ಇರೋಡ್: ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸಲು ಬಯಸುವ ಅಭ್ಯರ್ಥಿಗಳಿಗಾಗಿ ಎಲ್ಲಾ ಜಿಲ್ಲೆಗಳಲ್ಲೂ ಕೋಚಿಂಗ್ ಅಕಾಡೆಮಿಗಳನ್ನು ತೆರೆಯಲು ತಮಿಳುನಾಡು ಸರ್ಕಾರ ಮುಂದಾಗಿದೆ.
‘ಒಟ್ಟು 32 ಜಿಲ್ಲೆಗಳಲ್ಲಿ ಐಎಎಸ್/ಐಪಿಎಸ್ ಪರೀಕ್ಷೆ ಬರೆಯಲು ಇಚ್ಛಿಸುವವರಿಗಾಗಿ ರಾಜ್ಯ ಶಿಕ್ಷಣ ಇಲಾಖೆ ಕೋಚಿಂಗ್ ಅಕಾಡೆಮಿಗಳನ್ನು ತೆರೆಯಲಿದೆ’ ಎಂದು ತಮಿಳುನಾಡು ಶಿಕ್ಷಣ ಸಚಿವ ಕೆ.ಎ.ಸೆಂಗೊತ್ತಯನ್ ತಿಳಿಸಿದ್ದಾರೆ.
ಬಡ ಮತ್ತು ಮಧ್ಯಮ ವರ್ಗದ ಯುವ ಜನತೆ ಐಎಎಸ್ನಂತಹ ಪರೀಕ್ಷೆ ಬರೆದು ಉತ್ತಮ ರ್ಯಾಂಕಿಂಗ್ ಪಡೆಯಲು ಈ ಕೋಚಿಂಗ್ ಅಕಾಡೆಮಿಗಳು ಸಹಕಾರಿಯಾಗಲಿದೆ.