ಕಾಂಗ್ರೆಸ್ನ ಅಧಿವೇಶನದಲ್ಲಿ ಇತ್ತೀಚೆಗೆ ಅಧ್ಯಕ್ಷನಾಗಿ ಅಭಿಷಿಕ್ತನಾದ ರಾಹುಲ್ ಗಾಂಧಿ(ನಕಲಿ) 53 ನಿಮಿಷಗಳ ವೀರಾವೇಶದಿಂದ(!) ಭಾಷಣ ಮಾಡಿ ತಮ್ಮ ಬೌದ್ಧಿಕ ದಿವಾಳಿತನವನ್ನು ಇನ್ನೊಮ್ಮೆ ಪ್ರದರ್ಶಿಸಿದ್ದಾರೆ. ಇಡೀ ಭಾಷಣದಲ್ಲಿ ಈಗಿನ ಕೇಂದ್ರ ಸರಕಾರದ ಮೇಲೆ, ಪ್ರಧಾನಿ ಮೋದಿಯವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಧನ್ಯತೆಯನ್ನು ಪಡೆದಿದ್ದಾರೆ. ತನ್ನ ನಾಯಕತ್ವದಿಂದ ನಿರಂತರ ಸೋಲಿನೆಡೆಗೆ ಕಾಂಗ್ರೆಸ್ಸನ್ನು ಕೊಂಡೊಯ್ದಂತಹ ಕೀರ್ತಿಯನ್ನು ಪಡೆದ ರಾಹುಲ್ ಗಾಂಧಿಯ ಮಾತುಗಳು, ಈಗಾಗಲೇ ಸರಣಿ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ನ ಕಾರ್ಯಕರ್ತರಿಗೆ ಏನು ಸ್ಫೂರ್ತಿ ದೊರಕಿರಬಹುದೋ ದೇವರೇ ಬಲ್ಲ.
ರಾಹುಲ್ ಗಾಂಧಿ ಮಾತನಾಡುತ್ತಾ ನಾವು (ಕಾಂಗ್ರೆಸ್ನವರು) ಪಾಂಡವರು ಹಾಗೂ ಭಾಜಪದವರು ಕೌರವರು ಎಂಬುದಾಗಿ ಅಪ್ಪಣೆ ಕೊಡಿಸಿದ್ದಾರೆ. ವಾಸ್ತವವಾಗಿ ಕಾಂಗ್ರೆಸ್ನ ಇಂದಿನ ಸ್ಥಿತಿ ಅಧಿಕಾರ ಕಳೆದು ವನವಾಸದಲ್ಲಿ ಇರುವ ಪಾಂಡವರಂತೆ ಇರುವುದರಿಂದ ಸ್ವಲ್ಪ ಮಟ್ಟಿಗೆ ಹೋಲಿಕೆ ಸರಿ ಎನ್ನಬಹುದು. ಇಂತಹ ರಾಹುಲ್ ಗಾಂಧಿಯ ನಿನ್ನೆಯ ಅಧ್ಯಕ್ಷೀಯ ಭಾಷಣದ ನಂತರ, ಅವರಲ್ಲಿ ಕೇಳಬೇಕು ಎಂದು ಎಲ್ಲರಿಗೂ ಎನಿಸುವ ಕೆಲವು ಪ್ರಶ್ನೆಗಳು ಇವು….
