ನವದೆಹಲಿ: ಜನವರಿಯಿಂದ ದೇಶದಲ್ಲಿ ಮಾರಾಟವಾಗುವ ಬಂಗಾರದ ಆಭರಣಗಳಲ್ಲಿ ಕ್ಯಾರೆಟ್ ಕೌಂಟ್ನೊಂದಿಗೆ ಹಾಲ್ಮಾರ್ಕ್ ಇರವುದು ಕಡ್ಡಾಯವಾಗಿದೆ.
ಗ್ರಾಹಕ ವ್ಯವಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಆಭರಣಗಳಲ್ಲಿ ಹಾಲ್ಮಾರ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ. ಜನವರಿಯಿಂದ ಇದು ಅನ್ವಯವಾಗಲಿದೆ.
‘ಪ್ರಸ್ತುತ ಜನರಿಗೆ ತಾವು ಖರೀದಿಸುವ ಬಂಗಾರದ ಆಭರಣಗಳ ಗುಣಮಟ್ಟವನ್ನು ತಿಳಿದುಕೊಳ್ಳುವುದು ಅಸಾಧ್ಯವಾಗುತ್ತಿದೆ. ಹೀಗಾಗೀ ಹಾಲ್ ಮಾರ್ಕ್ ಕಡ್ಡಾಯಗೊಳಿಸುತ್ತಿದ್ದೇವೆ’ ಎಂದಿದ್ದಾರೆ.
ಕೆಲವೊಂದು ಆಭರಣಗಳಲ್ಲಿ ಬಿಐಎಸ್ ಮಾರ್ಕ್ ಇದ್ದರೂ ಅದು ಖಚಿತವಾಗಿ ಗುಣಮಟ್ಟವನ್ನು ತಿಳಿಸುವುದಿಲ್ಲ. ಹೀಗಾಗೀ ಕ್ಯಾರೆಟ್ನೊಂದಿದೆ ಹಾಲ್ಮಾರ್ಕ್ ನಮೂದಿಸುವುದು ಕಡ್ಡಾಯ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.