×
Home About Us Advertise With s Contact Us

ಮಹಿಳೆಗೆ ಬಾಹುಬಲಿ-2 ಸಿನಿಮಾ ತೋರಿಸಿ ಬ್ರೈನ್ ಸರ್ಜರಿ ಮಾಡಿದ ವೈದ್ಯರು

ಗುಂಟೂರು: ಶಸ್ತ್ರಚಿಕಿತ್ಸೆಗೆ ಒಳಪಡುವುದು ಯಾವುದೇ ರೋಗಿಗೂ ಅತ್ಯಂತ ಕಠಿಣ ಸವಾಲಾಗಿರುತ್ತದೆ. ಅದರಲ್ಲೂ ಬ್ರೈನ್,ಹಾರ್ಟ್‌ನಂತಹ ಸರ್ಜರಿಗಳು ಅತ್ಯಂತ ಸೂಕ್ಷ್ಮ ವೈದ್ಯಕೀಯ ಕ್ರಮವಾಗಿದ್ದು, ಈ ವೇಳೆ ರೋಗಿ ಧೈರ್ಯವಾಗಿರುಬೇಕಾದುದು ಅತ್ಯಂತ ಅಗತ್ಯ.

ಆಂಧ್ರದ ಗುಂಟೂರಿ ತುಳಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಮಹಿಳೆಯೊಬ್ಬರಿಗೆ ಬ್ರೈನ್ ಸರ್ಜರಿ ಮಾಡುವ ಸಂದರ್ಭ ಲ್ಯಾಪ್‌ಟಾಪ್‌ನಲ್ಲಿ ‘ಬಾಹುಬಲಿ-2’ ಸಿನಿಮಾದ ಸ್ಕ್ರೀನಿಂಗ್ ಮಾಡಿದ್ದಾರೆ.

ಸರ್ಜರಿ ನಡೆಸಬೇಕಾದ ನಿಖರ ಜಾಗವನ್ನು ಪತ್ತೆ ಮಾಡುವುದು ವೈದ್ಯರಿಗೆ ಸವಾಲಾಗಿತ್ತು. ತುಸು ಹೆಚ್ಚುಕಮ್ಮಿಯಾದರೂ ರೋಗಿಯ ದೃಷ್ಟಿ, ವಾಕ್ ಮತ್ತು ಚಲನ ಕ್ರಿಯೆಗೆ ಪೆಟ್ಟಾಗುವ ಸಂಭವವಿತ್ತು. ಹೀಗಾಗೀ ರೋಗಿಯನ್ನು ಎಚ್ಚರವಾಗಿಡುವುದು ಅಗತ್ಯವಾಗಿತ್ತು. ಹೀಗಾಗೀಯೇ ಆಕೆಗೆ ಬಾಹುಬಲಿ ಸಿನಿಮಾವನ್ನು ಸರ್ಜರಿಯ ವೇಳೆ ತೋರಿಸಲಾಯಿತು.

ಆಕೆ ಸಿನಿಮಾ ನೋಡುತ್ತಾ ಅದನ್ನು ಎಂಜಾಯ್ ಮಾಡುತ್ತಿದ್ದಳು, ತುಸುವೂ ಧೃತಿಗೆಡಲಿಲ್ಲ, ಹೀಗಾಗೀ ಸರ್ಜರಿ ನಡೆಸುವುದು ಸುಲಭವಾಯಿತು ಎಂದು ವೈದ್ಯರು ಹೇಳುತ್ತಾರೆ. ಸೆ.21ರಂದು ಸರ್ಜರಿ ನಡೆಸಲಾಗಿದೆ.

ವಿನಯ ಎಂಬ ನರ್ಸ್ ಸರ್ಜರಿಗೊಳಗಾಗಿದ್ದು, ಆಕೆಗೆ ಫಿಟ್ಸ್ ಇತ್ತು. ತದನಂತರ ಬ್ರೈನ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು. ಇದೀಗ ಆಕೆ ಚೇತರಿಸಿಕೊಂಡಿದ್ದಾರೆ. ಈ ಸರ್ಜರಿಗೆ ವೈದ್ಯರು ’ಬಾಹುಬಲಿ ಬ್ರೈನ್ ಸರ್ಜರಿ’ ಎಂದು ಹೆಸರಿಟ್ಟಿದ್ದಾರೆ.

 

Recent News

Back To Top
error: Content is protected !!