ನವದೆಹಲಿ: 30 ವರ್ಷಗಳ ಬಳಿಕ ನ್ಯಾಷನಲ್ ಅಸೋಸಿಯೇಶನ್ ಆಫ್ ಸಾಫ್ಟ್ವೇರ್ ಆಂಡ್ ಸರ್ವಿಸ್ ಕಂಪೆನೀಸ್ (Nasscom ) ಗೆ ಮಹಿಳಾ ಮುಖ್ಯಸ್ಥರು ನೇಮಕಗೊಂಡಿದ್ದಾರೆ. ದೆಬ್ಜಾನಿ ಘೋಷ್ ಅವರು ಈ ಹುದ್ದೆಯನ್ನು ಶೀಘ್ರದಲ್ಲೇ ಅಲಂಕರಿಸಲಿದ್ದಾರೆ.
ದೆಬ್ಜಾನಿ ಘೋಷ್ ಅವರು ಇಂಟೆಲ್ ಸೌತ್ ಏಷ್ಯಾದ ಮಾಜಿ ಆಡಳಿತ ನಿರ್ದೇಶಕರಾಗಿದ್ದಾರೆ. ಎಪ್ರಿಲ್ ತಿಂಗಳಲ್ಲಿ ಅವರು ನೆಸ್ಕಾಂನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.
ಭಾರತದ ಐಟಿ ಸರ್ವಿಸ್ ಇಂಡಸ್ಟ್ರಿಯಲ್ಲಿ 4 ಮಿಲಿಯನ್ ಉದ್ಯೋಗಿಗಳಿದ್ದಾರೆ. ಇವರಲ್ಲಿ ಬಹುಪಾಲು ಮಹಿಳೆಯರಿದ್ದಾರೆ. ಆದರೂ ಯಾವುದೇ ಸಾಫ್ಟ್ವೇರ್ ಕಂಪನಿಯ ಮುಖ್ಯಸ್ಥ ಸ್ಥಾನ ಅವರಿಗೆ ಸಿಕ್ಕಿಲ್ಲ. ಈ ಕೊರತೆಯನ್ನು ದೆಬ್ಜಾನಿ ನೀಗಿಸುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.