ಪ್ರಶ್ನೆ 1 : ಸ್ವಾತಂತ್ರ್ಯವೀರ ಸಾವರ್ಕರ್ ನಿಮ್ಮವ ಅನ್ನುವ ಮೊದಲು ಒಂದು ವಿಷಯ ತಿಳಿಯಬೇಕಿತ್ತು. ಬ್ರಿಟಿಷರು ತಮಗೆ ಯಾರು ತುಂಬಾ ಅಪಾಯಕಾರಿ ಎಂದು ತಿಳಿದಿದ್ದರೋ ಅವರಿಗೆ ಕರಿನೀರಿನ ಶಿಕ್ಷೆ, ಅಥವಾ ಗಲ್ಲು ಶಿಕ್ಷೆ ಕೊಡುತ್ತಿದ್ದರು. ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದವರಲ್ಲಿ ಸಾವರ್ಕರ್ ಕೂಡ ಒಬ್ಬರು. ಅದಕ್ಕಾಗಿಯೇ ಅವರನ್ನು ಕರಿನೀರಿನ ಶಿಕ್ಷೆಗೆ ಒಳಪಡಿಸಿದ್ದರು. ಅಂದ ಹಾಗೆ ನಿಮ್ಮ ಗಾಂಧಿ, ನೆಹರೂ ಅವರನ್ನು ಬಂಧಿಸಿ ನೈನಿತಾಲ್ನಂತಹ ಪ್ರಕೃತಿ ಪ್ರದೇಶಗಳಲ್ಲಿ ರಾಜಕೀಯ ಕೈದಿಯಾಗಿ ಇರಿಸಿ ನೀಡುತ್ತಿದ್ದ ಐಷಾರಾಮಿ ವ್ಯವಸ್ಥೆಯನ್ನು ಅಂಡಮಾನ್ನಲ್ಲಿ ಸಾವರ್ಕರ್ ಅವರಿಗೆ ಮಾಡಲಿಲ್ಲ ಅನ್ನುವುದು ನಿಮಗೆ ಗೊತ್ತಿದೆಯೇ ? ಬರೆಯಲು ಅಗತ್ಯವಾದ ಸಾಮಗ್ರಿಗಳಾಗಲೀ, ಸೌಲಭ್ಯಗಳಾಗಲೀ, ಇಲ್ಲದಿದ್ದರೂ, ಬರೆಯುವುದನ್ನು ನಿಷೇಧಿಸಲಾಗಿದ್ದರೂ ಜೈಲುಖಾನೆಯ ಗೋಡೆಗಳ ಮೇಲೆ ಮೊಳೆಯಿಂದಲೇ ಹತ್ತು ಸಹಸ್ರ ಸಾಲುಗಳಷ್ಟು ಕಾವ್ಯ ರಚಿಸಿ, ಬಾಯಿ ಪಾಠ ಮಾಡಿ 14 ವರ್ಷಗಳ ಸೆರೆವಾಸದ ನಂತರ ಅದನ್ನು ಕಂಠಪಾಠದಿಂದ ದೇಶಕ್ಕೆ ಒಪ್ಪಿಸಿದ ಒಬ್ಬ ಶ್ರೇಷ್ಠ ದೇಶಭಕ್ತನನ್ನು ನಿಮ್ಮವ ಎಂಬುದಾಗಿ ಹೇಳಿದ ನಿಮ್ಮ ಮನೋಸ್ಥಿತಿಯ ಬಗ್ಗೆ ಅಸಹ್ಯ ಎನಿಸುತ್ತಿದೆ. ನಿಮ್ಮ ಮಾತಿನ ಪ್ರಕಾರ ಸ್ವಾತಂತ್ರ್ಯ ಹೋರಾಟ ಕಾಂಗ್ರೆಸ್ ಮಾತ್ರ ಮಾಡಿದೆ ಎಂದುದಾಗಿ ಅನಿಸುತ್ತಿದೆ. ಆದರೆ ಸಾವರ್ಕರ್ ಅವರ ಪ್ರೇರಣೆಯಿಂದ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಅನೇಕ ಕ್ರಾಂತಿಕಾರಿ ದೇಶಭಕ್ತರು ಮಾಡಿದ ತ್ಯಾಗದ ಫಲವನ್ನು ನಿಮ್ಮ ತಾತ ಮುತ್ತಾತನ ಕಾಲದಿಂದ ಅನುಭವಿಸಿದ ನೀವು ಸಾವರ್ಕರ್ ಅವರಿಗೆ ಮಾಡಿದ ಅವಮಾನವನ್ನು ನಾವು ಸಹಿಸಬೇಕೆ ?
