ಬಿಜಾಪುರ: ಛತ್ತೀಸ್ಗಢದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಸಿಆರ್ಪಿಎಫ್ ಯೋಧರು ಕೇವಲ ಜನರನ್ನು ರಕ್ಷಣೆ ಮಾಡುವ ಕಾರ್ಯ ಮಾತ್ರವಲ್ಲದೇ ಆ ಪ್ರದೇಶದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.
ನಕ್ಸಲ್ ಪೀಡಿತ ಪ್ರದೇಶದ ಹೃದಯ ಭಾಗವಾದ ಚೆರ್ಪಲ್ ಗ್ರಾಮದಲ್ಲಿ 15 ವರ್ಷದೊಳಗಿನ ಸುಮಾರು 40 ಮಕ್ಕಳಿಗೆ ೮೫ನೇ ಬೆಟಾಲಿಯನ್ನ ಸಿಆರ್ಪಿಎಫ್ ಯೋಧರು ಪಾಠ ಹೇಳಿಕೊಡುತ್ತಿದ್ದಾರೆ. ಮರದ ಕೆಳಗಿ ಕುಳಿತು ಮಕ್ಕಳು ಪಾಠ ಆಲಿಸುತ್ತಾರೆ, ಬೋರ್ಡ್ ಸಹಾಯದಿಂದ ಯೋಧರು ಪಾಠ ಕಲಿಸುತ್ತಿದ್ದಾರೆ.
ಮಾತ್ರವಲ್ಲದೇ ಮಕ್ಕಳಿಗಾಗಿ ಪ್ರೊಜೆಕ್ಟರ್ ಮೂಲಕ ಪ್ರೇರಣಾದಾಯಕ ಸಿನಿಮಾಗಳನ್ನೂ ತೋರಿಸುತ್ತಿದ್ದಾರೆ. ಅವರಲ್ಲಿ ಅಡಗಿರುವ ಶೇ.100ರಷ್ಟು ಪ್ರತಿಭೆಯನ್ನು ಹೊರ ತರುವುದು ನಮ್ಮ ಗುರಿ. ಸಮಾಜದ ಕಡೆಗಿನ ನಮ್ಮ ಕರ್ತವ್ಯವನ್ನು ನಾವು ಪೂರೈಸುತ್ತಿದ್ದೇವೆ ಅಷ್ಟೇ ಎಂದು ಯೋಧರು ಹೇಳುತ್ತಾರೆ.
ಅಭಿವೃದ್ಧಿಯ ಮಾಧ್ಯಮವಾಗಲು ಬಯಸುತ್ತಿರುವ ಯೋಧರಿಗೆ ನಮ್ಮದೊಂದು ಸಲಾಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.