ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚೆನ್ನೈಗೆ ಆಗಮಿಸಿದ್ದು, ‘ಡೈಲಿ ತಂತಿ’ ಪತ್ರಿಕೆಯ 75ನೇ ವರ್ಷಾಚರಣೆ ಸಮಾರಂಭದಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಅವರು, ‘ಶಾಂತಿಯ ಮೂಲಕ ಸುಧಾರಣೆಯನ್ನು ತರುವ ಅತೀ ಮುಖ್ಯ ಸಾಧನವೆಂದರೆ ಅದು ಮಾಧ್ಯಮ. ಸರ್ಕಾರ ಮತ್ತು ನ್ಯಾಯಾಂಗಕ್ಕೆ ಸರಿ ಸಮನಾದ ಸಾಮಾಜಿಕ ಬದ್ಧತೆ ಮಾಧ್ಯಮಗಳಿಗೂ ಇದೆ’ ಎಂದಿದ್ದಾರೆ.
‘ಬಹುತೇಕ ಮಾಧ್ಯಮಗಳು ರಾಜಕೀಯದ ಹಿಂದೆಯೇ ಸುತ್ತುತ್ತಿವೆ. ರಾಜಕಾರಣಿಗಳಿಗಿಂತಲೂ ಭಾರತ ಮಿಗಿಲಾಗಿದೆ. 125 ಕೋಟಿ ಭಾರತೀಯರಿಂದಾಗಿದೆ ಭಾರತ’ ಎಂದಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಹೆಚ್ಚು ಬಾಧಿಸುತ್ತಿರುವ ಹವಮಾನ ವೈಪರೀತ್ಯಗಳ ಬಗ್ಗೆ ಹೆಚ್ಚಿನ ವರದಿಗಳನ್ನು ಮಾಡುವಂತೆ ಅವರು ಕರೆ ನೀಡಿದರು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಾಧ್ಯಮಗಳು ಸಮಾಜಿಕ ಹಿತದೃಷ್ಟಿಯಲ್ಲಿ ಬಳಸಿಕೊಳ್ಳಬೇಕು. ವಾಸ್ತವವಾಗಿ ತಪ್ಪಾಗಿರುವ ವಿಷಯಗಳು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಒಳಗೊಂಡಿರುವುದಿಲ್ಲ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.