ಮುಂಬಯಿ: ಎಳವೆಯಲ್ಲೇ ಮಾರಕ ಕಾಯಿಲೆಗೆ ತುತ್ತಾಗಿ ಕೆಲ ಮಕ್ಕಳು ಪಡಬಾರದ ಯಾತನೆ ಪಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬಡ ಪೋಷಕರ ಸ್ಥಿತಿ ನಿಜಕ್ಕೂ ಶೋಚನೀಯ ಎನಿಸುತ್ತದೆ. ಮಗುವನ್ನು ಉಳಿಸಿಕೊಳ್ಳಲು ಹಣವಿಲ್ಲದೆ ಅವರು ಒದ್ದಾಡುತ್ತಾರೆ. ಇಂತಹ ಸಂದರ್ಭದಲ್ಲಿ ನೆರವಿಗೆ ಬರುವುದೇ ಕ್ರೌಡ್ ಫಂಡಿಂಗ್.
ಸಾಮಾಜಿಕ ಜಾಲತಾಣಗಳ, ಎನ್ಜಿಓಗಳ ಮೂಲಕ ಮಗುವಿನ ಕಷ್ಟವನ್ನು ತಿಳಿಸಿದರೆ ಒಂದಿಷ್ಟು ಜನ ಒಂದಿಷ್ಟು ಹಣವನ್ನು ದಾನವಾಗಿ ನೀಡುತ್ತಾರೆ. ಇದು ಮಕ್ಕಳ, ದೊಡ್ಡವರ ಸಹಾಯಕ್ಕೆ ಬರುತ್ತದೆ. ಮುಂಬಯಿಯ 10 ವರ್ಷದ ಬಾಲಕಿಯ ಪ್ರಾಣವನ್ನೂ ಸಮಾಜದ ಜನರೇ ಕ್ರೌಡ್ ಫಂಡಿಂಗ್ ಮಾಡುವ ಮೂಲಕ ಉಳಿಸಿದ್ದಾರೆ.
ಪೇಂಟರ್ ಆಗಿರುವ ತಂದೆಯ ಮಗಳಿಗೆ ತುರ್ತಾಗಿ ಹೃದಯದ ಕಸಿಯ ಅಗತ್ಯವಿತ್ತು. ಈ ವೇಳೆ ತಂದೆ ಸರ್ಫರಾಝ್ ಖಾನ್ ಅವರು ಎನ್ಜಿಓ ಸೇರಿದಂತೆ ಇತರರ ಬಳಿ ಸಹಾಯಕ್ಕೆ ಅಂಗಲಾಚಿದರು. ಅವರ ಪ್ರಯತ್ನ ಫಲ ನೀಡಿತು. ಕ್ರೌಡ್ ಫಂಡಿಂಗ್ ಮೂಲಕ ೨೦ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಮಗಳಿಗೆ ಹೃದಯದ ಕಸಿ ಮಾಡಿಸಿದರು. ಈಗ ಆಕೆ ಸಂಪೂರ್ಣ ಗುಣಮುಖಳಾಗಿದ್ದಾಳೆ. ಇನ್ನೊಂದು ಮೃತ ಮಗುವಿನ ಹೃದಯವನ್ನು ಆಕೆಗೆ ಜೋಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.