ನವದೆಹಲಿ: ಇಟಲಿ ಪ್ರಧಾನಿ ಪಾವೊಲೊ ಗೆಂಟಿಲೊನಿ ಸೋಮವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿ, ಹಲವಾರು ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಿದರು.
ಪಾವೊಲೊ ಅವರು ಎರಡು ದಿನಗಳ ಪ್ರವಾಸಕ್ಕಾಗಿ ಭಾನುವಾರ ನವದೆಹಲಿಗೆ ಬಂದಿಳಿದರು. ಅವರಿಗೆ ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತವನ್ನು ಕೋರಲಾಯಿತು.
ಉಭಯ ದೇಶಗಳು ಬಲಿಷ್ಠ ಆರ್ಥಿಕ ಬಾಂಧವ್ಯವನ್ನು, ಪರಸ್ಪರ ಹಿತಾಸಕ್ತಿಯನ್ನು ಹೊಂದಿವೆ ಮತ್ತು ಭಯೋತ್ಪಾದನ ವಿರೋಧಿ ಹೋರಾಟದಲ್ಲೂ ಸಹಕಾರ ಹೊಂದಿದ್ದೇವೆ ಎಂದು ಪಾವೊಲೊ ಹೇಳಿದ್ದಾರೆ.
ಇಂದು ಸಂಜೆ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಉನ್ನತ ಮಟ್ಟದ ಸಮಾಲೋಚನೆ ನಡೆಸಲಿದ್ದಾರೆ.