ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿನ ನಂಗಲಿ ವೆಂಕಟಪುರ ಎಂಬ ಪುಟ್ಟ ಹಳ್ಳಿಯಲ್ಲಿ ಇರುವುದು ಕೇವಲ 35 ಕುಟುಂಬಗಳು. ಆದರೆ ಇಲ್ಲಿನ ಗ್ರಾಮಸ್ಥರು ಸೇರಿ ಇತಿಹಾಸ ನಿರ್ಮಿಸಲು ಹೊರಟಿದ್ದಾರೆ. ಒಂದು ಕಾಲದಲ್ಲಿ ಹೊಯ್ಸಳರ ಅಧೀನದಲ್ಲಿದ್ದ ಈ ಗ್ರಾಮ ಇದೀಗ ಅತೀದೊಡ್ಡ, ವೈಭವೋಪೇತ ಹೊಯ್ಸಳ ದೇಗುಲದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ.
ಹೊಯ್ಸಳರ ವಾಸ್ತುಶಿಲ್ಪದಲ್ಲಿ ಕಲ್ಯಾಣ ವೆಂಕಟೇಶ್ವರ ದೇಗುಲ ಇಲ್ಲಿ ನಿರ್ಮಾಣಗೊಳ್ಳುತ್ತಿದೆ. ಶ್ರೀ ಕಲ್ಯಾಣ ವೆಂಕಟೇಶ್ವರ ಹೊಯ್ಸಳ ಆರ್ಟ್ ಫೌಂಡೇಶನ್ನ ಕಾರ್ಯದರ್ಶಿಯಾಗಿರುವ ಅರವಿಂದ್ ರೆಡ್ಡಿಯವರು ಈ ದೇಗುಲ ನಿರ್ಮಾಣದ ರುವಾರಿಯಾಗಿದ್ದಾರೆ. ತಮ್ಮ ತಂದೆ ರಾಮಲಿಂಗಾ ರೆಡ್ಡಿಯವರ ಕನಸಿನಂತೆ ಅವರು ದೇಗುಲವನ್ನು ನಿರ್ಮಿಸುತ್ತಿದ್ದಾರೆ.
ಇತಿಹಾಸ ತಜ್ಞರು, ವಾಸ್ತು ಶಿಲ್ಪ ತಜ್ಞರು ಈ ದೇಗುಲದ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. 800 ವರ್ಷಗಳ ಹಿಂದೆ ಹೊಯ್ಸಳ ರಾಜಾಡಳಿತವನ್ನು ಮತ್ತೆ ನೆನಪಿಸುವ ಕಾರ್ಯ ನಂಗಲಿ ಗ್ರಾಮ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.