್ 23ರಂದು ದೊಡ್ಡ ಸಮಾವೇಶವನ್ನು ಹಮ್ಮಿಕೊಳ್ಳುತ್ತಿದ್ದೇವೆ, ಇದರಲ್ಲಿ...
Date : Tuesday, 12-12-2017
ಶಿರಸಿ: ಪರೇಶ್ ಮೇಸ್ತಾ ಸಾವನ್ನು ಖಂಡಿಸಿದ ಹಿಂದೂ ಸಂಘಟನೆಗಳು ಶಿರಸಿಯಲ್ಲಿ ಭಾರೀ ಪ್ರತಿಭಟನೆಯನ್ನು ನಡೆಸುತ್ತಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮುಂಜಾಗೃತ ಕ್ರಮವಾಗಿ ನಿಷೇದಾಜ್ಞೆಯನ್ನು ಹಾಕಲಾಗಿದೆ. ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಮೇಸ್ತಾ ಸಾವಿನ ಬಳಿಕ ಪ್ರತಿಭಟನೆ, ಹಿಂಸಾಚಾರಗಳು...
Date : Tuesday, 12-12-2017
ರಾಯ್ಪುರ: ಒಂಭತ್ತನೇ ತರಗತಿಯ ಬಳಿಕವೂ ಮದರಸಗಳಲ್ಲಿ ಶಾಲಾ ಪಠ್ಯಕ್ರಮ ವಿಷಯಗಳನ್ನು ಬೋಧಿಸಲು ಛತ್ತೀಸ್‌ಗಢ ನಿರ್ಧರಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೊಳ್ಳಲಿದೆ. ಮದರಸಗಳಲ್ಲಿ ಕೇವಲ ಧಾರ್ಮಿಕ ಶಿಕ್ಷಣ ಮಾತ್ರವಲ್ಲದೇ ಔಪಚಾರಿಕ ಶಿಕ್ಷಣದ ವಿಷಯಗಳನ್ನೂ ಕಲಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇಲ್ಲಿ...
Date : Tuesday, 12-12-2017
ನವದೆಹಲಿ: ವರ್ಷದಲ್ಲಿ ಕನಿಷ್ಠ 100 ದಿನವಾದರೂ ಸಂಸತ್ತಿನಲ್ಲಿ ಸಭೆಗಳು ನಡೆಯುವಂತೆ ನೋಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರತಿಪಾದಿಸಿದ್ದಾರೆ. ಶಾಸಕಾಂಗದ ಮಹತ್ವದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಸಭಾದ ಅಧ್ಯಕ್ಷನಾಗಿ ಅಧಿವೇಶನ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುವುದಕ್ಕೆ ನನ್ನ...
Date : Tuesday, 12-12-2017
ಅಹ್ಮದಾಬಾದ್: ಸಬರಮತಿ ನದಿಯಿಂದ ಧರೋಯ್ ಡ್ಯಾಂವರೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಸಿ-ಪ್ಲೇನ್‌ನಲ್ಲಿ ಪ್ರಯಾಣಿಸಿ ಇತಿಹಾಸ ನಿರ್ಮಿಸಿದ್ದಾರೆ. ಭಾರತದ ಮೊತ್ತ ಮೊದಲ ಸೀ-ಪ್ಲೇನ್ ಇದಾಗಿದೆ. ಅಲ್ಲದೇ ಭಾರತದ ನದಿ ನೀರಿನಲ್ಲಿ ಸೀ-ಪ್ಲೇನ್ ಲ್ಯಾಂಡ್ ಆಗುತ್ತಿರುವುದು ಇದೇ ಮೊದಲು. ‘ನಾಳೆ ಇತಿಹಾಸದಲ್ಲೇ ಮೊದಲ...
Date : Tuesday, 12-12-2017
ನವದೆಹಲಿ: ಯೂನಿವರ್ಸಲ್ ಹೆಲ್ತ್ ಕವರೇಜ್‌ನ್ನು ಸಾಧಿಸುವ ಸಲುವಾಗಿ 2025ರ ವೇಳೆಗೆ ಜಿಡಿಪಿ ಶೇ.2.5ರಷ್ಟನ್ನು ಆರೋಗ್ಯ ವೆಚ್ಚಕ್ಕಾಗಿ ವ್ಯಯಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಪ್ರಸ್ತುತ ಜಿಡಿಪಿಯ ಶೇ.1.15ರಷ್ಟನ್ನು ಮಾತ್ರ ವ್ಯಯಿಸಿಕೊಳ್ಳಲಾಗುತ್ತಿದೆ. ‘2017-18ರ ಸಾಲಿನ ಬಜೆಟ್‌ನಲ್ಲಿ ಆರೋಗ್ಯ ವಲಯಕ್ಕಾಗಿನ ಬಜೆಟ್‌ನ್ನು ಶೇ.27.7ರಷ್ಟು ಹೆಚ್ಚಳಗೊಳಿಸಲಾಗಿತ್ತು....
