ನವದೆಹಲಿ: ಬೋಫೋರ್ಸ್ ಹಗರಣವನ್ನು ‘ಮಾಧ್ಯಮಗಳ ವಿಚಾರಣೆ’ ಎಂದು ಕರೆದಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಹೇಳಿಕೆ ಬಗ್ಗೆ ಪತ್ರಕರ್ತೆ ಚಿತ್ರ ಸುಬ್ರಹ್ಮಣ್ಯಂ ಆಘಾತ ವ್ಯಕ್ತಪಡಿಸಿದ್ದಾರೆ.
ಚಿತ್ರ ಸುಬ್ರಹ್ಮಣ್ಯ ಅವರು ಬೋಫೋರ್ಸ್ ಹಗರಣದ ಸುದ್ದಿಯನ್ನು ಮೊದಲು ಸ್ಫೋಟಿಸಿದ್ದ ಪತ್ರಕರ್ತೆಯಾಗಿದ್ದಾರೆ.
‘ರಾಷ್ಟ್ರಪತಿ ಹುದ್ದೆಯಲ್ಲಿರುವ ಪ್ರಣವ್ ಮುಖರ್ಜಿಯವರು ಈ ರೀತಿಯ ಹೇಳಿಕೆ ನೀಡಿದ್ದು ಆಘಾತ ತಂದಿದೆ. ಬೋಫೋರ್ಸ್ ಹಗರಣ ಮಾಧ್ಯಮ ವಿಚಾರಣೆ ಎಂದು ಅವರು ಹೇಳಿದ್ದು ಹಾಸ್ಯಾಸ್ಪದ, ಅವರಿಂದ ಈ ರೀತಿಯ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ’ ಎಂದು ಅವರು ಹೇಳಿದ್ದಾರೆ.
ಸ್ವೀಡಿಶ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಪ್ರಣವ್, ಭೋಪೋರ್ಸ್ ಹಗರಣ ಯಾವುದೇ ಭಾರತೀಯ ನ್ಯಾಯಾಲಯದಲ್ಲಿ ನಡೆದಿಲ್ಲ, ಅದೊಂದು ಕೇವಲ ಮಾಧ್ಯಮ ವಿಚಾರಣೆ ಎಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.