ರಾಯ್ಪುರ: ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರ ಭೇಟಿಗೆ ಮುಂಚಿತವಾಗಿ ಛತ್ತೀಸ್ಗಢದಲ್ಲಿ ಶನಿವಾರ ಎರಡು ಪ್ರಬಲ ಬಾಂಬ್ಗಳನ್ನು ಪತ್ತೆ ಹಚ್ಚಿ ನಿಷ್ಕ್ರೀಯಗೊಳಿಸಲಾಗಿದೆ.
ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯ ದೊರ್ನಪಲ್ ಪ್ರದೇಶದಲ್ಲಿ ಟಿಫಿನ್ನಲ್ಲಿ ಈ ಎರಡು ಬಾಂಬ್ಗಳನ್ನು ಇಡಲಾಗಿದ್ದು, ರಕ್ಷಣಾ ಪಡೆಗಳು ಇದನ್ನು ಪತ್ತೆ ಹಚ್ಚಿ ನಿಷ್ಕ್ರೀಯಗೊಳಿಸಿ ಆಗುವ ಅನಾಹುತವನ್ನು ತಪ್ಪಿಸಿವೆ.
ಎರಡು ಬಾಂಬ್ಗಳು ತಲಾ 10 ಕೆಜಿ ತೂಕವಿದ್ದು, ಇದರಲ್ಲಿ ಐಇಡಿಯನ್ನು ಅಳವಡಿಸಲಾಗಿತ್ತು. ನೆಲದ ಅಡಿಯಲ್ಲಿ ಟಿಫಿನ್ನಲ್ಲಿ ಹಾಕಿ ಬಚ್ಚಿಡಲಾಗಿತ್ತು.
ರಾಜನಾಥ್ ಸಿಂಗ್ ಅವರು ಇಂದು ಮಧ್ಯಾಹ್ನ ಛತ್ತೀಸ್ಗಢಕ್ಕೆ ತೆರಳಲಿದ್ದು, ಎರಡು ದಿನ ಅಲ್ಲೇ ಇದ್ದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.