ಲಕ್ನೋ: ಉತ್ತರಪ್ರದೇಶದ ಮದರಸಗಳಲ್ಲಿ ಎನ್ಸಿಇಆರ್ಟಿ ಬುಕ್ಗಳನ್ನು ಪರಿಚಯಿಸುವ ಮೂಲಕ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಮಹತ್ವದ ಸುಧಾರಣೆಗಳನ್ನು ತಂದಿದ್ದಾರೆ.
ಮದರಸಗಳ ಸುಧಾರಣೆಗೆ ಬಹಳ ಜಾಗರೂಕತೆಯಿಂದ ಕ್ರಮ ತೆಗೆದುಕೊಂಡಿರುವ ಯೋಗಿ ಸರ್ಕಾರ, ಪ್ರಸ್ತುತ ಇರುವ ಪಠ್ಯವನ್ನು ಬದಲಾಯಿಸದೆ ಹೆಚ್ಚುವರಿಯಾಗಿ ಎನ್ಸಿಇಆರ್ಟಿ ಪುಸ್ತಕಗಳನ್ನು ಪರಿಚಯಿಸಿದೆ. ಇಂಗ್ಲೀಷ್, ಗಣಿತ, ವಿಜ್ಞಾನ ವಿಷಯಗಳನ್ನು ಇದು ಒಳಗೊಂಡಿದೆ.
ಇದರಿಂದಾಗಿ ಇನ್ನು ಮುಂದೆ ಮದರಸದ ವಿದ್ಯಾರ್ಥಿಗಳು ಸಿಬಿಎಸ್ಇ ವಿದ್ಯಾರ್ಥಿಗಳಂತೆ 1ರಿಂದ 12ನೇ ತರಗತಿಯವರೆಗೆ ಪರೀಕ್ಷೆಗಳನ್ನು ಎದುರಿಸುವುದು ಕಡ್ಡಾಯ.
ಮದರಸದ ವಿದ್ಯಾರ್ಥಿಗಳು ಪರ್ಶಿಯಾ, ಉರ್ದು, ಕುರಾನ್, ಇಸ್ಲಾಂ ಧರ್ಮಗಳನ್ನು ಕಲಿಯುವುದರೊಂದಿಗೆ ಇನ್ನು ಮುಂದೆ ಇಂಗ್ಲೀಷ್, ವಿಜ್ಞಾನ ವಿಷಯಗಳನ್ನೂ ಕಲಿಯಲಿದ್ದಾರೆ. ಇದು ಅವರ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲಿದೆ ಎಂದು ಯುಪಿ ಶಿಕ್ಷಣ ಸಚಿವಾಲಯ ಅಭಿಪ್ರಾಯಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.