ಬಂಟ್ವಾಳ : ಮಂದಿರ ಬೆಳಗಿದೆರೆ ಮನೆ, ಮನ ಬೆಳಗಿದಂತೆ. ಶ್ರದ್ಧಾಕೇಂದ್ರಗಳ ಬಳಿ ಹೈ ಮಾಸ್ಕ್ ದೀಪ ಅಳವಡಿಸುವುದರಿಂದ ಭದ್ರತೆ ಹೆಚ್ಚುತ್ತದೆ. ಯಾವುದೇ ಸಮಯದಲ್ಲಿ ನಿರ್ಭೀತಿಯಿಂದ ಮಂದಿರಗಳಿಗೆ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿಯವರು ಪುದು ಗ್ರಾಮದ ಹೊಗೆಗದ್ದೆ ಶ್ರೀ ರಾಮ ಭಜನಾ ಮಂದಿರದ ಬಳಿ ಹೈಮಾಸ್ಕ್ ದೀಪವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ, ಉಪಾಧ್ಯಕ್ಷೆ ಜಯಶ್ರೀ, ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ದಿನೇಶ್ ಆರ್ ಶೆಟ್ಟಿ ಕೊಟ್ಟಿಂಜ, ಹಿರಿಯರಾದ ಸುಬ್ರಹ್ಮಣ್ಯ ರಾವ್, ಸ್ಥಳೀಯ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ವಸಂತಿ ಶೆಟ್ಟಿ, ಜಗದೀಶ್ ನೆತ್ತರಕೆರೆ, ದಯಾನಂದ ಕಾಪಿಕಾಡು, ಮಂದಿರದ ಮುಖ್ಯಸ್ಥರಾದ ಶಂಕರ ಭಟ್ ಹೊಗೆಗದ್ದೆ, ಸ್ಥಳೀಯರಾದ ರಮೇಶ್ ಬಂಗೇರ, ಜಲಂದರ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.