ವಿಶ್ವಕ್ಕೆ ಮಾನವೀಯತೆಯ ಪಾಠವನ್ನು, ನಾಗರೀಕತೆಯನ್ನು ಕಲಿಸಿಕೊಟ್ಟ ಶ್ರೇಷ್ಠ ಸನಾತನ ಧರ್ಮ ನಮ್ಮದು. ವಿಶ್ವಕ್ಕೆ ಮೊಟ್ಟ ಮೊದಲ ದಾರ್ಶನಿಕರನ್ನು ಕೊಟ್ಟ ಪರಂಪರೆ ನಮ್ಮದು. ಜಗತ್ತಿನ ಇನ್ನಿತರೆ ನಾಗರೀಕತೆಗಳು ಆಗ ತಾನೆ ಹುಟ್ಟಿಕೊಳ್ಳುತ್ತಿರುವಾಗ ಜಗತ್ತಿಗೆ ಬೆಳಕನ್ನು ನೀಡಿದ ಅಮೃತ ಸದೃಶ ಪರಂಪರೆ ನಮ್ಮದು. ಶ್ರೀ ರಾಮಕೃಷ್ಣ ಪರಮಹಂಸರು ಹಿಂದೂ ಧರ್ಮದ ಬಗ್ಗೆ ಹೇಳಿದ ಮಾತುಗಳಿವು, “ಹಿಂದೂಧರ್ಮ ಮಾತ್ರವೇ ಸನಾತನ ಧರ್ಮ; ಹಿಂದೂಧರ್ಮವೇ ಚಿರಂತನವಾದುದು. ಅದೇ ನಿರಂತರವಾಗಿ ಮುಂದೇಯೂ ಉಳಿಯುತ್ತದೆ”
ತ್ಯಾಗ ಮತ್ತು ಸೇವೆಗಳೇ ಇದರ ಮುಖ್ಯ ಅಂಶಗಳು. ಇಂತಹ ಶ್ರೇಷ್ಠ ಪರಂಪರೆಯ ನಮ್ಮ ಸಂಸ್ಕೃತಿಯ ಮೇಲೆ ಅನೇಕ ಆಕ್ರಮಣಗಳಾಗಿವೆ. ಇದು ಇಂದು ನಿನ್ನೆಯ ವಿಚಾರವಲ್ಲ. ಅನೇಕ ಶತಮಾನಗಳಿಂದ ಈ ಸನಾತನ ಹಿಂದೂ ಧರ್ಮದ ಮೇಲೆ ನಿರಂತರ ಆಕ್ರಮಣಗಳು ನಡೆಯುತ್ತಾ ಬಂದಿವೆ. ಹಿಂದೆ ಹೊರ ದೇಶದಿಂದ ಹೊರರಾಜ್ಯದಿಂದ ಬಂದು ಆಕ್ರಮಣ ಮಾಡಿ ನಮ್ಮತನವನ್ನು ನಾಶ ಮಾಡಲು ಪ್ರಯತ್ನಿಸಿದರೆ ಈಗ ವಿಪರ್ಯಾಸ ಹಾಗು ಬೇಸರವೆಂದರೇ ಇದೇ ದೇಶದಲ್ಲಿ ಹುಟ್ಟಿರುವ ಇಲ್ಲಿಯೇ ಇದ್ದು ಎಲ್ಲ ಅನುಕೂಲಗಳನ್ನು ಪಡೆದು ಕೀರ್ತಿ ಹೆಸರು ಸ್ಥಾನಮಾನ ಪಡೆದುಕೊಂಡು ನಮ್ಮ ಧರ್ಮವನ್ನೇ ಬಯ್ಯುವರು. ಇವರಿಗೆಲ್ಲ ಬಯ್ಯಲು ತೆಗಳಲು ಹಿಂದುತ್ವ ಎನ್ನುವುದು ಯಾವುದೋ ಒಂದು ಕಥೆಯೋ ಯಾವುದೋ ಒಂದು ಆಟಿಕೆಯ ವಸ್ತುವಲ್ಲ. ಅದೊಂದು ಜೀವನಮಾರ್ಗ. ಅದೊಂದು ಆದಿ ಅಂತ್ಯವಿಲ್ಲದ ಸನಾತನ ಪರಂಪರೆ. ತಾವು ಹೆಸರನ್ನು ಗಿಟ್ಟಿಸಿಕೊಳ್ಳಲು ತಾವು ಪ್ರಶಸ್ತಿ ಪಡೆಯಲು ಹಿಂದುತ್ವವನ್ನು ಬೈದರೆ ಸಾಕು ಎಂದು ಕೊಂಡಿದ್ದಾರೆ. ಮಾಧ್ಯಮಗಳಂತೂ ಬೇರೆಯ ವಿಷಯಗಳಿಲ್ಲವೇನೋ ಎನ್ನುವ ಹಾಗೆ ಅದನ್ನೇ ತೋರಿಸುತ್ತಾರೆ. ಅವರಿಗೆ ಬೇಕಿರುವುದು ಟಿ.ಆರ್.