ನವದೆಹಲಿ: ಪ್ರಕೃತಿ ಸಂರಕ್ಷಣೆಯ ಬಗೆಗಿನ ಭಾರತೀಯರ ಮತ್ತು ಭಾರತದ ಸಿನಿಮಾಗಳನ್ನು ಪ್ರಚಾರಪಡಿಸುವ ಸಲುವಾಗಿ ‘ಡಿಡಿ ಪ್ರಕೃತಿ’ ಎಂಬ ಹೊಸ ಚಾನೆಲ್ನ್ನು ಹೊರತರಲಾಗುತ್ತಿದೆ. 2018ರ ವೇಳೆಗೆ ಇದು ಆರಂಭಗೊಳ್ಳುವ ನಿರೀಕ್ಷೆ ಇದೆ.
2031ರವರೆಗೆ ಜಾರಿಯಲ್ಲಿರುವ ನ್ಯಾಷನಲ್ ವೈಲ್ಡ್ಲೈಫ್ ಆಕ್ಷನ್ ಪ್ಲಾನ್ ಅವಧಿಯಲ್ಲಿ ಈ ಚಾನೆಲ್ ಕಾರ್ಯದಲ್ಲಿರಲಿದೆ.
ನ್ಯಾಷನಲ್ ವೈಲ್ಡ್ಲೈಫ್ ಆಕ್ಷನ್ ಪ್ಲಾನ್ನನ್ನು ಪರಿಸರ ಸಚಿವಾಲಯ ಈ ತಿಂಗಳು ಅನಾವರಣಗೊಳಿಸಿತ್ತು. ಈ ವೇಳೆ ಪ್ರಕೃತಿಗಾಗಿ ಚಾನೆಲ್ ಆರಂಭಿಸುವ ಶಿಫಾರಸ್ಸು ಮಾಡಲಾಯಿತು. ಇದೀಗ ಪ್ರಸಾರ ಖಾತೆ ಸಚಿವಾಲಯದ ಜೊತೆಗೂಡಿ ಪರಿಸರ ಸಚಿವಾಲಯ ‘ಡಿಡಿ-ಪ್ರಕೃತಿ’ ಚಾನೆಲ್ ಆರಂಭಿಸುತ್ತಿದೆ.
ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಗೆ ಪರ್ಯಾಯವಾಗಿ ಭಾರತೀಯರು, ಭಾರತದಲ್ಲೇ ನಿರ್ಮಿಸಿದ ಪ್ರಕೃತಿಯ ಬಗೆಗಿನ ಸಿನಿಮಾ, ಡಾಕ್ಯುಮೆಂಟರಿ ಇಲ್ಲಿ ಪ್ರಸಾರವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.