Monday, June 1st, 2015
News13
ಪುತ್ತಿಗೆ : ಮಾನವನ ಮೂಲಭೂತ ಆವಶ್ಯಕತೆಗಳಲ್ಲಿ ಒಂದಾಗಿರುವ ಮನೆ ನಿರ್ಮಾಣಕ್ಕೆ ರಾಮಚಂದ್ರಾಪುರ ಮಠದ ಶಿಷ್ಯವರ್ಗವು ಸಕಾಲದಲ್ಲಿ ಸ್ಪಂದಿಸಿರುವುದು ಶ್ಲಾಘನೀಯ. ಎಲ್ಲ ಸಂದರ್ಭಗಳಲ್ಲಿ ಸೂಕ್ತ ರೀತಿಯ ಆಸರೆಯನ್ನು ನೀಡಲು ಗ್ರಾಮಪಂಚಾಯತಿನ ಅಧಿಕಾರವು ಅಶಕ್ತವಾಗುವುದರಿಂದ ಸಂಘಟನೆಗಳು ಈ ಕೈಂಕರ್ಯವನ್ನು ಹೊತ್ತುಕೊಳ್ಳುವುದು ಸಮಾಜಕ್ಕೆ ಆದರ್ಶವಾಗುತ್ತದೆ. ಈ ನಿಟ್ಟಿನಲ್ಲಿ ವಲಯ ಸಮಿತಿಯ ಈ ಪ್ರಯತ್ನ ಅನುಕರಣೀಯ.
ಮನೆಯ ಮುಂದಿನ ಆವಶ್ಯಕತೆಗಳಾದ ವಿದ್ಯುತ್ ಸಂಪರ್ಕ, ಶೌಚಾಲಯ ನಿರ್ಮಾಣಕ್ಕೆ ಗ್ರಾಮ ಪಂಚಾಯತಿನ ಮೂಲಕ ಸಹಕಾರ ನೀಡಲು ಪ್ರಯತ್ನಿಸುತ್ತೇನೆ” ಎಂದು ಪುತ್ತಿಗೆ ಗ್ರಾಮ ಪಂಚಾಯತು ಅಧ್ಯಕ್ಷ ಚನಿಯ ಪಾಡಿ ಅಭಿಪ್ರಾಯಪಟ್ಟರು. ಅವರು ಜೂ.1ರ ಸೋಮವಾರದಂದು ಗುಂಪೆ ವಲಯದ ನೇತೃತ್ವದಲ್ಲಿ ಶ್ರೀರಾಮಚಂದ್ರಾಪುರ ಮಠದ ಸಹಾಯದೊಂದಿಗೆ ದುರಸ್ತಿಗೊಳಿಸಿದ ಪುತ್ತಿಗೆ ಸನಿಹದ ಕೃಷ್ಣ ಹೆಬ್ಬಾರರ ಮನೆ ಸಮರ್ಪಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಹಾಮಂಡಲ ಅಧ್ಯಕ್ಷ ಡಾ| ವೈ.ವಿ. ಕೃಷ್ಣ ಮೂರ್ತಿ ಮನೆಯನ್ನು ಕೃಷ್ಣ ಹೆಬ್ಬಾರರಿಗೆ ಸಮರ್ಪಣೆ ಮಾಡಿದರು. ಪುತ್ತಿಗೆ ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಜಯಂತ ಪಾಟಾಳಿ, ಗ್ರಾಮ ಪಂಚಾಯತು ಸದಸ್ಯ ಪಾಲಾಕ್ಷ ರೈ, ಮುಳ್ಳೇರಿಯ ಮಂಡಲ ಆರೋಗ್ಯ ವಿಭಾಗದ ಪ್ರಧಾನ ರಮೇಶ್ ಏತಡ್ಕ, ಗುಂಪೆ ವಲಯ ಅಧ್ಯಕ್ಷರಾದ ಅಮ್ಮಂಕಲ್ಲು ರಾಮ ಭಟ್, ಗುಂಪೆ ವಲಯ ಕಾರ್ಯದರ್ಶಿ ಕೇಶವಪ್ರಸಾದ್ ಎಡಕ್ಕಾನ ಉಪಸ್ಥಿತರಿದ್ದರು.
ಗ್ರಾಮಣಿ ಶಂಭು ಹೆಬ್ಬಾರ್ ಶ್ರಾವಣಕೆರೆ ಸ್ವಾಗತಿಸಿದರು. ಗುಂಪೆ ವಲಯದ ವಿದ್ಯಾ ವಿಭಾಗದ ಪ್ರಧಾನ ಎಂ.ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಅಂಗವಾಗಿ ವೇದಮೂರ್ತಿ ನಿಡುಗಳ ಶಂಕರನಾರಾಯಣ ಭಟ್ಟರು ಗಣಪತಿ ಹವನ, ಶಿವಪೂಜೆ, ಕುಂಕುಮಾರ್ಚನೆಗಳನ್ನು ನೆರವೇರಿಸಿದರು. ಶಿಥಿಲಾವಸ್ಥೆಯಲ್ಲಿದ್ದ ಈ ಮನೆಯನ್ನು ಮುಳ್ಳೇರಿಯಾ ಮಂಡಲದ ಗುಂಪೆ ವಲಯದ ನೇತೃತ್ವದಲ್ಲಿ ಸುಮಾರು ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ವಾಸಕ್ಕೆ ಯೋಗ್ಯಗೊಳಿಸಲಾಗಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.