Date : Tuesday, 12-12-2017
ಚೆನ್ನೈ: ಯುದ್ಧ ಕಾರ್ಯಗಳಿಗಾಗಿ ನಿಯೋಜಿತರಾಗಿರುವ ಅಫ್ಘಾನಿಸ್ಥಾನದ 20 ಮಹಿಳಾ ಸೈನಿಕರು ಚೆನ್ನೈನಲ್ಲಿ ಮಿಲಿಟರಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಡಿ.4ರಂದು ಚೆನ್ನೈನ ಆಫೀಸರ‍್ಸ್ ಟ್ರೈನಿಂಗ್ ಅಕಾಡಮಿಯಲ್ಲಿ ತರಬೇತಿ ಆರಂಭವಾಗಿದ್ದು, 20 ದಿನಗಳ ಕಾಲ ಮುಂದುವರೆಯಲಿದೆ. ಭಾರತದ ಇಬ್ಬರು ಮಹಿಳಾ ಸೇನಾಧಿಕಾರಿಗಳು ತರಬೇತಿಯನ್ನು ಸಂಯೋಜಿಸುತ್ತಿದ್ದಾರೆ. ‘ಅಫ್ಘಾನಿಸ್ಥಾನ ಇದೇ ಮೊದಲ...
Date : Tuesday, 12-12-2017
ನವದೆಹಲಿ: ಮಕ್ಕಳಿಗೆ ಸೂಕ್ತವಲ್ಲದ ಮತ್ತು ಅಸಭ್ಯ ಎನಿಸಿದಂತಹ ಕಾಂಡೋಮ್ ಜಾಹೀರಾತುಗಳನ್ನು ಹಗಲು ಹೊತ್ತಿನಲ್ಲಿ ಪ್ರಸಾರಗೊಳಿಸದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿವಿ ಚಾನೆಲ್‌ಗಳಿಗೆ ನಿರ್ದೇಶನ ನೀಡಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ಇಂತಹ ಜಾಹೀರಾತುಗಳನ್ನು ಪ್ರಸಾರ ಮಾಡುವಂತೆ ಸಚಿವೆ ಸ್ಮೃತಿ...
Date : Tuesday, 12-12-2017
ವಿಶ್ವಸಂಸ್ಥೆ: ಮುಂಬರುವ ವರ್ಷಗಳಲ್ಲಿ ಭಾರತದ ಪ್ರಗತಿಯ ದರ ಶೇ.7.2ಕ್ಕೆ ಏರಿಕೆಯಾಗಲಿದ್ದು, ವಿಶ್ವದ ಅತೀ ವೇಗದ ಆರ್ಥಿಕತೆ ಎಂಬ ಪಟ್ಟವನ್ನು ಮರು ಅಲಂಕರಿಸಲಿದೆ ಎಂದು ವಿಶ್ವಸಂಸ್ಥೆ ನಿರೀಕ್ಷೆ ವ್ಯಕ್ತಪಡಿಸಿದೆ. 2018ರಲ್ಲಿ ಪ್ರಸ್ತುತ ಇರುವ ಪ್ರಗತಿ ದರ ಶೇ.6.7 ರಿಂದ ಶೇ.7.2ಕ್ಕೆ ಏರಿಕೆಯಾಗುವ ನಿರೀಕ್ಷೆ...
Date : Tuesday, 12-12-2017
ನವದೆಹಲಿ: ಅಭ್ಯರ್ಥಿಗಳಿಗೆ ಎರಡು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬಾರದು ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿಕೊಂಡಿದೆ. ಕೋರ್ಟ್ ಈ ವಿಷಯದಲ್ಲಿ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರ ಸಲಹೆಯನ್ನು ಕೇಳಿದೆ. ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ.ಎ.ಎಂ ಖನ್ವಿಲ್ಕರ್, ನ್ಯಾ.ಡಿ.ವೈ...