×
Home About Us Advertise With s Contact Us

ಶಿಸ್ತುಪಾಲನ ಸಮಿತಿಯಿಂದ ಭೂಷಣ್‌ಗೆ ಗೇಟ್‌ಪಾಸ್

bhushanನವದೆಹಲಿ: ಅರವಿಂದ್ ಕೇಜ್ರಿವಾಲ್ ವಿರುದ್ಧ ಧ್ವನಿಯೆತ್ತಿದ ಪ್ರಶಾಂತ್ ಭೂಷಣ್ ಅವರನ್ನು ಎಎಪಿ ಪಕ್ಷದ ರಾಷ್ಟ್ರೀಯ ಶಿಸ್ತುಪಾಲನ ಸಮಿತಿಯಿಂದ ವಜಾ ಮಾಡಲಾಗಿದೆ. ಅಲ್ಲದೇ ಅಡ್ಮಿರಲ್ ರಾಮ್‌ದಾಸ್ ಅವರನ್ನು ಪಕ್ಷದ ಆಂತರಿಕ ಲೋಕಪಾಲದಿಂದ ವಜಾ ಮಾಡಲಾಗಿದೆ.

ರಾಮ್‌ದಾಸ್ ಕೂಡ ಈ ಹಿಂದೆ ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಭಾನುವಾರ ಕೇಜ್ರಿವಾಲ್ ನಿವಾಸದಲ್ಲಿ ಎಎಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆ ನಡೆದಿತ್ತು. ಇದರಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.

3 ಸದಸ್ಯರುಳ್ಳ ಶಿಸ್ತುಪಾಲನ ಸಮಿತಿಗೆ ಭೂಷಣ್ ಅವರ ಬದಲು ಆಶಿಶ್ ಕೇತನ್ ಅವರನ್ನು ಮತ್ತು ರಾಷ್ಟ್ರೀಯ ಕಾರ್ಯದರ್ಶಿಯಾಗಿ ಪಂಕಜ್ ಗುಪ್ತಾ ಅವರನ್ನು ನೇಮಕಗೊಳಿಸಲಾಗಿದೆ.

ಆಂತರಿಕ ಲೋಕಪಾಲಕ್ಕೆ ಮಾಜಿ ಐಪಿಎಸ್ ಅಧಿಕಾರಿ ಎಂ.ದಿಲೀಪ್ ಕುಮಾರ್, ರಾಕೇಶ್ ಸಿನ್ಹಾ, ಶಿಕ್ಷಣತಜ್ಞ ಎಸ್‌ಪಿ ವರ್ಮಾ ಅವರನ್ನು ನೇಮಕ ಮಾಡಲಾಗಿದೆ.

ಒಟ್ಟಿನಲ್ಲಿ ಎಎಪಿ ತನ್ನ ಭಿನ್ನಮತೀಯ ನಾಯಕರನ್ನು ಒಂದೊಂದೆ ಸ್ಥಾನದಿಂದ ಕಿತ್ತು ಹಾಕುತ್ತಾ ಬರುತ್ತಿದೆ. ಈ ಮೂಲಕ ನಾಯಕತ್ವವನ್ನು ಪ್ರಶ್ನಿಸುವವರಿಗೆ ತನ್ನ ಪಕ್ಷದಲ್ಲಿ ಸ್ಥಾನವಿಲ್ಲ ಎಂಬುದನ್ನು ಖಚಿತಪಡಿಸಿದೆ.

 

Recent News

Back To Top
error: Content is protected !!