ಪಿ. ಇಂತಹ ಎಲ್ಲರಿಗೂ ಹಿಂದುಗಳು ಸೇರಿ ಇಂದು ಸಮಾಜದಿಂದ ಹೊರಗಿಡುವ ಪ್ರಯತ್ನ ಆಗಬೇಕಾಗಿದೆ. ಅಂತಹ ಚಿತ್ರನಟರನ್ನು ಬರಹಗಾರರನ್ನು ಪ್ರೋತ್ಸಾಹಿಸಬಾರದು. ಒಂದು ವೇಳೆ ಅಂತಹ ಚಿತ್ರಗಳು ಹೊರಬಂದರೆ ಅದನ್ನು ಯಾರೂ ನೋಡಲೇಬಾರದು. ಅಂತಹವರನ್ನು ಯಾವುದೇ ಸಮಾರೋಪಗಳಿಗೆ ಆಹ್ವಾನಿಸಬಾರದು. ಸಂಪೂರ್ಣವಾಗಿ ನಿಷೇಧಿಸುವ ಪ್ರಯತ್ನವಾಗಬೇಕು. ಹಿಂದುತ್ವವನ್ನು ನೀಚಾಗಿ ನೋಡುವ ಎಲ್ಲರನ್ನು ಹಿಂದೂ ಸಮಾಜ ತನ್ನಿಂದ ದೂರವಿಟ್ಟು ಅವರಿಗೆ ಮೊದಲು ನೀಡುವ ಸ್ಥಾನಮಾನ, ಸೌಕರ್ಯವನ್ನು ಮೊದಲು ಕಿತ್ತುಕೊಳ್ಳಬೇಕು. ಸದೃಢವಾಗಿ ಅಂತಹ ಸರ್ಕಾರವೊಂದು ಇರಬೇಕು. ಆಗ ಮಾತ್ರ ಅಂಥವರಿಗೆ ತಕ್ಕ ಪಾಠಕಲಿಸಿದಂತೆ ಆಗುವುದು.
ಯೋಚಿಸಿ ನೋಡಿ ಸಹಸ್ರಾರು ವರ್ಷಗಳಿಂದ ಒಂದು ಭವ್ಯವಾಗಿ ಬೆಳೆದು ನಿಂತಿರುವ ಆಲದ ಮರ ಅನೇಕರಿಗೆ ನೆರಳು ನೀಡುತ್ತಾ ಬಂದಿರುವ ಈ ಮರವನ್ನು ಒಂದಷ್ಟು ಜನ ಬಯುತ್ತಾ ಬಂದಿದ್ದಾರೆ. ಒಂದಷ್ಟು ಜನ ಕಡಿಯಲು ಪ್ರಯತ್ನಿಸಿದ್ದಾರೆ ಆದರೆ ಅದೆಲ್ಲವನ್ನು ಸಹಿಸಿಕೊಂಡು ಈ ಮರ ಇಂದಿಗೂ ಅನೇಕರಿಗೆ ನೆರಳನ್ನು ನೀಡುತ್ತಿದೆ. ಆದರೆ ಅದು ತನ್ನ ಹಿಂದಿನ ಶಕ್ತಿಯನ್ನು ಕಳೆದುಕೊಂಡಿದೆ. ಆ ಶಕ್ತಿಯನ್ನು ಮರಳಿ ಒದಗಿಸಲು ಇಂದು ಸೂಕ್ತ ಸಮಯ ಕೂಡಿಬಂದಿದೆ. ಆ ಸನಾತನ ಮರದ ನೆರಳು ಪಡೆದಿರುವ ನಾವೆಲ್ಲರೂ ಸೇರಿ ಮತ್ತೆ ಅದನ್ನು ಗಟ್ಟಿಗೊಳಿಸೋಣ. ಮತ್ತೆ ಆ ಮರ ಇನ್ನೂ ಭವ್ಯವಾಗಿ ಬೆಳೆದು ಇನ್ನಷ್ಟು ಜನರಿಗೆ ನೆರಳು ನೀಡಲಿ ಆಶ್ರಯ ನೀಡಲಿ ಎಂದು ಆಶಿಸೋಣ. ಈ ಕಾರ್ಯವು ಈಗಲಿನಿಂದಲೇ ಪ್ರಾರಂಭವಾಗಬೇಕು ನಮ್ಮ ಮನೆಗಳೇ ಇದಕ್ಕೆ ನಾಂದಿಯಾಗಬೇಕು. ಮತ್ತೆ ಭಾರತದ ಸನಾತನ ಹಿಂದುಧರ್ಮವು ಜಗದ್ಗುರುವಾಗಿ ವಿಶ್ವಕ್ಕೆ ಜ್ಞಾನದ ಬೆಳಕನ್ನು ನೀಡಿ, ತಾಯಿ ಭಾರತಿಯು ವಿಶ್ವ ಮಾತೆಯಾಗಿ ಎಲ್ಲರನ್ನು ಸಲಹುವ ಜಗನ್ಮಾತೆಯಾಗುವಳು.
ಟಿಪ್ಪು ಬಗ್ಗೆ ತಿಳಿಯೋಣ ಬನ್ನಿ .. ಇತಿಹಾಸಕಾರರು ಏನೆಂದು ಹೇಳುತ್ತಾರೆ ಎಂದು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ. https://goo.gl/sCiBFB
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.