ನವದೆಹಲಿ: ಭಾರತ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ಥಾನದೊಂದಿಗೆ ಶಾಂತಿ ಬಯಸುತ್ತಿದ್ದಾರೆ ಆದರೆ ತನ್ನ ದೇಶದ ಭದ್ರತೆಯನ್ನು ಕಡೆಗಣಿಸಿ ಅಲ್ಲ ಎಂದು ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತ ಹೇಳಿದೆ.
ನವದೆಹಲಿಯೊಂದಿಗೆ ಭರವಸೆಯನ್ನು ಮರುಸ್ಥಾಪನೆ ಮಾಡಿ ವಾಣಿಜ್ಯ ಬಾಂಧವ್ಯಗಳನ್ನು ಮರು ಆರಂಭಿಸಿದರೆ ಪಾಕ್ನ ಹಿತಾಸಕ್ತಿಗೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದೆ.
ಭಾರತ ಮತ್ತು ಪಾಕಿಸ್ಥಾನ ಮಾತುಕತೆ ನಡೆಸಲಿ ಎಂದು ನಾವು ಬಯಸುತ್ತೇವೆ. ಪರಸ್ಪರ ಭರವಸೆ ಹೊಂದುವುದು ಉಭಯ ದೇಶಗಳಿಗೆ ಅತ್ಯಗತ್ಯ. ಇದರಿಂದ ಪ್ರಾದೇಶಿಕ ಭದ್ರತೆಯಲ್ಲೂ ಸ್ಥಿರತೆ ಮೂಡುತ್ತದೆ ಎಂದಿದ್ದಾರೆ.