ವಾಷಿಂಗ್ಟನ್: ಅಮೆರಿಕಾದಲ್ಲಿ ಭಾರತದ ಬಗ್ಗೆ ಸಕರಾತ್ಮಕ ಭಾವನೆಯಿದೆ. ಅಲ್ಲದೇ ಆರ್ಥಿಕ ವಿಸ್ತರಣೆ ಮತ್ತು ಭವಿಷ್ಯದ ಸಂಭಾವ್ಯತೆಯ ಬಗ್ಗೆ ನಮ್ಮ ಸರ್ಕಾರ ತೆಗೆದುಕೊಂಡಿರುವ ಸುಧಾರಣೆಗಳ ಬಗ್ಗೆ ಇಲ್ಲಿನ ಹೂಡಿಕೆದಾರರಿಗೆ ಸ್ಪಷ್ಟ ಜ್ಞಾನವಿದೆ ಎಂದು ಯುಎಸ್ ಪ್ರವಾಸದಲ್ಲಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಇಂಟರ್ನ್ಯಾಷನಲ್ ಮಾನಿಟರ್ ಫಂಡ್ ಮತ್ತು ವಿಶ್ವಬ್ಯಾಂಕ್ನ ವಾರ್ಷಿಕ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಜೇಟ್ಲಿ ಉನ್ನತ ನಿಯೋಗದೊಂದಿಗೆ ವಾರಗಳ ಯುಎಸ್ ಪ್ರವಾಸ ಕೈಗೊಂಡಿದ್ದಾರೆ.
ಈಗಾಗಲೇ ಅವರು ನ್ಯೂಯಾರ್ಕ್ ಮತ್ತು ಬೋಸ್ಟನ್ಗೆ ತೆರಳಿ ಹೂಡಿಕೆದಾರರೊಂದಿಗೆ ಸಭೆ ನಡೆಸಿದ್ದಾರೆ.
ಹೂಡಿಕೆದಾರರಿಗೆ ಭಾರತದ ಮೇಲೆ ಭರವಸೆ ಇದೆ ಎಂಬ ಅಭಿಪ್ರಾಯವನ್ನು ಜೇಟ್ಲಿ ವ್ಯಕ್ತಪಡಿಸಿದ್ದಾರೆ.