ಬಂಟ್ವಾಳ: ಮದುವೆ ಏಳು ಜನ್ಮಗಳ ಅನುಬಂಧ, ಸ್ವರ್ಗದಲ್ಲಿ ನಿಗದಿಯಾಗಿರುತ್ತದೆ. ಎಲ್ಲವೂ ನಿಮಿತ್ತ ಮಾತ್ರ. ಅದರೂ ಕೆಲವೊಮ್ಮೆ ಆಶ್ಚರ್ಯ ಮತ್ತು ಅಪರೂಪ, ಮಾನವೀಯ ಮೌಲ್ಯಗಳನ್ನು ಒಳಗೊಂಡ ರೀತಿಯಲ್ಲಿ ಮದುವೆಗಳು ನಡೆಯುವುದು ಅಲ್ಲೊಂದು ಇಲ್ಲೊಂದು ನಮಗೆ ಕಾಣಬಹುದು. ಇಂತಹ ಮದುವೆ ನಡೆದದ್ದು ಕಲ್ಲಡ್ಕ ಶ್ರೀ ರಾಮ ಭಜನಾ ಮಂದಿರದಲ್ಲಿ.
ಒಂದು ಅಪರೂಪದ ವ್ಯಕ್ತಿ ಇಂದು ವಿಕಲಾಂಗೆಗೆ ತಾಳಿ ಕಟ್ಟುವ ಮೂಲಕ ಅದರ್ಶ ಮೆರೆದಿದ್ದಾರೆ. ಯಾಕೆ ಆದರ್ಶ? ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ಉಪ್ಪಳ ಬೆರಿಪದವು ಬಳ್ಳೂರು ನಿವಾಸಿ ದಿ| ನಾರಾಯಣ ಶೆಟ್ಟಿಗಾರ ಅವರ ಪುತ್ರ ಜಗನ್ನಾಥ ಎಂಬವರು ಇಂದು ಕಶೆಕೋಡಿ ಸೂರ್ಯ ಭಟ್ ಅವರ ಪರಿವಾರದವರ ಪೌರೋಹಿತ್ಯದಲ್ಲಿ 7.30 ರ ಶುಭ ಮೂಹೂರ್ತದಲ್ಲಿ ಕಲ್ಲಡ್ಕ ಶ್ರೀ ರಾಮ ಭಜನಾ ಮಂದಿರದಲ್ಲಿ ಬೆಳ್ತಂಗಡಿ ತಾಲೂಕಿನ ಸೋನಂದರು ಗ್ರಾಮದ ಪಣಕಜೆ ದಿ| ಕೃಷ್ಣಪ್ಪ ಪೂಜಾರಿಯವರ ಪುತ್ರಿ ರೇಖಾ ಅವರಿಗೆ ತಾಳಿ ಕಟ್ಟಿ ಹೊಸ ಜೀವನ ಕ್ಕೆ ಕಾಲಿರಿಸಿದ್ದಾರೆ.
ಜಗನ್ನಾಥ ಅವರ ತಂಗಿ ನಳಿನಿ ಒಂದು ಕಾಲು ಗಿಡ್ಡದಾಗಿ ವಿಕಲಾಂಗೆಯಾಗಿದ್ದರು. ಅವರಿಗೆ ಕಳೆದ ವರ್ಷ ಪಕ್ಷಿ ಕೆರೆಯ ದೇವರಾಜ ಎನ್ನುವ ಅದರ್ಶ ಯುವಕನ್ನು ಹುಡುಕಿ ಮದುವೆ ಮಾಡುತ್ತಾರೆ. ಆದರೆ ಅ ಸಂದರ್ಭದಲ್ಲಿ ಜಗನ್ನಾಥ ಒಂದು ಸಂಕಲ್ಪ ಮಾಡುತ್ತಾರೆ ತನ್ನ ವಿಕಲಾಂಗಿ ತಂಗಿಯನ್ನು ಮದುವೆಯಾಗಿ ಅವಳಿಗೆ ಬಾಳು ನೀಡಿದ ಸಂದರ್ಭದಲ್ಲಿ ತಾನೂ ಇಂತಹ ವಿಕಲಾಂಗ ಹೆಣ್ಣಿಗೆ ಬಾಳು ನೀಡುತ್ತೇನೆ ಎಂದು.
ನಂತರದ ದಿನಗಳಲ್ಲಿ ಇಂತಹ ಹುಡುಗಿಗೆ ಹುಡುಕಾಟ ಆರಂಬಿಸಿದರು ಆದರೆ ಇವರ ಸ್ವ ಜಾತಿಯಲ್ಲಿ ಇಂತಹ ಹೆಣ್ಣು ಸಿಗದೆ ಇದ್ದಾಗ ಅಂತರ್ಜಾತಿ ವಿವಾಹದ ಯೋಚನೆ ಮಾಡಿ ಅದರಲ್ಲಿ ಸಫಲರಾದರು. ಬೆಳ್ತಂಗಡಿಯ ರೇಖಾ ಅವರನ್ನು ವರಿಸುವ ಮೂಲಕ ಅವರ ಮನಸ್ಸಿನ ಅಸೆ ಮತ್ತು ಚಿಂತನೆಗೆ ಬೆಳಕು ಚೆಲ್ಲುವ ಮೂಲಕ ಸಮಾಜದಲ್ಲಿ ಅದರ್ಶ ವ್ಯಕ್ತಿಯಾದರು. ಕಲ್ಲಡ್ಕ ಡಾ| ಪ್ರಭಾಕರ ಭಟ್ ಅವರು ಮದುವೆಗೆ ಸಾಕ್ಷಿಯಾದರು ಮತ್ತು ಶುಭಾಶಯ ಕೋರಿದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹಾಗೂ ಹಿರಿಯರು ಪ್ರಮುಖರು ಉಪಸ್ಥಿತರಿದ್ದು ಶುಭ ಹಾರೈಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.