ಭಾರತದಲ್ಲಿ ಟ್ಯಾಲೆಂಟ್ಸ್ ಇದೆ, ಹೊಸ ಹೊಸ ಆವಿಷ್ಕಾರ ಮಾಡುವ ಕಲೆಯಿದೆ, ಇಡೀ ಜಗತ್ತೇ ನಮ್ಮತ್ತ ತಿರುಗಿ ನೋಡುವ ಎಲ್ಲಾ ವೈಶಿಷ್ಟ್ಯಗಳೂ ಭಾರತದ ಯುವಜನತೆಯಲ್ಲಿದೆ.
ಆದರೆ ಇಲ್ಲಿನ ಪ್ರತಿಭೆಗಳು ತಮಗೆ ಇಲ್ಲಿ ಅವಕಾಶ ಇಲ್ಲ ಅನ್ನುವ ಕಾರಣಕ್ಕಾಗಿ ತಮ್ಮ ಪ್ರತಿಭೆಯನ್ನು ಗೂಗಲ್, ಫೇಸ್ಬುಕ್, ಪೆಪ್ಸಿ, ನಾಸಾ, MNC ಗಳಂತಹ ಹೊರದೇಶದ ಕಂಪೆನಿಗಳಿಗೆ ದುಡಿದು ತಮ್ಮ ಟ್ಯಾಲೆಂಟನ್ನು ಖರ್ಚು ಮಾಡಿ ಅನಿವಾರ್ಯವಾಗಿ ವಿದೇಶಿ ಕಂಪೆನಿಗಳನ್ನು ಬೆಳೆಸುತ್ತಿದ್ದಾರೆ.
ಈ ಮಧ್ಯೆ ಇಂತಹ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ Start up ಇಂಡಿಯಾ, ಮೇಕ್ ಇನ್ ಇಂಡಿಯಾ, Stand Up ಇಂಡಿಯಾದಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರ ಉದ್ದೇಶ ನಮ್ಮ ದೇಶದ ಪ್ರತಿಭಾವಂತರ ಪ್ರತಿಭೆ ಬೇರೆ ದೇಶಗಳ ಪಾಲಾಗದೆ ಅದು ನಮ್ಮ ದೇಶಕ್ಕೇ ಮೀಸಲಾಗಿರಲಿ, ಜಗತ್ತು ಭಾರತದತ್ತ ತನ್ನ ದೃಷ್ಟಿ ನೆಡಲಿ ಎನ್ನೋದಾಗಿದೆ.
ಮೋದಿ ಅವರು ಜಾರಿಗೆ ತಂದಿರುವ ಈ ಯೋಜನೆಗಳ ಅಡಿಯಲ್ಲಿ ಈಗಾಗಲೇ ಬಹಳಷ್ಟು ಯುವಕರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಈಗ ಇಂತಹ ಸಾಹಸಕ್ಕೆ ಕೈ ಹಾಕಿರುವ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯುವಕ ಸಂಜೀವ್ ಕುಮಾರ್ ಪಾಟೀಲ್ ಹಾಗು ಹುಬ್ಬಳ್ಳಿಯ ಭರತ್ ಶರ್ಮಾ ವಿದೇಶಿ ಸಾಮಾಜಿಕ ಜಾಲತಾಣಗಳಿಗೆ ಸೆಡ್ಡು ಹೊಡೆಯಲು ಸ್ವದೇಶಿ ಸಾಮಾಜಿಕ ಜಾಲತಾಣವೊಂದನ್ನು ತಯಾರು ಮಾಡಿದ್ದಾರೆ. ಇದು ಭಾರತದ ಪ್ರಪ್ರಥಮ ಸ್ವದೇಶೀ ಸೋಶಿಯಲ್ ಮೀಡಿಯಾ ಆಗಲಿದೆ.
ಸಂಜೀವ್ ಕುಮಾರ್, ಭರತ್ ಶರ್ಮಾ ಸ್ವದೇಶಿ ವಿಚಾರಧಾರೆಯವರಾಗಿದ್ದು ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟೆಕ್ಚರ್ ವಿಭಾಗದಲ್ಲಿ ಓದುತ್ತಿದ್ದಾರೆ. ವಿದೇಶಿ ಕಂಪೆನಿಗಳ ಹಾವಳಿಯನ್ನು ಕಂಡ ಈ ಯುವಕರು ಯಾಕೆ ಸ್ವದೇಶಿ ಸೋಶಿಯಲ್ ಮೀಡಿಯಾ ಶುರು ಮಾಡಬಾರದು ಎಂದು ತಮ್ಮದೇ ಒಂದು ಸೋಶಿಯಲ್ ಮೀಡಿಯಾ ಪ್ರಾರಂಭಿಸಲು ತಯಾರಾಗಿದ್ದಾರೆ.
ಇದರ ಹೆಸರು TDiaries ಅಂತ. ಇಂದು Facebook ವಿಶ್ವವ್ಯಾಪಿಯಾಗಿದೆ. ಸಾಮಾಜಿಕ ಜಾಲತಾಣ ಕ್ಷೇತ್ರಗಳಲ್ಲಿ Facebook ಮುಂದೆ ಇದೆ. ಕ್ಯಾಲಿಫೋರ್ನಿಯಾ ಮೂಲದ ಈ ಕಂಪನಿಯನ್ನು ಎದುರಿಸಲು ಭಾರತೀಯ ಮೂಲದ ಕಂಪನಿಯೊಂದು ಈ ಕ್ಷೇತ್ರದಲ್ಲಿ ಅಖಾಡಕ್ಕಿಳಿಯಲಿದೆ.
