ನವದೆಹಲಿ: ಜನವರಿ 1ರಿಂದ ಜಪಾನ್ ಭಾರತೀಯರಿಗಾಗಿ ವೀಸಾ ನಿಯಮಗಳನ್ನು ಸಡಿಲಗೊಳಿಸಲಿದೆ. ಅಲ್ಲದೇ ಅಲ್ಪಾವಧಿಯ ತಂಗುವಿಕೆಗಾಗಿ ಬಹು ಪ್ರವೇಶ ವೀಸಾವನ್ನು ಮಂಜೂರು ಮಾಡಲಿದೆ.
ವೀಸಾ ಅರ್ಜಿ ಸಲ್ಲಿಕೆಯ ದಾಖಲೆಯನ್ನು ಸರಳಗೊಳಿಸಲಾಗಿದೆ ಮತ್ತು ಅರ್ಹ ಅರ್ಜಿದಾರರನ್ನು ವಿಸ್ತಾರಗೊಳಿಸಲಾಗಿದೆ.
ಇನ್ನು ಮುಂದೆ ಜಪಾನಿನ ಬಹು-ಪ್ರವೇಶ ವೀಸಾಗೆ ಅರ್ಜಿ ಹಾಕುವವರು ಉದ್ಯೋಗ ಸರ್ಟಿಫಿಕೇಟ್ ಮತ್ತು ಕಾರಣ ಉಲ್ಲೇಖ ಮಾಡಿರುವ ಪತ್ರವನ್ನು ಸಲ್ಲಿಕೆ ಮಾಡಬೇಕಾಗಿಲ್ಲ.
ವರ್ಷದಲ್ಲಿ ಎರಡು ಅಥವಾ ಅದಕ್ಕಿಂತ ಜಾಸ್ತಿ ಜಪಾನಿಗೆ ಪ್ರಯಾಣಿಸಿದ ಇತಿಹಾಸವುಳ್ಳ ಭಾರತೀಯರಿಗೆ ಗರಿಷ್ಠ 5 ವರ್ಷ ತಂಗಬಹುದಾದ ಬಹು ಪ್ರವೇಶ ವೀಸಾವನ್ನು ಜಪಾನ್ ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.