ಪ್ರಶ್ನೆ 2 : ಮಾಧ್ಯಮಗಳ ಮೇಲೆ RSS ದಾಳಿ ನಡೆಸಿದೆ ಎಂದು ಸುಳ್ಳು ಹೇಳಲು ನಾಚಿಕೆಯಾಗುವುದಿಲ್ಲವೇ? 1975 ರಲ್ಲಿ ದೇಶದ ತುರ್ತು ಪರಿಸ್ಥಿತಿ ಹೇರಿ ತಮ್ಮ ವಿರುದ್ಧವಾಗಿ ಬರೆದ ಎಲ್ಲಾ ಮಾಧ್ಯಮಗಳ ಬಾಯಿಗೆ ಬೀಗ ಹಾಕಿದ್ದು ಯಾರು ಎಂದು ನೆನಪಿದೆಯೇ ? ಅದೇ ಸಂದರ್ಭದ ತುರ್ತುಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ದೇಶದ ಪ್ರಜಾಪ್ರಭುತ್ವದ ರಕ್ಷಣೆ ಹಾಗೂ ಮಾಧ್ಯಮದ ಧ್ವನಿ ಮತ್ತೊಮ್ಮೆ ಹೊರಡುವಂತೆ ಮಾಡುವಲ್ಲಿ RSS ನ ಪಾತ್ರ ಎಷ್ಟಿತ್ತು ಅನ್ನೋದು ನಿಮಗೆ ಗೊತ್ತಿದೆಯೇ ? 1984 ರ ಸಿಖ್ ಹತ್ಯಾಕಾಂಡ ನಡೆಸಿದ ನಿಮಗೆ ಈಗ ನ್ಯಾಯದ ಬಗ್ಗೆ ಮಾತಾಡುವ ಹಕ್ಕು ಇದೆಯೇ ?
ಪ್ರಶ್ನೆ 3 : ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಲಾಭವನ್ನು ಸುಮಾರು 8 ಕೋಟಿಯಷ್ಟು ಮಂದಿ ಪಡೆದಿದ್ದಾರೆ. ಈ ವರ್ಷದ ಜನವರಿಯಿಂದ ಕಾರ್ಮಿಕ ಭವಿಷ್ಯ ನಿಧಿ (EPF) ನ ನೊಂದಾವಣಿ ಸಂಖ್ಯೆ ಇತ್ತೀಚಿಗಿನ ವರ್ಷಗಳ ದಾಖಲೆಯ1 ಕೋಟಿಯಷ್ಟು ಆಗಿರುವುದು ಕೂಡ ಹೊಸ ಉದ್ಯೋಗ ಸೃಷ್ಟಿ ಆಗಿರುವುದರ ಸಂಕೇತ. ಅದಲ್ಲದೆ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಹಲವು ವಿದೇಶಿ ಕಂಪೆನಿಗಳು ತಮ್ಮ ಉತ್ಪಾದನಾ ಕೇಂದ್ರಗಳನ್ನು ತೆರೆದ ಕಾರಣ ಸಾಕಷ್ಟು ಉದ್ಯೋಗಾವಕಾಶ ನಿರ್ಮಾಣ ಆಗುತ್ತಿದೆ. ಪದೇ ಪದೇ ಯುವಕರಿಗೆ ಮೋದಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದಾರೆ ಅನ್ನುವ ಮೊದಲು ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ನಂತರದಿಂದ 50 ವರ್ಷಗಳ ಆಳ್ವಿಕೆಯಲ್ಲಿ ಎಷ್ಟು ಉದ್ಯೋಗ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂಬುದನ್ನು ಹೇಳಬಹುದೇ. ಅಕಸ್ಮಾತ್ ದೇಶದಲ್ಲಿ ಇಂದಿಗೂ ನಿರುದ್ಯೋಗ, ಬಡತನ ಇದೆ ಎಂದಾದರೆ ನಿಮ್ಮ ಕಾಂಗ್ರೆಸ್ನ ಕೊಡುಗೆ ಅದರಲ್ಲಿ ಅಪಾರವಾಗಿದೆ ಅಲ್ಲವೇ ?
ಪ್ರಶ್ನೆ 4 : ಪದೇ ಪದೇ ಮೋದಿಯ ಹೆಸರಿನ ಬಗ್ಗೆ ಇಲ್ಲಸಲ್ಲದ್ದನ್ನು ಮಾತಾನಾಡುವ ಮೊದಲು ನಿಮ್ಮ ಅಜ್ಜಿಯ ಹೆಸರಿಗೆ ಗಾಂಧಿ ಎಂಬ ವಿಶೇಷಣ ಹೇಗೆ ಬಂತು? ಮಹಾತ್ಮಾ ಗಾಂಧೀಜಿಯವರಿಗೂ ನಿಮಗೂ ಏನು ಸಂಬಂಧ ಎಂಬುದಾಗಿ ತಿಳಿಸುವ ಧೈರ್ಯ ಇದೆಯೇ. ಜನರನ್ನು ನಿಮ್ಮ ಗಾಂಧಿ ಹೆಸರಿನ ಮೂಲಕ ಮೋಸಗೊಳಿಸಬಹುದು ಎಂಬ ನಂಬಿಕೆ ನಿಮಗೆ ಇನ್ನೂ ಉಳಿದಿದೆಯೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.