ಹೌದು! ಕೆಲವೇ ದಿನಗಳಲ್ಲಿ ನಿಮ್ಮ ಮೊಬೈಲ್ ಸ್ಟೋರ್ಗೆ ಸೇರಲಿರುವ ಈ app ಭಾರತದ ಹೆಮ್ಮೆಯ app ಆಗಿ ಹೊರಹೊಮ್ಮುತ್ತಿದೆ. ಅದರ ಹೆಸರೇ TDiaries. ಈ appನ ವಿಶೇಷವೆಂದರೆ ನಿಮ್ಮೂರಿನಲ್ಲಿರುವ ಹಲವು offer ಗಳನ್ನು ನಿಮ್ಮ ಬೆರಳಂಚಿನಲ್ಲಿಯೇ ತಿಳಿಯಬಹುದು. ಹಲವು ಬ್ರ್ಯಾಂಡ್ಗಳು, ಶಾಪಿಂಗ್ ಮಳಿಗೆಗಳು, ಹೋಟೆಲ್ offersಗಳು, ಚಿತ್ರಮಂದಿರದಲ್ಲಿರುವ ಸಿನೆಮಾಗಳು ಇನ್ನೂ ಹಲವು ವಿವರಗಳನ್ನು TDiaries ನ app ನಿಂದಲೇ ತಿಳಿಯಬಹುದು.
ಈ app ಒಂದರಲ್ಲೇ ನೀವು ಫೇಸ್ಬುಕ್, ವಾಟ್ಸ್ಯಾಪ್, ಇನ್ಸ್ಟಾಗ್ರಾಂನಂತಹ ಸೋಶಿಯಲ್ ಮೀಡಿಯಾ app ಗಳನ್ನು ಉಪಯೋಗಿಸಬಹುದಾಗಿದೆ.
ಫೇಸ್ಬುಕ್ನಲ್ಲಿ 5000 ಜನ friends ಆಗಿಬಿಟ್ಟರೆ ಅದರ ನಂತರ ನೀವು ಹೊಸ ಸ್ನೇಹಿತರನ್ನು ಸೇರಿಸಿಕೊಳ್ಳುವ provision ಅದರಲ್ಲಿಲ್ಲ, ಆದರೆ TDiaries ನಲ್ಲಿ ನೀವು 5000 ಸ್ನೇಹಿತರನ್ನು ಹೊಂದಿದ ಮೇಲೆಯೂ ಮತ್ತೆ ನಿಮ್ಮ ಪೆಂಡಿಂಗ್ ರಿಕ್ವೆಸ್ಟ್ ಸ್ನೇಹಿತರನ್ನು ಸೇರಿಸಿಕೊಳ್ಳಬಹುದಾಗಿದೆ.
ಇದರಲ್ಲಿ 5000 ಸ್ನೇಹಿತರಾದ ನಂತರ ನಿಮ್ಮ ಅಕೌಂಟ್ celebrity account ಅಂತಾಗುತ್ತೆ, ನಿಮಗೊಂದು ಟಿಕ್ ಮಾರ್ಕ್ ಇರೋ ಬ್ಯಾಡ್ಜ್ ಸಿಗುತ್ತದೆ. ಅದರರ್ಥ ನೀವು ಸೋಶಿಯಲ್ ಮೀಡಿಯಾದ ಸೆಲೆಬ್ರಿಟಿ ಅಂತ.
ಇದರಲ್ಲಿ ನೀವು ಪ್ರತಿನಿತ್ಯದ ಪೋಸ್ಟ್ ಕೂಡ ಮಾಡಬಹುದು.
ಸದ್ಯದಲ್ಲೇ ಈ app ನ್ನು ಬಿಡುಗಡೆಗೊಳಿಸಲಾಗುತ್ತಿದ್ದು ಆ್ಯಂಡ್ರಾಯ್ಡ್ ಬಳಕೆದಾರರು Playstore ನಲ್ಲಿ ಹಾಗು ಐಫೋನ್ ಬಳಕೆದಾರರು ಅದಕ್ಕೆ ಸಂಬಂಧಪಟ್ಟ store ನಲ್ಲಿ install ಮಾಡಿಕೊಳ್ಳಬಹುದಾಗಿದೆ.
ಇದರ ಮಾಹಿತಿಗಾಗಿ ನೀವು TDiaries ನ instagram ಅಕೌಂಟ್ನಲ್ಲಿ join ಆಗಿ ಮಾಹಿತಿ ಪಡೆಯಬಹುದಾಗಿದೆ.
ಏನೇ ಆಗಲಿ ರಾಜೀವ್ ದೀಕ್ಷೀತರ ಸ್ವದೇಶಿ ಭಾರತದ ಕನಸು, ಮೋದಿಜೀ ಅವರ startup ಇಂಡಿಯಾದ ಕನಸಿನ ಜೊತೆ ಭಾರತದ ಯುವಕರಿಂದ ಇಂತಹ ಕಂಪನಿಗಳು ನವಭಾರತ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆಗಳಾಗುತ್ತಿವೆ.
ಇವರ ಈ ಪ್ರಯತ್ನಕ್ಕೆ ಶುಭವಾಗಲಿ!!!
ವರದಿ : Vinod Hindu Nationalist
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.